Kannada News: ಪ್ರೀತಿಸಿ ಮದುವೆಯಾಗಿ ಎಂಟು ವರ್ಷ ಸಂಸಾರ ಮಾಡಿದಳು: ಆದರೆ ವ್ಯಾಪಾರದ ಮೇಲೆ ಆಸೆ ಜಾಸ್ತಿ ಆಗಿ ಏನು ಮಾಡಿದ್ದಾಳೆ ಗೊತ್ತೇ??
Kannada News: ಪತ್ನಿಯರು ತಮ್ಮ ಗಂಡನ ಕಥೆಯನ್ನೇ ಮುಗಿಸಿ ಬಿಡುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಾಗ, ಅದಕ್ಕೆ ಗಂಡ ಅಡ್ಡಿಯಾಗಿದ್ದಾನೆ ಎಂದು ಮುಗಿಸಿರುವುದನ್ನು ನೋಡಿದ್ದೇವೆ, ಇನ್ನಿ ಹಲವು ಅಕ್ರಮ ಸಂಬಂಧಗಳ ಕಾರಣಕ್ಕೆ ಹೆಂಡತಿಯೇ ಗಂಡನನ್ನು ಮುಗಿಸಿರುವ ಉದಾಹರಣೆ ಇದೆ. ಆದರೆ ಇಲ್ಲೊಬ್ಬ ಪತ್ನಿ, ತನ್ನ ತಂದೆಯ ಜೊತೆಗೆ ಸೇರಿಕೊಂಡು ಗಂಡನನ್ನು ಆ ಒಂದು ಕಾರಣಕ್ಕೆ ಮುಗಿಸಿಯೇ ಬಿಟ್ಟಿದ್ದಾಳೆ. ಮಗಳನ್ನು ಅನಾಥವಾಗಿ ಮಾಡಿದ್ದಾಳೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ವಿಶಾಖ ಜಿಲ್ಲೆಯಲ್ಲಿ. ಚಿವುಕುಚಿಂತ ಎನ್ನುವ ಗ್ರಾಮದ ಹರಿ ವಿಜಯ್ ಎನ್ನುವ ಗ್ರಾಮದ ಹುಡುಗ ಹರಿ ವಿಜಯ್, ನೆರೆದುವಲಸದ ಗ್ರಾಮದ ಪ್ರೀತಿ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇಬ್ಬರು ಕೂಡ ಎಂಟು ವರ್ಷಗಳ ಹಿಂದೆ ಮದುವೆ ಕೂಡ ಆದರು. ಇಬ್ಬರ ತಂದೆ ತಾಯಿ ಒಪ್ಪಿಸಿ ಮದುವೆಯಾಗಿದ್ದರು. ಆದರೆ ಕೆಲವು ಕಾರಣಗಳಿಂದ ಪ್ರೀತಿ ತಂದೆ ಶಂಕರ್ ರಾವ್ ಸಹ ಇವರ ಜೊತೆಯಲ್ಲೇ ಇರುತ್ತಾರೆ. ಹರಿ ವಿಜಯ್ ಫೈನಾನ್ಸ್ ಬ್ಯುಸಿನೆಸ್ ಮಾಡುತ್ತಿದ್ದರು. ಪ್ರೀತಿ ಕೂಡ ಕೆಲ ವರ್ಷಗಳ ನಂತರ ಗಂಡನ ಜೊತೆಗೆ ಬ್ಯುಸಿನೆಸ್ ಗೆ ಕಾಲಿಟ್ಟು, ಇಬ್ಬರು ಸೇರಿ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ ಕೆಲ ವರ್ಷಗಳ ನಂತರ ಇವರ ಬ್ಯುಸಿನೆಸ್ ನಲ್ಲಿ ಲಾಸ್ ಆಗುವುದಕ್ಕೆ ಶುರುವಾಯಿತು.
ಇದರಿಂದ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿ, ದಿನೇ ದಿನೇ ಜಗಳ ಹೆಚ್ಚಾಗುತ್ತಲೇ ಹೋಗಿದೆ. ಅದರಿಂದ ಆಕೆ ಗಂಡನನ್ನು ಮುಗಿಸಿಬಿಟ್ಟರೆ ತಾನೊಬ್ಬಳೇ ಬ್ಯುಸಿನೆಸ್ ನೋಡಿಕೊಳ್ಳಬಹುದು ಎಂದು ಗಂಡನನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ತಂದೆ ಜೊತೆ ಸೇರಿ ಪ್ಲಾನ್ ಮಾಡುತ್ತಾಳೆ. ಮನೆಯಲ್ಲಿ ಪಾರ್ಟಿ ಅರೇಂಜ್ ಮಾಡಿ, ಗಂಡನಿಗೆ ಚೆನ್ನಾಗಿ ಕುಡಿಸಿ, ದಿಂಬಿನಲ್ಲಿ ಕತ್ತು ಹಿಸುಕಿ ಮುಗಿಸಿದ್ದಾಳೆ. ನಂತರ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಕುಡಿದ ಮತ್ತಿನಲ್ಲಿ ಹಾರ್ಟ್ ಅಟ್ಯಾಕ್ ಆಗಿ ಕೋಮಾಗೆ ಹೋಗಿದ್ದಾರೆ ಎಂದು ತಿಳಿಸಿದ್ದಾಳೆ. ಅಷ್ಟರಲ್ಲಾಗಲೇ ಹರಿ ವಿಜಯ್ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಗ ಪ್ರೀತಿ ಅಲ್ಲೇ ಅಳುವುದಕ್ಕೆ ಶುರು ಮಾಡಿದ್ದು..
ಆಕೆಯ ವರ್ತನೆ ನೋಡಿ ಡಾಕ್ಟರ್ ಗೆ ಅನುಮಾನ ಶುರುವಾಗಿದೆ. ತಕ್ಷಣವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿರುವುದರಿಂದ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆಕೆಯನ್ನು ಸರಿಯಾಗಿ ವಿಚಾರಿಸಿದಾಗ, ತಂದೆ ಜೊತೆಗೆ ಸೇರಿ ತಾನೇ ಹೀಗೆ ಮಾಡಿರುವುದಾಗಿ ತಿಳಿಸಿದ್ದಾಳೆ. ನಂತರ ಪ್ರೀತಿ, ಆಕೆಯ ತಂದೆ ಹಾಗೂ ಇನ್ನು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಅವರ ಮಗು ಯಾರು ಇಲ್ಲದೆ ಅನಾಥವಾಗಿದೆ.