Samyuktha: ಸೌಂದರ್ಯ ನೋಟದಲ್ಲಿ ಅಷ್ಟೇ ಅಲ್ಲ, ಈಕೆಯ ಮನಸಿನಲ್ಲಿಯೂ ಇದೆ. ಕಷ್ಟದಲ್ಲಿ ಇರುವ ಕಾಲೇಜು ಮಕ್ಕಳಿಗೆ ನಟಿ ಸಂಯುಕ್ತ ಮಾಡಿದ್ದೇನು ಗೊತ್ತೆ?
Samyuktha: ನಟಿ ಸಂಯುಕ್ತ ಮೆನನ್ (Samyukta Menon) ಅವರು ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ಹೀರೊಯಿನ್ ಆಗಿದ್ದಾರೆ. ಮಲಯಾಳಂ ಬ್ಯೂಟಿ ಆಗಿರುವ ಸಂಯುಕ್ತ ಹೆಗ್ಡೆ ಇಂದು ತೆಲುಗು ಮತ್ತು ತಮಿಳಿನಲ್ಲಿ ಸಹ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇವರನ್ನು ಗೋಲ್ಡನ್ ಲೆಗ್ ಎಂದು ಕರೆಯಲಾಗುತ್ತಿದೆ. ಸಂಯುಕ್ತ ಮೆನನ್ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟ ರಾಣಾ ಅವರ ಪತ್ನಿಯ ಪಾತ್ರದಲ್ಲಿ.
ಬಳಿಕ ಬಿಂಬಿಸಾರ (Bimbisara) ಹಾಗೂ ನಟ ಧನುಷ್ (Dhanush) ಅವರ ಜೊತೆಗೆ ಜೊತೆಗೆ ವಾತಿ ಸಿನಿಮಾದಲ್ಲಿ ನಟಿಸಿದರು. ಈ ಯಶಸ್ಸಿನ ನಂತರ ಸಂಯುಕ್ತ ಮೆನನ್ ಅವರು ತೆಲುಗಿನಲ್ಲಿ ವಿರೂಪಾಕ್ಷ (Virupaksha) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹೀರೋ ಸಾಯಿ ಧರಂ ತೇಜ್ (Sai Dharam Tej) ಅವರು. ಏಪ್ರಿಲ್ 21ರಂದು ವಿರೂಪಾಕ್ಷ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಉತ್ತಮವಾಗಿ ಹಣಗಳಿಕೆ ಮಾಡುತ್ತಾ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ.
ಈ ಸಿನಿಮಾ ಪ್ರೊಮೋಷನ್ ಗಾಗಿ ಸಂಯುಕ್ತ ಅವರು ಚಿತ್ರತಂಡದ ಜೊತೆಗೆ ತೆಲುಗಿನ ಸಿಕ್ಸ್ತ್ ಸೆನ್ಸ್ ರಿಯಾಲಿಟಿ ಶೋಗೆ ಬಂದಿದ್ದರು. ಆ ಶೋನಲ್ಲಿ ಒಂದು ಸ್ಕೂಟಿಯನ್ನು ಸಹ ಗೆದ್ದರು. ಆ ಸ್ಕೂಟಿಯನ್ನು ಆಡಿಯನ್ಸ್ ಪೈಕಿ ಒಬ್ಬರಿಗೆ ಕೊಡಬೇಕು ಎಂದು ನಿರ್ಧಾರ ಮಾಡಿ, ಯಾರಿಗೆ ಕೊಡುವುದು ಎಂದು ಡಿಸೈಡ್ ಮಾಡಲು ಸಂಯುಕ್ತ ಅವರು ಎರಡು ಪ್ರಶ್ನೆ ಕೇಳಿದರು, ಎರಡು ಬಸ್ ಹತ್ತಿಕೊಂಡು ಯಾರೆಲ್ಲಾ ಕಾಲೇಜ್ ಗೆ ಬರುತ್ತೀರಾ ಎಂದು ಕೇಳಿದರು, ಅದಕ್ಕೆ ಒಂದಷ್ಟು ಜನ ಕೈ ಎತ್ತಿದರು, ಅವರ ಪೈಕಿ ಸಿಂಗಲ್ ಪೇರೆಂಟ್ಸ್ ಇರೋರು ಯಾರು ಎಂದು ಕೇಳಿದಾಗ ಇಬ್ಬರು ಹುಡುಗಿಯರು ಕೈ ಎತ್ತಿದರು.
ಅವರಿಬ್ಬರನ್ನು ಸ್ಟೇಜ್ ಮೇಲೆ ಕರೆಸಲಾಯಿತು. ಇಬ್ಬರ ಬಗ್ಗೆಯೂ ಕೇಳಿ, ಇಬ್ಬರಲ್ಲಿ ಆ ಸ್ಕೂಟಿ ಕೊಡಲು ಒಬ್ಬ ಹುಡುಗಿಯನ್ನು ಆಯ್ಕೆ ಮಾಡಲಾಯಿತು. ಅಲ್ಲಿದ್ದ ಮತ್ತೊಬ್ಬ ಹುಡುಗಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸಿನಿಂದ ಸಂಯುಕ್ತ ಆ ಹುಡುಗಿಗೆ ತಾವು ಸ್ಕೂಟಿ ಕೊಡಿಸುವುದಾಗಿ ಪ್ರಾಮಿಸ್ ಮಾಡಿದ್ದಾರೆ. ಇದೀಗ ಈ ಶೋ ವಿಡಿಯೋ ವೈರಲ್ ಆಗುತ್ತಿದ್ದು, ಸಂಯುಕ್ತ ಅವರಿಗೆ ಎಷ್ಟು ಒಳ್ಳೆಯ ಮನಸ್ಸು ಎಂದು ನೆಟ್ಟಿಗರು ಆಕೆಯನ್ನು ಹೊಗಳುತ್ತಿದ್ದಾರೆ.
Very smart & kind hearted woman @iamsamyuktha_ take a bow 🙇♂️ 👏#Virupaksha #Samyukthamenon pic.twitter.com/K8ZT3lqghq
— 🦁 (@CM_Lokeshh) May 1, 2023
Comments are closed.