Sadha Cafe: ಕನ್ನಡದ ಮೊನಾಲಿಸಾ ಚಿತ್ರದ ನಟಿ ಸದಾ ರವರು ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?? ನಟಿಗೆ ಹೀಗೆ ಮಾಡ್ತಾರಾ
Sadha Cafe: ನಟಿ ಸದಾ ಇವರು ತೆಲುಗಿನ ಜಯಂ (Jayam) ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಬಳಿಕ ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಭಾಷೆಗಳಲ್ಲಿ ನಟಿಸಿ, ಸ್ಟಾರ್ ನಟಿ ಎನ್ನಿಸಿಕೊಂಡವರು. ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ಆದ ನಟಿ ಸದಾ ಅವರು ಈಗ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರಿಗೆ ಹೆಚ್ಚು ಅವಕಾಶಗಳು ಕೂಡ ಸಿಗುತ್ತಿಲ್ಲ. ಯಾವಾಗಲೂ ನಗುನಗುತ್ತಾ ಇರುವ ಸದಾ ಅವರು ಇತ್ತೀಚೆಗೆ ಮುಂಬೈನ ಕೆಫೆ ಒಂದರಲ್ಲಿ ಅದೊಂದು ವಿಷಯ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?
ನಟಿ ಸದಾ ಅವರು ಕನ್ನಡದಲ್ಲಿ ನಟ ಧ್ಯಾನ್ ಅವರೊಡನೆ ಮೊನಾಲಿಸ ಸಿನಿಮಾ, ಶಿವಣ್ಣ (Shivarajkumar) ಅವರ ಜೊತೆ ಮೈಲಾರಿ, ಆದಿತ್ಯ ಅವರ ಜೊತೆಗೆ ಮೋಹಿನಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಹಾಗೂ ತಮಿಳಿನಲ್ಲಿ ಸ್ಟಾರ್ ಹೀರೋಗಳ ಜೊತೆಗೂ ತೆರೆಹಂಚಿಕೊಂಡಿದ್ದಾರೆ. ನಟ ವಿಕ್ರಂ (Vikram) ಅವರೊಡನೆ ಇವರು ನಟಿಸಿದ ಅನ್ನಿಯನ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆದರೆ ಈ ಸಿನಿಮಾ ನಂತರ ಸದಾ ಅವರ ಇನ್ಯಾವುದೇ ಸಿನಿಮಾ ಅಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ.
ಹೀರೋಯಿನ್ ಆಗಿ ಯಶಸ್ಸು ಸಿಗದ ಸದಾ ಅವರು ಬಿಗ್ ಬಾಸ್ ಜೋಡಿ, ಅಲಾ ಅಲಾ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಶೋಗಳಲ್ಲಿ ಜಡ್ಜ್ ಆಗಿ ಒಳ್ಳೆಯ ಹೆಸರು ಪಡೆದರು. ಸದಾ ಅವರು ಬಣ್ಣದ ಲೋಕದ ಜೊತೆಗೆ ಮುಂಬೈ ನಲ್ಲಿ ಒಂದು ಕೆಫೆ ಶುರು ಮಾಡಿದ್ದಾರೆ, ಇವರ ಕೆಫೆಯ ಹೆಸರು ಅರ್ಥ್ ಲಿಂಗ್ಸ್ (Earthlings), ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದು, ತಮ್ಮ ಕೆಫೆ ಬಗ್ಗೆ ಕೆಲವು ಬೇಸರದ ವಿಷಯವನ್ನು ಹಂಚಿಕೊಂಡಿದ್ದಾರೆ. “ಅರ್ಥ್ಲಿಂಗ್ಸ್ ಕೆಫೆಯನ್ನು 2019ರ ಏಪ್ರಿಲ್ 23ರಂದು ಶುರು ಮಾಡಿದೆ, ಇದು ನನ್ನ ಮೊದಲ ಬ್ಯುಸಿನೆಸ್, ನನ್ನ ಮೊದಲ ಮಗು ಎಂದೇ ಅಂದುಕೊಂಡಿದ್ದೆ. ಆದರೆ ಉ ವರ್ಷ ಏಪ್ರಿಲ್ 23ರಂದು ನನಗೆ ತುಂಬಾ ದುಃಖವಾಗಿದೆ, ಏಕೆಂದರೆ ಈ ಜಾಗದ ಓನರ್ ಕೆಫೆ ಕ್ಲೋಸ್ ಮಾಡಲು ಹೇಳಿದ್ದಾರೆ.
ಒಂದು ತಿಂಗಳ ಸಮಯ ನೀಡಿದ್ದಾರೆ. ಕೆಫೆ ಶುರು ಮಾಡುವುದಕ್ಕಿಂತ ಮೊದಲು ಈ ಜಾಗ ಕೆಟ್ಟಡಗಿತ್ತು. ಕೋವಿಡ್ ಇದ್ದಾಗ ದಿನಕ್ಕೆ 12 ಗಂಟೆಗಳ ಕಾಲ ಇಲ್ಲಿ ಕೆಲಸ ಮಾಡಿದ್ದೇನೆ.. ಈ ಜಾಗ ಸುಂದರವಾಗಿರಬೇಕು ಎಂದು ನಾನು ವರ್ಷಗಳ ಕಾಲ ಕಷ್ಟಪಟ್ಟಿದ್ದೇನೆ, ಲಾಕ್ ಡೌನ್ ಸಮಯದಲ್ಲಿ ಬ್ಯುಸಿನೆಸ್ ಡಲ್ ಇದ್ದರು ಬಾಡಿಗೆ ಕಟ್ಟಿದ್ದೇನೆ. ಈಗ ಕೆಫೆ ಬಿಡುವುದಕ್ಕೆ ನನಗೆ ಇಷ್ಟವಿಲ್ಲ..ಈ ನೋವನ್ನು ಸಹಿಸಲು ಆಗುತ್ತಿಲ್ಲ..” ಎಂದು ನಟಿ ಸದಾ ಕಣ್ಣೀರಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Comments are closed.