Lakshmi Pranathi: ಉಪಾಸನಾ ರವರಿಗೆ ಜನ್ಮದಲ್ಲಿ ಮರೆಯಲು ಆಗದಂತಹ ಗಿಫ್ಟ್ ಕೊಟ್ಟ ಎನ್ಟಿಆರ್ ಪತ್ನಿ. ಸಾವಿರಾರು ಕೋಟಿ ಒಡತಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ??
Lakshmi Pranathi: ಈಗ ಟಾಲಿವುಡ್ (Tollywood) ನಲ್ಲಿ ಹೆಚ್ಚಾಗಿ ಉಪಾಸನಾ ಕೊನಿಡೇಲಾ (Upasana Konidela) ಅವರ ಬಗ್ಗೆ ಸುದ್ದಿಗಳು ಕೇಳಿಬರುತ್ತಿದೆ. ಏಕೆಂದರೆ ಉಪಾಸನಾ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲಿದ್ದಾರೆ. ರಾಮ್ ಚರಣ್ (Ram Charan) ಹಾಗೂ ಉಪಾಸನಾ ದಂಪತಿ ಮದುವೆಯಾಗಿ 10 ವರ್ಷಗಳ ನಂತರ ಈಗ ಉಪಾಸನಾ ಅವರು ಗರ್ಭಿಣಿ ಆಗಿದ್ದು, ಇಡೀ ಚಿರಂಜೀವಿ (Chiranjeevi) ಅವರ ಕುಟುಂಬ ಬಹಳ ಸಂತೋಷ ದಲ್ಲಿದೆ. ಮೆಗಾ ಫ್ಯಾಮಿಲಿಯಲ್ಲಿ ಸಂಭ್ರಮ ಮನೆಮಾಡಿದೆ.

ರಾಮ್ ಚರಣ್ ಹಾಗೂ ಉಪಾಸನಾ ದಂಪತಿಯ ಮಗುವನ್ನು ಬರಮಾಡಿಕೊಳ್ಳಲು ಇಡೀ ಮೆಗಾ ಫ್ಯಾಮಿಲಿ ಕಾಯುತ್ತಿದೆ. ಇತ್ತೀಚೆಗೆ ಉಪಾಸನಾ ಅವರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಬಂದಿದ್ದರು. ಚಿತ್ರರಂಗದವರು ಹಾಗೂ ಮೆಗಾ ಫ್ಯಾಮಿಲಿಯ ಆಪ್ತರು ಕಾರ್ಯಕ್ರಮಕ್ಕೆ ಬಂದು ಉಪಾಸನಾ ಅವರಿಗೆ ವಿಶ್ ಮಾಡಿದರು. ಈ ಕಾರ್ಯಕ್ರಮಕ್ಕೆ ನಟ ಜ್ಯೂನಿಯರ್ ಎನ್ಟಿಆರ್ (Jr NTR) ಹಾಗೂ ಅವರ ಪತ್ನಿ ಲಕ್ಷ್ಮಿ ಪ್ರಣತಿ (Lakshmi Pranathi) ಸಹ ಬಂದಿದ್ದರು.
ಆರ್.ಆರ್.ಆರ್ (RRR) ಸಿನಿಮಾಗಿಂತ ಮೊದಲೇ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಅದೇ ಸ್ನೇಹ ಈಗ ಮುಂದುವರೆದಿದೆ, ಉಪಾಸನಾ ಹಾಗೂ ಲಕ್ಷ್ಮಿ ಪ್ರಣತಿ ಅವರು ಕೂಡ ಒಳ್ಳೆಯ ಸ್ನೇಹಿತರಾಗಿದ್ದು, ಲಕ್ಷ್ಮಿ ಪ್ರಣತಿ ಅವರು ಉಪಾಸನಾ ಅವರಿಗಾಗಿ ಸ್ಪೆಷಲ್ ಆಗಿ ಸ್ವೀಟ್ ಮಾಡಿಕೊಟ್ಟಿದ್ದಾರೆ. ಲಕ್ಷ್ಮಿ ಪ್ರಣತಿ ಅವರು ಬಹಳ ಚೆನ್ನಾಗಿ ಸ್ವೀಟ್ಸ್ ಮಾಡುತ್ತಾರೆ, ಉಪಾಸನಾ ಅವರಿಗು ಕೂಡ ಲಕ್ಷ್ಮಿ ಪ್ರಣತಿ ಅವರು ಮಾಡುವ ಸ್ವೀಟ್ಸ್ ಅಂದ್ರೆ ತುಂಬಾ ಇಷ್ಟ.
ಹಾಗಾಗಿ ಪ್ರಣತಿ ಅವರು ಉಪಾಸನಾ ಅವರಿಗೋಸ್ಕರ ಸ್ಪೆಷಲ್ ಸ್ವೀಟ್ಸ್ ಮಾಡಿದ್ದಾರೆ. ಡ್ರೈ ಫ್ರೂಟ್ಸ್ ಇಂದ ಎರಡು ರೀತಿಯ ಸ್ಪೆಷಲ್ ಸ್ವೀಟ್ಸ್ ಗಳನ್ನು ಲಕ್ಷ್ಮೀ ಪ್ರಣತಿ ಅವರು ಮಾಡಿದ್ದು, ಅದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ, ಇದಕ್ಕೆ ಉಪಾಸನಾ ಅವರು ಬಹಳ ಸಂತೋಷದಿಂದ ಧನ್ಯವಾದ ತಿಳಿಸಿದ್ದಾರೆ. ಇವರ ಸ್ನೇಹ ಹಾಗೂ ಲಕ್ಷ್ಮೀ ಪ್ರಣತಿ ಅವರು ಅಷ್ಟು ಪ್ರೀತಿಯಿಂದ ಮಾಡಿರುವ ಸ್ವೀಟ್ಸ್ ಬಗ್ಗೆ ಈಗ ನೆಟ್ಟಿಗರು ಸಹ ಮೆಚ್ಚುಗೆ ಸೂಚಿಸಿದ್ದಾರೆ.