Naresh Pavithra: ಈಗಲೂ ಮಕ್ಕಳು ಮಾಡಿಕೊಳ್ಳಬಹುದು, ಆದರೆ… ಷಾಕಿಂಗ್ ಹೇಳಿಕೆ ಕೊಟ್ಟ ನರೇಶ್-ಪವಿತ್ರ. ಈ ವಯಸಿನಲ್ಲಿ ಏನೆಲ್ಲಾ ಪ್ಲಾನ್ ಇದೆ ಗೊತ್ತೇ?
Naresh Pavithra: ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavitra Lokesh) ಇಬ್ಬರ ವಿಚಾರ ಬಹಳಷ್ಟು ಸುದ್ದಿಯಲ್ಲಿದೆ. ಇವರಿಬ್ಬರು ಕೂಡ ಮದುವೆ ಆಗುತ್ತಾರೆ, ಪ್ರೀತಿಸುತ್ತಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಇವರಿಬ್ಬರ ವಿಚಾರದಲ್ಲಿ ಮಾಧ್ಯಮಗಳ ಎದುರು ದೊಡ್ಡ ಹೈಡ್ರಾಮ ನಡೆಯಿತು. ಅದಕ್ಕೆ ಕಾರಣ ನರೇಶ್ ಅವರಿಗೆ ಅದಾಗಲೇ ಮೂರು ಮದುವೆಯಾಗು, ನಾಲ್ಕನೇ ಸಾರಿ ಪವಿತ್ರಾ ಲೋಕೇಶ್ ಅವರೊಡನೆ ಮದುವೆ ಆಗುತ್ತಾರೆ ಎನ್ನುವುದಾಗಿತ್ತು. ಇನ್ನು ಈ ಜೋಡಿ ಈಗ ತಮ್ಮ ಲೈಫ್ ಸ್ಟೋರಿಯನ್ನೇ ಸಿನಿಮಾ ಮಾಡಿದ್ದಾರೆ..
ಮೇ 26ರಂದು ಈ ಸಿನಿಮಾ ಬಿಡುಗಡೆ ಸಹ ಆಗಿದೆ, ಸಿನಿಮಾ ನೋಡಿದರೆ ನರೇಶ್ ಅವರು ತಮ್ಮ ಮೂರನೇ ಪತ್ನಿಯನ್ನೇ ಟಾರ್ಗೆಟ್ ಮಾಡಿ ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ. ಈ ಸಿನಿಮಾ ಪ್ರಚಾರದ ವೇಳೆ ನರೇಶ್ ಹಾಗೂ ಪವಿತ್ರಾ ಅವರಿಗೆ ಕೆಲವು ಪ್ರಶ್ನೆಗಳು ಮುಜುಗರ ತಂದವು, ಅದರಲ್ಲಿ ಒಂದು ಪ್ರಶ್ನೆ, ನೀವಿಬ್ಬರು ಮಗು ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದೀರಾ ಎನ್ನುವುದಾಗಿತ್ತು.. ಈ ಪ್ರಶ್ನೆಗೆ ಪವಿತ್ರಾ ಲೋಕೇಶ್ ಅವರು ಮೊದಲಿಗೆ ಉತ್ತರ ಕೊಡಲಿಲ್ಲ.. ನಂತರ ಮಾತನಾಡಿ, “ಇದು ಸೀಮಿತವಾಗದ ವಿಚಾರ.. ಸಮಾಜದಲ್ಲಿ ಎಷ್ಟೋ ಮಕ್ಕಳಿಗೆ ತಂದೆ ತಾಯಿ ಇಲ್ಲ. ಇದನ್ನು ಓದಿ..Kishore: ಮೋದಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಬ್ಯುಸಿ ಇದ್ದರೇ, ನಟ ಕಿಶೋರ್ ಠಕ್ಕರ್ ಕೊಟ್ಟಿದ್ದು ಹೇಗೆ ಗೊತ್ತೇ? ಮೋದಿ ಇವೆಲ್ಲ ಬೇಕಿತ್ತಾ??
