Health Tips: ಡಬಲ್ ಮೀನಿಂಗ್ ಗೆ ಹೆಸರಾಗಿರುವ ದಾಸವಾಳ ಹೂವಿನಿಂದ ಎಷ್ಟೆಲ್ಲ ಆರೋಗ್ಯದ ಲಾಭಗಳು ಇವೆ ಗೊತ್ತೇ? ಯಪ್ಪಾ ತಿಳಿದರೆ, ಇಂದೇ ಬಳಸುತ್ತೀರಿ.
Health Tips: ದಾಸವಾಳ ಹೂವಿನಲ್ಲಿ ಬಹಳಷ್ಟು ಒಳ್ಳೆಯ ಗುಣಗಳಿವೆ, ಬೇರೆ ಬೇರೆ ಊರಿನಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹೂವನ್ನು ಕರೆಯುತ್ತಾರೆ. ಆಯುರ್ವೇದದಲ್ಲಿ ಜಪ ಎನ್ನುತ್ತಾರೆ. ಇದು ರುಚುಯಲ್ಲಿ ಸಿಹಿಯಾಗಿದೆ, ಹಾಗೆಯೇ ತಂಪು ಕೂಡ ಹೌದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಫ ಕಡಿಮೆ ಮಾಡುತ್ತದೆ, ಕೂದಲಿನ ಆರೋಗ್ಯ, ಸುಂದರವಾದ ತ್ವಚೆ ಇದೆಲ್ಲದಕ್ಕೂ ದಾಸವಾಳ ಒಳ್ಳೆಯದು. ಇದನ್ನು ಯಾವ ರೀತಿ ಬಳಸಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸುತ್ತೇವೆ ನೋಡಿ…

ಹೈಬಿಸ್ಕಸ್ ಟೀ :- ಒಂದು ಲೋಟ ಕುದಿಯುವ ನೀರಿಗೆ 5 ದಾಸವಾಳದ ದಳಗಳನ್ನು ಹಾಕಿ. 2 ನಿಮಿಷ ಕುದಿಯಲು ಬಿಡಿ, ನಂತರ ಫಿಲ್ಟರ್ ಮಾಡಿ ತಣ್ಣಗಾಗುವುದಕ್ಕೆ ಬಿಡಿ. ಪಿತ್ತದ ಸಮಸ್ಯೆ ಇರುವವರಿಗೆ, ಮಧ್ಯರಾತ್ರಿ ಸಮಯದ ಹೆಚ್ಚು ಹೀಟ್ ಇಂದ ಹೇರ್ ಫಾಲ್ ಆಗುತ್ತದೆ. ಇವರಿಗೆ ಹೀಟ್ ಕಡಿಮೆ ಮಾಡಲು ಹೈಬಿಸ್ಕಸ್ ಟೀ ಸಹಾಯ ಮಾಡುತ್ತದೆ.
ಹೈಬಿಸ್ಕಸ್ ಹೇರ್ ರಿನ್ಸ್ :- 500ಮಿಲಿ ನೀರಿಗೆ ದಾಸವಾಳ ಹೂವಿನ 10 ದಳಗಳನ್ನು ಹಾಕಿ ನೆನೆಸಿ ಇಡಿ, ಮರುದಿಕ ಬೆಳಗೆ ಕೈಯಿಂದ ಹೂವುಗಳನ್ನು ಸ್ಕ್ವೀಜ್ ಮಾಡಿ, ಬೌಲ್ ಇಂದ ಹೊರಗಿಡಿ. ಇದನ್ನು ಫಿಲ್ಟರ್ ಮಾಡಿ, ನಿಮ್ಮ ಕೂದಲಿಗೆ ಹಚ್ಚಿ. 20ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.
ಹೈಬಿಸ್ಕಸ್ ಆಯ್ಲ್ :- ದಾಸವಾಳ ಹೂವಿನ ಎಲೆಗಳು ಮತ್ತು ಹೂವುಗಳನ್ನು ರುಬ್ಬಿ, ಪೇಸ್ಟ್ ಮಾಡಿ ಅದನ್ನು ಕೋಕೋನಟ್ ಆಯ್ಲ್ ಜೊತೆಗೆ ಬೆರೆಸಿ, ನೀರಿನ ಅಂಶ ಕಡಿಮೆ ಆಗುವವರೆಗೆ ಶಾಖದಲ್ಲಿ ಕುದಿಸಿ, 48 ಗಂಟೆಗಳ ಕಾಲ ಹಾಗೆಯೇ ಬಿಡಿ. ಬಳಿಕ ಗ್ಲಾಸ್ ಬಾಟಲ್ ಗೆ ಹಾಕಿ ಶೇಖರಿಸಿ. ಆಗಾಗ ಕೂದಲಿಗೆ ಹಚ್ಚಿ.
ರಕ್ತಹೀನತೆಗೆ ಪರಿಹಾರ :- ನೆರಳು ಇರುವ ಸಮಯದಲ್ಲಿ 20 ರಿಂದ 30 ದಾಸವಾಳದ ಮೊಗ್ಗುಗಳನ್ನು ಒಣಗಿಸಿ ನುಣ್ಣಗೆ ರುಬ್ಬಿ. ಏರ್ ಟೈಟ್ ಕಂಟೇನರ್ ನಲ್ಲಿ ಸ್ಟೋರ್ ಮಾಡಿ. Hb ಹೆಚ್ಚಾಗಲು, ಒಂದು ಸ್ಪೂನ್ ಜೇನುತುಪ್ಪದೊಂದಿಗೆ ಅರ್ಧ ಸ್ಪೂನ್ ಇದನ್ನು ಹಾಕಿ ಸೇವಿಸಿ.
ಮಧುಮೇಹಕ್ಕೆ ಪರಿಹಾರ :- ದಾಸವಾಳ ಹೂವನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಫಿಲ್ಟರ್ ಮಾಡಿ. ಬೆಳಗ್ಗೆ ವೇಳೆ ಒಂದು ಗುಟುಕು ಕುಡಿಯಿರಿ. ಇದರಿಂದ ಮಧುಮೇಹ ಕಂಟ್ರೋಲ್ ನಲ್ಲಿ ಇರುತ್ತದೆ. ದಾಸವಾಳದ ಹೂವುಗಳನ್ನು ಮೊಡವೆ, ರಕ್ತಸ್ರಾವದ ಸಮಸ್ಯೆ, ಒಸಡುಗಳ ರಕ್ತಸ್ರಾವದ ಚಿಕಿತ್ಸೆಯಲ್ಲಿ ಬಳಕೆಗೆ ಬರುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬ್ಲಡ್ ಪ್ರೆಶರ್ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೈಲ್ಸ್, ನಿದ್ರಾಹೀನತೆ, ಯುಟಿಐ, ಸಮಸ್ಯೆಗೆ ಒಳ್ಳೆಯದು.