Adah Sharma: ಕೇರಳ ಸ್ಟೋರಿ ಸಿನಿಮಾದಲ್ಲಿ ದೇಶವೇ ನಡುಗುವಂತೆ ನಟನೆ ಮಾಡಿರುವ ಆಧಾ ಶರ್ಮ ರವರು ಓದಿರುವುದು ಎಷ್ಟು ಗೊತ್ತೇ? ಇಷ್ಟೇನಾ??
Adah Sharma: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ರಣವಿಕ್ರಮ ಸಿನಿಮಾವನ್ನು ಎಲ್ಲರೂ ನೋಡಿರುತ್ತೀರಿ. ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಹೀರೋಯಿನ್ ಆಗಿ ನಟಿಸಿದ್ದು ಬಾಲಿವುಡ್ ಬೆಡಗಿ ನಟಿ ಅದಾ ಶರ್ಮ. ಈ ನಟಿ ಈಗ ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟನೆ ಶುರು ಮಾಡಿದ ಅದಾ ಶರ್ಮ ಅವರು ಓದಿರುವುದು ಎಷ್ಟು ಗೊತ್ತಾ?
ನಟಿ ಅದಾ ಶರ್ಮ ಅವರ ತಂದೆ ತಾಯಿ ಇಬ್ಬರು ಕೂಡ ದಕ್ಷಿಣ ಭಾರತದವರು, ಇವರ ತಂದೆ ತಮಿಳುನಾಡಿನವರು ಹಾಗೂ ತಾಯಿ ಕೇರಳದವರು. ಆದರೆ ಅದಾ ಶರ್ಮ ಅವರು ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಅಲ್ಲಿಯೇ ಶಾಲಾ ಶಿಕ್ಷಣ ಮುಗಿಸಿದ ಅದಾ ಶರ್ಮ ಅವರಿಗೆ ಡ್ಯಾನ್ಸ್ ಅಂದ್ರೆ ಬಹಳ ಆಸಕ್ತಿ. 3 ವರ್ಷದವರಾಗಿದ್ದಾಗಿನಿಂದಲೇ ಅದಾ ಶರ್ಮಾ ಅವರು ಡ್ಯಾನ್ಸ್ ಕಲಿಯುತ್ತಿದ್ದಾರೆ..
ಇವರಿಗೆ ಚಿಕ್ಕ ವಯಸ್ಸಿನಿಂದ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಅದಾ ಶರ್ಮ ಅವರು 10ನೇ ತರಗತಿ ಮುಗಿಯುತ್ತಿದ್ದ ಹಾಗೆಯೇ ಓದುವುದನ್ನು ನಿಲ್ಲಿಸುತ್ತೇನೆ ಎಂದು ಹೇಳಿದರಂತೆ, ಆದರೆ ತಂದೆ ತಾಯಿ ಬೇಸಿಕ್ ಎಜುಕೇಶನ್ ಮುಗಿಸಲೇಬೇಕು ಎಂದು ಹೇಳಿದ್ದಕ್ಕೆ, 12ನೇ ತರಗತಿವರೆಗೂ ಓದಿದ್ದಾರೆ ಅದಾ ಶರ್ಮ. ಇವರು ಪದವಿ ಕೂಡ ಮಾಡಿದ್ದಾರೆ. ಆದರೆ ಅದು ಓದುವ ವಿಷಯದಲ್ಲಿ ಅಲ್ಲ..
ಕಥಕ್ ನಲ್ಲಿ ಅದಾ ಧರ್ಮ ಅವರು ಡಿಗ್ರಿ ಮಾಡಿದ್ದಾರೆ. ಅದಾ ಅವರು ಮುಂಬೈನ ನಟರಾಜ್ ಗೋಪಿ ಕೃಷ್ಣ ಕಥಕ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕಥಕ್ ಕಲಿತರು. ಅಷ್ಟೇ ಅಲ್ಲದೆ ಅಮೆರಿಕಾದಲ್ಲಿ ಬ್ಯಾಲೆ, ಸಾಲ್ಸ, Jazz, ಸಹ ಕಲಿತಿದ್ದಾರೆ. ಇವರಿಗೆ ಅದ್ಭುತವಾಗಿ ಬೆಲ್ಲಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರಿಗೆ 7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆಗಾಗ ಫೋಟೋಸ್ ಮತ್ತು ರೀಲ್ಸ್ ಶೇರ್ ಮಾಡುತ್ತಾರೆ ಅದಾ ಶರ್ಮ.
Comments are closed.