ಹೀಗಿದ್ದಾಗ ಮಕ್ಕಳನ್ನು ಪಡೆಯುವ ಅವಶ್ಯಕತೆ ಏನು..? ನಾವಿಬ್ಬರು ಜೊತೆಯಾಗಿ ಮಾಡೋದಕ್ಕೆ ಇನ್ನು ಬಹಳಷ್ಟು ವಿಚಾರಗಳಿವೆ..” ಎಂದು ಹೇಳಿದ್ದಾರೆ. ಇನ್ನು ನರೇಶ್ ಅವರು ಮಾತನಾಡಿ, “ನಮ್ಮ ತಾಯಿ ವಿಜಯ ನಿರ್ಮಲಾ ಹಾಗೂ ತಂದೆ ಕೃಷ್ಣ ಅವರು ಹೇಗೆ ಭೇಟಿಯಾದರೋ ಅದೇ ಥರ ನಾವು ಭೇಟಿಯಾದೆವು.. ಮೊದಲಿಗೆ ನಾವು ನಮ್ಮ ಜೀವನವನ್ನು ಸರಿಪಡಿಸಿಕೊಳ್ಳಬೇಕು. ಇರುವ ಮಕ್ಕಳೆಲ್ಲಾ ನಮ್ಮ ಮಕ್ಕಳೇ, ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧಗಳು ಮುಖ್ಯ.. ತಂದೆ ತಾಯಿ ಅಗಲಿಕೆ ನಂತರ ನನಗೆ ಭಯವಾಗಿತ್ತು. ನನ್ನ ತಾಯಿ ಒಂದು ಮಾತು ಹೇಳುತ್ತಿದ್ದರು.. ನಿನಗೆ ನಾನು ಎಲ್ಲವನ್ನು ಕೊಟ್ಟೆ.. ಆದರೆ ಒಳ್ಳೆಯ ಸಂಗಾತಿಯನ್ನು ಕೊಡಲು ಆಗಲಿಲ್ಲ ಎನ್ನುತ್ತಿದ್ದರು.
ನನ್ನ ತಾಯಿ ಪವಿತ್ರಾ ರೂಪದಲ್ಲಿ ನನಗೆ ಮತ್ತೊಬ್ಬ ತಾಯಿಯನ್ನು ಕೊಟ್ಟಿದ್ದಾರೆ. ನನಗೆ ಆಕೆ ಮಗು, ಆಕೆಗೆ ನಾನು ಮಗು, ನಮಗೆ ಮಕ್ಕಳಿದ್ದಾರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಮಗು ಹೊಂದಲು ದೈಹಿಕ ಅರ್ಹತೆ ನಮಗೆ ಇದೆ. ಈ ವಿಷಯಗಳ ಬಗ್ಗೆ ಐದಾರು ವರ್ಷ ಚರ್ಚಿಸಿದ್ದೇವೆ..ಮಗು ಪಡೆಯುವ ಸಾಮರ್ಥ್ಯ ನಮಗೆ ಇದೆ, ಆದರೆ ಈಗ ಮಗುವನ್ನು ಪಡೆದರೆ ಅವರನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವ ಹೊತ್ತಿಗೆ ನಮಗೆ ವಯಸ್ಸಾಗಿರುತ್ತದೆ. ಅದೆಲ್ಲವೂ ದೈಹಿಕ ವಿಚಾರಗಳನ್ನು ಮೀರಿ ಹೋಗಬೇಕು..ಪವಿತ್ರಾ ನನಗೆ ಪವಿತ್ರಾ ದೇವತೆಯಾಗಿ, ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ಕಾಣುತ್ತಾರೆ. ಅವರು ಬಂದಮೇಲೆ ನನ್ನ ಜೀವನ ಬದಲಾಗಿದೆ. ಆಕೆಗೆ ನನ್ನ ಬಗ್ಗೆ ಮಾತು ಬೇಕಿಲ್ಲ, ನನ್ನ ಬ್ಯಾಂಕ್ ಅಕೌಂಟ್ ನಂಬರ್ ಕೂಡ ಆಕೆಗೆ ಗೊತ್ತಿಲ್ಲ..” ಎಂದಿದ್ದಾರೆ ನಟ ನರೇಶ್. ಇದನ್ನು ಓದಿ..Snehal Rai: ತನಗಿಂತ 21 ವರ್ಷ ದೊಡ್ಡ ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ ನಟಿ. ಕಾರಣ ಕೇಳಿದರೆ, ಕೈ ಎಲ್ಲ ನಡುಗುತ್ತದೆ. ಏನು ಗೊತ್ತೆ?
Comments are closed.