Cricket News: ಇನ್ನೇನು ನಿವೃತ್ತಿ ಆಗಲಿರುವ ರೋಹಿತ್ ನಂತರ ನಾಯಕನಾಗುವುದು ಯಾರಂತೆ ಗೊತ್ತೇ? ಭವಿಷ್ಯ ನುಡಿದ ಹರ್ಭಜನ್ ಸಿಂಗ್.
Cricket News: ನಮ್ಮ ಟೀಮ್ ಇಂಡಿಯಾ (Team India) ಕ್ರಿಕೆಟ್ ಟೀಮ್ ನ ಮೂರು ಸ್ವರೂಪದ ಕ್ರಿಕೆಟ್ ತಂಡಕ್ಕೂ ನಾಯಕನಾಗಿ ಇರುವುದು ರೋಹಿತ್ ಶರ್ಮಾ (Rohit Sharma). ಇವರು ಇನ್ನೇನು ನಿವೃತ್ತಿ ಹೊಂದುವ ಅಂಚಿನಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜೂನ್ 7ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನ (World Test Championship) ಫೈನಲ್ ಪಂದ್ಯಗಳು ಶುರುವಾಗಲಿದ್ದು, ಭಾರತ ವರ್ಸಸ್ ಆಸ್ಟ್ರೇಲಿಯಾ (India vs Australia) ತಂಡಗಳ ವಿರುದ್ಧ ಪಂದ್ಯ ನಡೆಯಲಿದೆ..
ರೋಹಿತ್ ಶರ್ಮ ಅವರು ಈ ಪಂದ್ಯದ ನಂತರ ನಿವೃತ್ತಿ ಹೊಂದಿದ ಬಳಿಕ ತಂಡದ ಮುಂದಿನ ಆಟಗಾರ ಯಾರು ಎನ್ನುವ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh) ಅವರು ಮಾತನಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಅವರು ತಂಡದಲ್ಲಿ ಬದಲಾವಣೆ ಆಗಬೇಕು, ಯುವ ಆಟಗಾರರು ತಂಡಕ್ಕೆ ಬರಬೇಕು ಎಂದಿದ್ದಾರೆ. ಇದನ್ನು ಓದಿ..Rohit Sharma: ಈತ ಭಾರತದ ನಾಯಕನಾಗಿರುವುದೇ ಒಂದು ದುರಂತ- ಸ್ವಾರ್ಥಿಯಾಗಿ ರೋಹಿತ್ ಕೊಟ್ಟ ಹೇಳಿಕೆ ಏನು ಗೊತ್ತೇ?? ನೆಟ್ಟಿಗರು, ಮುಂಬೈ ಸ್ವಾರ್ಥಿ ಲಾಭಿ ಎಂದದ್ದು ಯಾಕೆ ಗೊತ್ತೇ?
ಹಾರ್ದಿಕ್ ಪಾಂಡ್ಯ (Hardik Pandya) ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಬೇಕು, ಶುಬ್ಮನ್ ಗಿಲ್ (Shubman Gill) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaisval) ಓಪನಿಂಗ್ ಬ್ಯಾಟ್ಸ್ಮನ್ ಆಗಬೇಕು. ತಿಲಕ್ ವರ್ಮಾ (Tilak Varma), ರಿಂಕು ಸಿಂಗ್ (Rinku Singh), ರಿತುರಾಜ್ ಗಾಯಕ್ವಾಡ್ (Ruthuraj Gaikwad), ನಿತೀಶ್ ರಾಣಾ (Nitish Rana) ಇವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಕೊಡಬೇಕು ಎಂದು ಹರ್ಭಜನ್ ಸಿಂಗ್ ಅವರು ಸಲಹೆ ಕೊಟ್ಟಿದ್ದಾರೆ. ಆದರೆ ಈಗ ತಂಡದ ಕ್ಯಾಪ್ಟನ್ ಆಗಿ ಜವಾಬ್ದಾರಿ ತೆಗೆದುಕೊಂಡಿರುವುದು ರೋಹಿತ್ ಶರ್ಮಾ ಅವರು.
ಇನ್ನು ಹರ್ಭಜನ್ ಸಿಂಗ್ ಅವರು ಹೆಸರಿಸಿರುವ ಎಲ್ಲಾ ಆಟಗಾರರು ಈ ವರ್ಷದ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆರ್.ಆರ್ (RR) ತಂಡದ ಆಟಗಾರ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಲ್ಲಿ 625 ರನ್ಸ್ ಗಳಿಸಿದ್ದು, ಇವರು ಅತ್ಯಂತ ಪ್ರತಿಭಾನ್ವಿತ ಆಟಗಾರ. ಇವರು ಟೀಮ್ ಇಂಡಿಯಾಗೆ ಎಂಟ್ರಿ ಕೊಡುವುದು ಖಂಡಿತ ಎಂದಿದ್ದಾರೆ ಹರ್ಭಜನ್ ಸಿಂಗ್. ಇದನ್ನು ಓದಿ..Post Office Jobs: ಮತ್ತೆ ಕೆಲಸ ಇಲ್ಲ ಅನ್ನಬೇಡಿ, ಕಡಿಮೆ ಓದಿದ್ದರೂ ನೇರವಾಗಿ ಪೋಸ್ಟ್ ಆಫೀಸ್ ನಲ್ಲಿ ಪಡೆಯಿರಿ ಕೆಲಸ- 12 ಸಾವಿರ ಪೋಸ್ಟ್ ಗಳು ಖಾಲಿ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?
Comments are closed.