Kerala Story: ಕೇರಳ ಸ್ಟೋರಿ ಸಿನಿಮಾ ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲು ಕಾರಣವೇನು ಗೊತ್ತೇ?? ನಿಜಕ್ಕೂ ಇದರ ಹಿಂದಿರುವ ಕಾರಣ ಏನು ಗೊತ್ತೇ?
Kerala Story: ಈಗ ದೇಶದ ಎಲ್ಲೆಡೆ ಚರ್ಚೆ ಆಗುತ್ತಿರುವುದು ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ. ಈ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದು, ಇಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಸಿನಿಮಾ ನೋಡಿ ನೆಟ್ಟಿಗರು, ಸಿನಿಪ್ರಿಯರು, ಸಿನಿಮಾ ತಾರೆಯರು ರಾಜಕಾರಣಿಗಳು ಕೂಡ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Taroor) ಅವರ ಪ್ರತಿಕ್ರಿಯೆ ವಿಭಿನ್ನವಾಗಿತ್ತು..
ಇದು ನಿಮ್ಮ ಕೇರಳದ ಕಥೆ..ನಮ್ಮ ಕೇರಳದ ಕಥೆಯಲ್ಲ ಎಂದು ಊಹಿಸದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಈ ಸಿನಿಮಾ ಬ್ಯಾನ್ ಮಾಡುವುದು ತಮಗೆ ಇಷ್ಟವಿಲ್ಲ ಎಂದು ಕೂಡ ಹೇಳಿದ್ದಾರೆ. ಈ ಕಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ, ನಿಜವಾದ ಮೌಲ್ಯ ಇದರಲಿಲ್ಲ. ಈ ಸಿನಿಮಾ ನೈಜತೆಗೆ ಬೇರೆ ರೀತಿ ಇದೆ. ಕೇರಳ ರಾಜ್ಯದವರು ಹೇಳುತ್ತಿರುವುದು ಇದನ್ನೇ, ಅವರಿಗೆ ಆ ಹಕ್ಕಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ (Pinarai Vijayan) ಅವರು ಹೇಳುತ್ತಿರುವುದು ಇದನ್ನೇ.. ಇದನ್ನು ಓದಿ.. Rashmika Mandanna: ರಶ್ಮಿಕಾ ರವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ, ಅವರು ಏನು ಮಾಡಿದ್ದಾರೆ ಎಂದು ಈ ಕಷ್ಟ- ಅಭಿಮಾನಿಗಳು ಕಣ್ಣೀರು- ಏನಾಗಿದೆ
ಕೇರಳ ವಿರೋಧಿಗಳು ಬೇಕು ಎಂದೇ ಈ ಸಿನಿಮಾ ಮಾಡಿದ್ದಾರೆ. ಇದು ಕೇರಳ ರಾಜ್ಯದ ಪ್ರತಿಷ್ಠೆಗೆ ಮಸಿ ಬಳಿಯುವ ಒಂದು ತಂತ್ರ ಆಗಿದೆ. ಧರ್ಮವನ್ನು ತೆಗೆದುಕೊಂಡು, ದ್ವೇಷ ಬೆಳೆಸುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ ಎಂದು ಕೇರಳ ರಾಜ್ಯದ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಿನಿಮಾದ ಕಥೆ ಇಷ್ಟವಾಗಿದೆ ಆದರೆ ಅಲ್ಲಿನ ಪಾತ್ರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ಆ ಥರದ ಉದ್ದೇಶ ಕೂಡ ನನಗೆ ಇಲ್ಲ.. ಎಂದು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅದಾ ಶರ್ಮ (Adah Sharma) ಅವರು ಹೇಳಿದ್ದಾರೆ.
ಸಿನಿಮಾ ರಿಲೀಸ್ ಆದಾಗಿನಿಂದ ಸಿಕ್ಕಾಪಟ್ಟೆ ಟೀಕೆಗಳನ್ನು ಎದುರಿಸುತ್ತಲೇ ಇದೆ. ಹಿಂದೂ ಜನರ ಮೇಲೆ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೆಲವು ಕಡೆ ಇದೆಲ್ಲಾ ನಡೆದರು, ರಾಜಕಾರಣಿಗಳು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ವಾಸ್ತವಾಗಿ ಈ ಸಿನಿಮಾದಲ್ಲಿ ಯಾವುದೇ ಧರ್ಮ ಇಲ್ಲ, ಧರ್ಮವನ್ನು ಎಳೆದು ತರುತ್ತಿದ್ದೀರಿ, ಇದು ಭಯೋತ್ಪಾದನೆ ಬಗ್ಗೆ ತಯಾರಾಗಿರುವ ಸಿನಿಮಾ ಎಂದು ನಿರ್ದೇಶಕ ಸುದೀಪ್ತೋ ಸೇನ್ ಅವರು ಹೇಳಿದ್ದಾರೆ. ಆದರೆ ಒಂದಲ್ಲಾ ಒಂದು ವಿವಾದಗಳಿಂದ ಈ ಸಿನಿಮಾ ಸುದ್ದಿಯಾಗಿ ಯಶಸ್ವಿಯಾಗಿದೆ. ಇದನ್ನು ಓದಿ..Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.
Comments are closed.