Neer Dose Karnataka
Take a fresh look at your lifestyle.

Naresh Pavithra: ಮತ್ತೆ ಮದುವೆಯಾಗಿಲ್ಲ, ಆದರೆ ಒಂದೇ ಮನೆಯಲ್ಲಿ ಒಟ್ಟಿಗೆ ಬಾಳುತ್ತೇವೆ- ಅಧಿಕೃತವಾಗಿ ಒಪ್ಪಿಕೊಂಡು ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೆ??

905

Naresh Pavithra: ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಅವರ ವಿಚಾರ ಕಳೆದ ವರ್ಷದಿಂದಲು ಭಾರಿ ಚರ್ಚೆ ಆಗುತ್ತಿದೆ. ಇವರಿಬ್ಬರು ಮದುವೆ ಆಗಿದ್ದಾರೆ ಎಂದು ಒಂದು ಸುದ್ದಿಯಾದರೆ ಇವರಿಬ್ಬರು ಲಿವಿಂಗ್ ರಿಲೇಶನ್ಷಿಪ್ ನಲ್ಲಿದ್ದಾರೆ ಎಂದು ಮತ್ತೊಂದು ಸುದ್ದಿ ಕೇಳಿಬಂದಿತ್ತು. ಇವರಿಬ್ಬರ ಲೈಫ್ ನಲ್ಲಿ ಹಲವು ಡ್ರಾಮಾಗಳು ನಡೆದು ಹೋದವು. ಇದೀಗ ಇವರಿಬ್ಬರು ಜೊತೆಯಾಗಿ ಒಂದು ಸಿನಿಮಾ ಮಾಡಿದ್ದಾರೆ, ಈ ಸಿನಿಮಾ ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.

ನರೇಶ್ ಹಾಗೂ ಪವಿತ್ರಾ ಅವರು ನಟಿಸಿರುವ ಮಲ್ಲಿ ಪೆಲ್ಲಿ ಸಿನಿಮಾ ಇವರಿಬ್ಬರ ಜೀವನದ ಕಥೆಯೇ ಆಗಿದೆ ಎನ್ನುವ ಅನುಮಾನ ಶುರುವಾಗಿತ್ತು. ಟ್ರೈಲರ್ ಬಿಡುಗಡೆಯಾದ ನಂತರ ಅದು ನಿಜವೇ ಇರಬಹುದು ಎಂದು ಕೂಡ ಅನ್ನಿಸಿತ್ತು. ಹಾಗೆಯೇ ಇವರಿಬ್ಬರ ನಡುವೆ ಕೆಲವು ಅನುಮಾನಗಳು ಕೂಡ ಶುರುವಾಯಿತು. ಮುಂದಿನ ವಾರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇವರಿಬ್ಬರು ಕೂಡ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸಿದರು. ಇದನ್ನು ಓದಿ..Kavya Thapar: ತೆಲುಗಿನ ಬೆಣ್ಣೆ ನಟಿ ಕಾವ್ಯ ಹಾಕಿಕೊಂಡಿದ್ದ ಸೀರೆ ನೋಡಿ, ಮೈಂಡ್ ಬ್ಲಾಕ್ ಮಾಡಿಕೊಂಡ ಜನರು. ಎಲ್ಲರೂ ಕೇಳಿದ ಪ್ರಶ್ನೆ ಏನು ಗೊತ್ತೇ?

ಮಾಧ್ಯಮದ ಎದುರು ಮಾತನಾಡಿ, ಅನೇಕ ವಿಷಯಗಳನ್ನು ಹಂಚಿಕೊಂಡರು. ಇಬ್ಬರು ಮದುವೆ ಆಗಿದ್ದಾರಾ ಅಥವಾ ಆಗುತ್ತಾರಾ ಎನ್ನುವ ಪ್ರಶ್ನೆಗೂ ಈಗ ಕ್ಲಾರಿಟಿ ಸಿಕ್ಕಿದೆ. ಈ ವಿಚಾರದ ಬಗ್ಗೆ ಪವಿತ್ರಾ ಲೋಕೇಶ್ ಅವರು ಮಾತನಾಡಿ, “ನನ್ನ ಹೆಗಲ ಮೇಲೆ ಯಾರೋ ಗನ್ ಇಟ್ಟು, ನರೇಶ್ ಅವರನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಹಣದ ಮೇಲೆ ನನಗೆ ಯಾವ ಆಸೆ ಕೂಡ ಇಲ್ಲ, ಇನ್ನೊಬ್ಬರಿಂದ ಹಣ ದೋಚಬೇಕು ಅಂತಾನು ಇಲ್ಲ. ನಡೆದ ಈ ಎಲ್ಲಾ ಘಟನೆಗಳನ್ನು ಜೀರ್ಣ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು..” ಎಂದು ಹೇಳಿದ್ದಾರೆ ನಟಿ ಪವಿತ್ರಾ ಲೋಕೇಶ್.

ಇನ್ನು ನಟ ನರೇಶ್ ಅವರು ಕೂಡ ಮಾತನಾಡಿ, “ಈ ಸಿನಿಮಾ ನಮ್ಮ ಲೈಫ್ ಸ್ಟೋರಿನೋ ಅಲ್ಲವೋ ಎನ್ನುವುದು ಸಿನಿಮಾ ನೋಡಿದ ನಂತರ ನಿಮಗೆ ಗೊತ್ತಾಗುತ್ತದೆ. ನಮಗೆ ಮದುವೆ ಆಗಿದ್ಯಾ ಅಂತ ಕೇಳಿದರೆ, ಮದುವೆ ಅಂದ್ರೆ ಏನು ? ತಾಳಿ, ಉಂಗುರ, ಇದೆಲ್ಲವೂ ಒಂದು ಸಂಕೇತ ಅಷ್ಟೇ..ಎರಡು ಹೃದಯಗಳು ಒಂದಾಗುವ ಪ್ರಕ್ರಿಯೆಯೇ ಮದುವೆ. ನಾವಿಬ್ಬರು ಜೊತೆಯಾಗಿ ಜೀವನ ಮಾಡ್ತಿದ್ದೀವಿ.. ಸಂತೋಷವಾಗಿದ್ದೇವೆ..” ಎಂದು ನಟ ನರೇಶ್ ಅವರು ಹೇಳಿದ್ದಾರೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Leave A Reply

Your email address will not be published.