Chetan Ahimsa: ಕಾಂಗ್ರೆಸ್ ನೀತಿ ವಿರುದ್ಧ ನಿಂತ ಚೇತನ್ ಅಹಿಂಸಾ: ಕೇರಳ ಸ್ಟೋರಿ ಚಿತ್ರದ ಕುರಿತು ಹೇಳಿದ್ದೇನು ಗೊತ್ತೇ?? ಶಾಕ್ ಆದ ನೆಟ್ಟಿಗರು.
Chetan Ahimsa: ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾದ ಚೇತನ್ ಅಹಿಂಸಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚೇತನ್ ಅವರು ಹೊರದೇಶದಲ್ಲಿ ಹುಟ್ಟಿ ಬೆಳೆದವರು. ನಂತರ ಭಾರತಕ್ಕೆ ಆ ದಿನಗಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು. ಕೆಲವು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದರು ಸಹ, ಚೇತನ್ ಅಹಿಂಸಾ ಅವರು ಸ್ಟಾರ್ ಹೀರೋ ಪಟ್ಟಕ್ಕೆ ಏರಲಿಲ್ಲ.
ಚೇತನ್ ಅವರು ಸಿನಿಮಾಗಿಂತ ಹೆಚ್ಚಾಗಿ, ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು, ಸಮಾಜದಲ್ಲಿ ನಡೆಯುವ ಹಲವು ವಿಚಾರಗಳ ಬಗ್ಗೆ ಆಗಾಗ ಪ್ರತಿಕ್ರಿಯೆ ನೀಡಿ ಸುದ್ದಿಯಾಗುತ್ತಾರೆ. ಹಲವು ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿ, ಜನರ ಕೆಂಗಣ್ಣಿಗೆ ಗುರಿಯಾಗುವ ಅನೇಕ ಘಟನೆಗಳು ಸಹ ನಡೆದಿದೆ. ಇದೀಗ ನಟ ಚೇತನ್ ಅವರು ಈ ಶುಕ್ರವಾರ ಬಿಡುಗಡೆ ಆಗಲಿರುವ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿ, ನಟ ಅದಾ ಶರ್ಮ (Adah Sharma) ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕೇರಳದಲ್ಲಿ ಇದ್ದಕ್ಕಿದ್ದ ಹಾಗೆ ಕಾಣೆಯಾಗಿದ್ದ ಹಿಂದೂ ಹೆಣ್ಣುಮಕ್ಕಳ ಕಥೆ ಆಗಿದೆ. ಅಮಾಯಕ ಹಿಂದೂ ಹುಡುಗಿಯರನ್ನು ಮತಾಂತರ ವಾಗಲು ಪ್ರೇರೇಪಿಸಿ, ನಂತರ ಐಸಿಸಿ ಭಯೋತ್ಪಾದರನ್ನಾಗಿ ಮಾಡುವ ಕಥೆ ಈ ಸಿನಿಮದಲ್ಲಿದೆ. ಹಿಂದಿಯಲ್ಲಿ ತಯಾರಾಗಿ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುವುದಕ್ಕೆ ತಯಾರಾಗಿದ್ದು, ಕಾಂಗ್ರೆಸ್ ಪಕ್ಷ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಇದು ಜಾತಿಗಳ ನಡುವೆ ಜಗಳ ತರುವಂಥ ಸಿನಿಮಾ, ಈ ಸಿನಿಮಾ ಬ್ಯಾನ್ ಆಗಬೇಕು ಎಂದು ಕಾಂಗ್ರೆಸ್ ಹೇಳುತ್ತಿದೆ.
ಆದರೆ ನಟ ಚೇತನ್ ಅವರು ಈ ವಿಚಾರದ ಬಗ್ಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. “ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ ಮೇ 5 ರಂದು ತೆರೆಗೆ ಬರಲಿದೆ. ನಾನು ಈ ಹಿಂದೆ ಸಮುದಾಯದ/ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ..” ಎಂದು ಟ್ವೀಟ್ ಮಾಡಿದ್ದಾರೆ ನಟ ಚೇತನ್.
Comments are closed.