Vastu Tips: ದಾರಿಯಲ್ಲಿ ಹಣ ಸಿಕ್ಕರೆ ಏನು ಮಾಡಬೇಕು ಗೊತ್ತೇ?? ಎತ್ತಿಕೊಳ್ಳುವ ಮುನ್ನ ಈ ವಿಷಯ ತಿಳಿದು ಆಮೇಲೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಅಷ್ಟೇ ಕಥೆ.
Vastu Tips: ಹಲವು ಸಾರಿ ನಾವು ರಸ್ತೆಯಲ್ಲಿ ಬಿದ್ದಿರುವ ಹಣವನ್ನು ನೋಡುತ್ತೇವೆ, ನಾಣ್ಯಗಳು ಅಥವಾ ನೋಟ್ ಏನಾದರೂ ಸರಿ ರೋಡ್ ನಲ್ಲಿ ಬಿದ್ದಿರಬಹುದು, ಕೆಲವರು ಅದನ್ನು ತೆಗೆದುಕೊಂಡು ತಮ್ಮ ಹತ್ತಿರವೇ ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಬಡವರಿಗೆ ಕೊಡುತ್ತಾರೆ, ಮತ್ತು ಕೆಲವರು ದೇವರ ಹುಂಡಿಗೆ ಹಾಕಿಬಿಡುತ್ತಾರೆ. ಆದರೆ ರಸ್ತೆಯಲ್ಲಿ ಬಿದ್ದುರುವ ಹಣವನ್ನು ತೆಗೆದುಕೊಳ್ಳಬಹುದಾ? ಈ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ರಸ್ತೆಯಲ್ಲಿ ಸಿಗುವ ಹಣವನ್ನು ತೆಗೆದುಕೊಳ್ಳುವ ಮೊದಲು ನೀವು ಈ ವಿಷಯಗಳನ್ನು ತಿಳಿದುಕೊಳ್ಳಬೇಕು..
*ರಸ್ತೆಯಲ್ಲಿ ಹಣ ಸಿಗುವುದು ಶುಭ ಎಂದು ಹೇಳುತ್ತಾರೆ. ರಸ್ತೆಯಲ್ಲಿ ಹಣ ಕಾಣಿಸಿದರೆ, ಅದು ಪೂರ್ವಜರ ಆಶೀರ್ವಾದ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗೇ ನಡೆದಾಗ, ನೀವು ಮಾಡಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಚೈನಾ ದೇಶದಲ್ಲಿ ಹಣವನ್ನು ವ್ಯವಹಾರ ಮಾಡುವುದಕ್ಕೆ ಮಾತ್ರವಲ್ಲದೆ, ಅದೃಷ್ಟ ಎಂದು ಕೂಡ ಪರಿಗಣಿಸುತ್ತಾರೆ.
*ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಹಣ ಸಿಕ್ಕರೆ, ನೀವು ಹೋಗುತ್ತಿರುವ ಕೆಲಸದಲ್ಲಿ ಖಂಡಿತವಾಗಿ ಯಶಸ್ಸು ಪಡೆಯುತ್ತೀರಾ ಎಂದು ಅರ್ಥ..
*ನೀವು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿ ನಡುವೆ ಹಣ ಸಿಕ್ಕರೆ, ನಿಮಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಆಗುತ್ತದೆ ಎಂದು ತಿಳಿಸಿದ್ದಾರೆ.
*ಒಂದು ವೇಳೆ ರಸ್ತೆಯಲ್ಲಿ ನಿಮಗೆ ಹಣ ಸಿಕ್ಕರೆ, ಅದನ್ನು ದೇವಸ್ಥಾನಕ್ಕೆ ದಾನ ಮಾಡಿ, ಅಥವಾ ನಿಮ್ಮ ಪರ್ಸ್ ನಲ್ಲಿ ಅಥವಾ ಮನೆಯಲ್ಲಿ ಎಲ್ಲಾದರೂ ಇಡಬಹುದು ಆದರೆ ಆ ಹಣವನ್ನು ಖರ್ಚು ಮಾಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
*ಒಂದು ವೇಳೆ ರಸ್ತೆಯಲ್ಲಿ ಓಡಾಡುವಾಗ ನಿಮಗೆ ಹಣ ಸಿಕ್ಕರೆ, ಅದು ಶುಭ ಸಂಕೇತ ಆಗಿದ್ದು, ನೀವು ಶೀಘ್ರದಲ್ಲೇ ಹೊಸ ಬ್ಯುಸಿನೆಸ್ ಶುರು ಮಾಡಬಹುದು ಎಂದು ಅರ್ಥ. ನಿಮಗೆ ಯಾವುದೇ ತೊಂದರೆ ಆಗದೆ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ.
Comments are closed.