Dr Bro: ಮೊದಲ ಬಾರಿಗೆ ಸಿನಿಮಾದಲ್ಲಿ ಮಾಡುತ್ತಿರುವ DR. ಬ್ರೋ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
Dr Bro: ಡೇರ್ಡೆವಿಲ್ ಮುಸ್ತಫಾ ಈ ಟೈಟಲ್ ಕೇಳಿದರೆ ಒಂದು ರೀತಿ ಇಂಟರೆಸ್ಟಿಂಗ್ ಆಗಿದೆ ಅಂತ ಅನ್ನಿಸೋದು ಗ್ಯಾರೆಂಟಿ. ಇದು ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ ಪುಸ್ತಕ, ಇದನ್ನು ಓದಿ ಎಂಜಾಯ್ ಮಾಡಿರುವ ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಈ ಪುಸ್ತಕವನ್ನು ಆಧರಿಸಿ ಸಿನಿಮಾ ತಯಾರಿಸಿದ್ದಾರೆ. ಈ ಸಿನಿಮಾಗೆ ಡೇರ್ಡೆವಿಲ್ ಮುಸ್ತಫಾ ಎಂದೇ ಹೆಸರು ಇಡಲಾಗಿದೆ..
ಈ ಸಿನಿಮಾಗೆ ನಟ ಡಾಲಿ ಧನಂಜಯ್ ಅವರು ಸಾಥ್ ನೀಡಿದ್ದ, ಶಶಾಂಕ್ ಸೋಘಲ್ ಅವರು ನಿರ್ದೇಶನ ಮಾಡಿದ್ದಾರೆ. ಡೇರ್ಡೆವಿಲ್ ಮುಸ್ತಫಾ ಸಿನಿಮಾದಲ್ಲಿ ನಾಗಭೂಷಣ್, ಎಮ್.ಎಸ್.ಉಮೇಶ್, ಮಂಡ್ಯ ರಮೇಶ್, ಪೂರ್ಣಚಂದ್ರ ಮೈಸೂರು ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ನಡೆದಿದೆ.
ಡೇರ್ಡೆವಿಲ್ ಮುಸ್ತಫಾ ಸಿನಿಮಾ ಕಥೆ ನಡೆಯೋದು ಅಬಚೂರು ಕಾಲೇಜಿನಲ್ಲಿ. ಈ ಕಾಲೇಜಿನಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ಡೇರ್ಡೆವಿಲ್ ಮುಸ್ತಫಾ ಬಂದಮೇಲೆ ಎಲ್ಲವೂ ಹೇಗೆ ಬದಲಾಯಿತು ಎನ್ನುವುದೇ ಕಥೆ ಆಗಿದೆ, ತೇಜಸ್ವಿ ಅವರ ಪುಸ್ತಕದ ರೂಪ ಆಗಿರುವ ಈ ಸಿನಿಮಾ ಯೂತ್ ಫುಲ್ ಎಂಟರ್ಟೈನರ್ ಆಗಿ ಜನರಿಗೆ ಫುಲ್ ಮನರಂಜನೆ ಕೊಡುವುದರಲ್ಲಿ ಸಂಶಯವಿಲ್ಲ. ಇನ್ನು ಈ ಸಿನಿಮಾ ಟ್ರೈಲರ್ ನಿನ್ನೆಯಷ್ಟೇ ಪಿ.ಆರ್.ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ.
ಟ್ರೈಲರ್ ನೋಡಿರುವವರಿಗೆ ಕಥೆಯ ನಿರೂಪಣೆ ಮಾಡಿರುವ ಧ್ವನಿ ಪರಿಚಿತ ಎನ್ನಿಸುವುದು ಖಂಡಿತ, ಜೋಶ್ ಇಂದ ಸ್ಟೋರಿ ನಿರೂಪಣೆ ಮಾಡಿರುವುದು ಮತ್ಯಾರು ಅಲ್ಲ, ದೇಶ ವಿದೇಶ ಸುತ್ತಿ ಜನರಿಗೆ ಆಶ್ಚರ್ಯಕರ ವಿಚಾರಗಳನ್ನು ತೋರಿಸುವ ಡಾಕ್ಟರ್ ಬ್ರೋ ಅಲಿಯಾಸ್ ಗಗನ ಶ್ರೀನಿವಾಸ್. ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದ್ದ ಗಗನ ಶ್ರೀನಿವಾಸ್ ಅವರು ಇದೀಗ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಈ ನಿರೂಪಣೆಗೆ ಡಾ.ಬ್ರೋ ಪಡೆದಿರುವ ಸಂಭಾವನೆ ಎಷ್ಟು ಎಂದು ಚರ್ಚೆ ಶುರುವಾಗಿದ್ದು, ಬರೋಬ್ಬರಿ ₹40,00,000 ಲಕ್ಷ ಸಂಭಾವನೆ ಪಡೆದಿದ್ದಾರೆ ಡಾಕ್ಟರ್ ಬ್ರೋ.
Comments are closed.