Sanya Iyer: ಬಾಲಿವುಡ್ ನಟಿಯರನ್ನು ಮೀರಿಸುವಂತೆ ಫೋಟೋಗಳನ್ನು ಹರಿಬಿಟ್ಟ ಸಾನ್ಯ ಐಯ್ಯರ್: ಹುಡುಗರು ಫಿದಾ ಆದ ಫೋಟೋಗಳು ಹೇಗಿವೆ ಗೊತ್ತೇ?
Sanya Iyer: ಬಿಗ್ ಬಾಸ್ ಶೋ ಇಂದ ಹೆಚ್ಚು ಫೇಮಸ್ ಆದವರು ಸಾನ್ಯಾ ಅಯ್ಯರ್. ಇವರು ಮೂಲತಃ ಕಲೆಯ ಕುಟುಂಬದವರೆ ಆಗಿದ್ದಾರೆ. ಸಾನ್ಯ ತಾಯಿ, ಚಿಕ್ಕಮ್ಮ ಇಬ್ಬರು ಕಲಾವಿದೆಯರು. ಇತ್ತ ಸಾನ್ಯ ಕೂಡ ಬಾಲನಟಿಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟಗೌರಿ ಪಾತ್ರದಲ್ಲಿ ನಟಿಸಿ ಜನರ ಪರಿಚಿತವಾಗಿದ್ದರು.
ಈ ಸೀರಿಯಲ್ ನಂತರ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕೂಡ ಹೆಸರು ಮಾಡಿದ್ದ ಸಾನ್ಯ ಅಯ್ಯರ್ ಒಳ್ಳೆಯ ಡ್ಯಾನ್ಸರ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಸಾನ್ಯ, ಫಿನಾಲೆ ತಲುಪಿ, ಟಿವಿ ಸೀಸನ್ ಗೆ ತಲುಪಿದ ಸ್ಪರ್ಧಿ ಆಗಿದ್ದರು. ಟಿವಿ ಸೀಸನ್ ನಲ್ಲಿ ಕೆಲವು ವಾರಗಳ ಕಾಲ ಇದ್ದು ಎಲಿಮಿನೇಟ್ ಆಗಿದ್ದರು ಸಾನ್ಯ, ಇವರು ಹೆಚ್ಚಾಗಿ ರೂಪೇಶ್ ಶೆಟ್ಟಿ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು.
ಸಾನ್ಯ ಅವರು ಬಿಗ್ ಮನೆಯಿಂದ ನಂತರ ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಆಗಾಗ ಹೊಸ ಥರ ಫೋಟೋಶೂಟ್ ಮಾಡಿಸುತ್ತ ಸುದ್ದಿಯಾಗುತ್ತಾರೆ. ಈಗ ಸಾನ್ಯಾ ಅವರು ಕಪ್ಪು ಬಣ್ಣದ ಡ್ರೆಸ್ ನಲ್ಲಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ಬಹಳ ಹಾಟ್ ಆಗಿ ಕಾಣಿಸುತ್ತಿದ್ದೀರಾ ಎನ್ನುತ್ತಿದ್ದಾರೆ.
ಸಾನ್ಯಾ ಅಯ್ಯರ್ ಅವರ ಈ ಫೋಟೋಶೂಟ್ ಅನ್ನು ಬಾಲಿವುಡ್ ನ ಖ್ಯಾತ ಫೋಟೊಗ್ರಾಫರ್ ಡಬ್ಬು ರತ್ನಾನಿ ಅವರು ಮಾಡಿದ್ದು, ಸಾನ್ಯಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಇದನ್ನು ಮೆನ್ಷನ್ ಮಾಡಿದ್ದಾರೆ. ಈಗ ಫೋಟೋಶೂಟ್ ಗಳಲ್ಲಿ ಬ್ಯುಸಿ ಇರುವ ಸಾನ್ಯ ಅಯ್ಯರ್, ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸೋಕೆ ಕಾಯುತ್ತಲಿದ್ದಾರೆ.
Comments are closed.