Megha Shetty: ಒಂದು ಕಡೆ ಜೊತೆ ಜೊತೆಯಲಿ ಅಂತ್ಯವಾಗುತ್ತಿದ್ದ ಹಾಗೆ ಗಟ್ಟಿ ನಿರ್ಧಾರ ಮಾಡಿದ ಮೇಘ ಶೆಟ್ಟಿ- ಏನು ಗೊತ್ತೇ? ಅಭಿಮಾನಿಗಳಿಗೆ ನಿರಾಸೆ
Megha Shetty: ಜೊತೆ ಜೊತೆಯಲಿ ಧಾರವಾಹಿ ಕನ್ನಡ ಕಿರುತೆರೆಯಲ್ಲಿ ಹೊಸ ಭಾಷ್ಯ ಬರೆದ ಧಾರವಾಹಿ ಎಂದರೆ ತಪ್ಪಲ್ಲ. ನಟ ಅನಿರುದ್ಧ್ ಅವರನ್ನು ಒಂದೇ ದಿನದಲ್ಲಿ ಸ್ಟಾರ್ ಆಗುವ ಹಾಗೆ ಮಾಡಿತ್ತು ಜೊತೆ ಜೊತೆಯಲಿ. ಇನ್ನು ಮೇಘಾ ಶೆಟ್ಟಿ ಅವರನ್ನು ಪರಿಚಯ ಮಾಡಿ, ಜೊತೆ ಜೊತೆಯಲಿ ಇಂದ ಅವದ ಅದೃಷ್ಟವೆ ಬದಲಾಗಿ ಹೋಯಿತು. ಮೇಘಾ ಶೆಟ್ಟಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತು.
ಈಗ ಜೊತೆ ಜೊತೆಯಲಿ ಧಾರವಾಹಿ ಅಂತ್ಯವಾಗುತ್ತಿದೆ. ನಾಲ್ಕು ವರ್ಷಗಳಿಂದ ಈ ಧಾರವಾಹಿ ನಡೆಯುತ್ತಿದೆ. ಅನಿರುದ್ಧ್ ಅವರ ಆರ್ಯವರ್ಧನ್ ಪಾತ್ರ ಬದಲಾದ ನಂತರ ಜನರಿಗೆ ಸ್ವಲ್ಪ ಆಸಕ್ತಿಯೂ ಕಡಿಮೆ ಆಗಿತ್ತು. ಇದೀಗ ಜೊತೆ ಜೊತೆಯಲಿ ಧಾರವಾಹಿ ಅಂತ್ಯವಾಗುವ ಹಂತಕ್ಕೆ ಬಂದಿದೆ. ಮೇ 19ರಂದು ಜೊತೆ ಜೊತೆಯಲಿ ಧಾರವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಇದರ ಬೆನ್ನಲ್ಲೇ ನಟಿ ಮೇಘಾ ಶೆಟ್ಟಿ ಅವರು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.. ಇದನ್ನು ಓದಿ..Naresh Pavitra: ಮದುವೆಯಾಗಿಲ್ಲ, ಆದರೆ ಸುಪ್ರೀಂ ಕೋರ್ಟ್ ಹೇಳಿದಂತೆ ಬದುಕುತ್ತಿದ್ದೇವೆ, ಕಾನೂನು ಬಳಸಿಕೊಂಡು ನರೇಶ್ – ಪವಿತ್ರ ಬಾಳುತ್ತಿರುವುದು ಹೇಗೆ ಗೊತ್ತೇ??
ಅದರ ಬಗ್ಗೆ ಮೇಘಾ ಶೆಟ್ಟಿ ಅವರೇ ಮಾತನಾಡಿದ್ದು, “ಜೊತೆ ಜೊತೆಯಲಿ ಸೀರಿಯಲ್ ನ ಫಸ್ಟ್ ಶಾಟ್ ಮತ್ತು ಲಾಸ್ಟ್ ಶಾಟ್ ಎರಡನ್ನು ಕೂಡ ನನ್ನದೇ ಆಗಿದೆ. ಈ ಎರಡು ಶಾಟ್ ಗಳ ನಡುವೆ ಸಮಯದ ಅಂತರ ಬಹಳಷ್ಟಿದೆ. ಈ ತಂಡಕ್ಕೆ ಕಾಲಿಟ್ಟಾಗ ಯಾರ ಪರಿಚಯವೂ ಇರಲಿಲ್ಲ, ಈಗ ನನಗೆ ಎರಡನೇ ಕುಟುಂಬ ಆಗಿದೆ. ಈ ಫ್ಯಾಮಿಲಿ ಜೊತೆಗೆ ನನ್ನ ನಂಟು ಮುಗಿಯುತ್ತಿದೆ. ಡೈರೆಕ್ಟರ್ ಜಗದೀಶ್, ಎಪಿಸೋಡ್ ಡೈರೆಕ್ಟರ್ ಹಾಗೂ ಇಡೀ ಟೀಮ್ ಜೊತೆಗೆ 4 ವರ್ಷಗಳ ಒಡನಾಟ ಇದೆ. ಅವರೆಲ್ಲರ ಜೊತೆಗೆ ಊಟ ಮಾಡಿದ್ದೀನಿ..
ಅದನ್ನೆಲ್ಲ ಮರೆಯಲು ಆಗೋದಿಲ್ಲ..ಅನು ಸಿರಿಮನೆಯಿಂದ ನನಗೆ ಎಲ್ಲವೂ ಸಿಕ್ಕಿದೆ. ನನಗೆ ಈಗ ಸಿಗುತ್ತಿರುವ ಸಿನಿಮಾ ಅವಕಾಶ ಹಾಗೂ ಇನ್ನೆಲ್ಲದಕ್ಕೂ ಜೊತೆ ಜೊತೆಯಲಿ ಧಾರವಾಹಿಯೇ ಕಾರಣ. ನಾವು ಸಾವಿರ ಸಂಚಿಕೆಗಳನ್ನು ಮುಟ್ಟಬೇಕು ಅಂದುಕೊಂಡಿದ್ವಿ. ಅದೇ ರೀತಿ ಮುಗಿಸುತ್ತಿದ್ದೇವೆ..”ಎಂದು ಹೇಳಿದ್ದಾರೆ. ಹಾಗೆಯೇ ತಮ್ಮ ಕೆರಿಯರ್ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ್ದು, ಇನ್ನುಮುಂದೆ ಧಾರವಾಹಿಗಳಲ್ಲಿ ನಟಿಸುವುದು ಬೇಡ ಎಂದು ನಿರ್ಧಾರ ಮಾಡಿದ್ದಾರಂತೆ, ಒಳ್ಳೆ ಸಿನಿಮಾಗಳ ನಿರೀಕ್ಷೆಯಲ್ಲಿ ಇದ್ದಾರಂತೆ. ಮೇಘಾ ಶೆಟ್ಟಿ ಅವರ ಈ ನಿರ್ಧಾರ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ. ಇದನ್ನು ಓದಿ..Tips: ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??
Comments are closed.