Aishwarya Rai: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಪೊನ್ನಿಯನ್ ಸಿಲ್ವಮ್ ಚಿತ್ರಕ್ಕೆ ಐಶ್ವರ್ಯ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?
Aishwarya Rai: ತಮಿಳುನಾಡಿನ ಇತಿಹಾಸ ಸಾರುವ ಕಲ್ಕಿ ಅವರು 70 ವರ್ಷಗಳ ಹಿಂದೆ ಬರೆದ ಪೊನ್ನಿಯಿನ್ ಸೆಲ್ವನ್ (Ponniyin Selvan) ಕಾದಂಬರಿಯನ್ನು ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಅವರು ಸಿನಿಮಾ ಮಾಡಿದರು. ಈ ಸಿನಿಮಾ ಎರಡು ಭಾಗಗಳಾಗಿ ತೆರೆಕಂಡಿದೆ. ಮೊದಲ ಭಾಗ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ತೆರೆಕಂಡರೆ, ಎರಡನೇ ಭಾಗ ಈ ವರ್ಷ ಏಪ್ರಿಲ್ 28ರಂದು ತೆರೆಕಂಡಿತು. ಈಗಾಗಲೇ ಈ ಸಿನಿಮಾ 100ಕೋಟಿ ಕ್ಲಬ್ ಸೇರಿದೆ.
ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದ್ದು, ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ 50 ಕೋಟಿ ಗಳಿಸಿ, ಮೂರನೇ ದಿನ 30ಕೋಟಿ ಗಳಿಸಿ, ಒಟ್ಟಾರೆಯಾಗಿ ಭಾರತದಲ್ಲಿ 80 ಕೋಟಿ ಗಳಿಸಿ, ಜಾಗತಿಕವಾಗಿ ₹100 ಕೋಟಿ ಗಳಿಸಿದ ಸಿನಿಮಾ ಇಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಟಿ ಐಶ್ವರ್ಯ ರೈ (Aishwarya Rai), ನಟ ವಿಕ್ರಂ (Vikram), ತ್ರಿಷಾ (Trisha), ಕಾರ್ತಿ (Karthi), ಜಯಂ ರವಿ (Jayam Ravi), ಐಶ್ವರ್ಯ ಲಕ್ಷ್ಮಿ (Aishwarya Lekshmi), ಶೋಭಿತ ಧುಲಿಪಾಲ (Shobhitha Dhulipala), ನಟ ಪ್ರಕಾಶ್ ರಾಜ್ (Prakash Raj) ಸೇರಿದಂತೆ ದೊಡ್ಡ ತಾರಾಬಳಗ ಇದೆ.
ಇದು ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಐಶ್ವರ್ಯ ರೈ ಅವರು ಬಹಳಷ್ಟು ವರ್ಷಗಳ ನಂತರ ದಕ್ಷಿಣ ಭಾರತಕ್ಕೆ ಕಂಬ್ಯಾಕ್ ಮಾಡಿದ್ದಾರೆ. ನಂದಿನಿ ಮತ್ತು ಮಂದಾಕಿನಿ ಡ್ಯುಯೆಲ್ ರೋಲ್ ನಲ್ಲಿ ಐಶ್ವರ್ಯ ರೈ ಅವರು ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರೈ ಅವರ ಪಾತ್ರ ಹಾಗೂ ನಟನೆಗೆ ಎಲ್ಲರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಮತ್ತೊಬ್ಬರನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಸಿನಿಪ್ರಿಯರು.
ಅತ್ಯಂತ ಸುಂದರವಾದ ಹುಡುಗಿಯ ಪಾತ್ರ ನಂದಿನಿ, ಚೋಳ ನಾಡಿನ ರಾಜರ ವಿರುದ್ಧ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಬೆರಗುಗೊಳಿಸಿ ಪ್ಲಾನ್ ಮಾಡುವ ಪಾತ್ರವಿದು. ಆದರೆ ಕಥೆಯಲ್ಲಿ ಬಹಳ ಪಾಪ ಎನ್ನಿಸುಗ ಪಾತ್ರ ಕೂಡ ಇದೇ.. ಈ ಪಾತ್ರಕ್ಕಾಗಿ ಐಶ್ವರ್ಯ ಅವರು ಪಡೆದ ಸಂಭಾವನೆ ಎಷ್ಟು ಎಂದು ಈಗ ಚರ್ಚೆಯಾಗುತ್ತಿದೆ. ಅಧಿಕೃತವಾಗಿ ಘೋಷಣೆ ಮಾಡದೆ ಇದ್ದರು ಸಹ, ಐಶ್ವರ್ಯ ರೈ ಅವರು ₹10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗೂ ನಟ ವಿಕ್ರಂ ಅವರು ₹12ಕೋಟಿ ಸಂಭಾವನೆ ಪಡೆದಿದ್ದಾರಂತೆ.
Comments are closed.