Neer Dose Karnataka
Take a fresh look at your lifestyle.

Virat Kohli: ಒಂಬತ್ತು ವರ್ಷಗಳಿಂದ ಕಾಯುತ್ತಿದ್ದ ದಿನ ಬಂದೆ ಬಿಡ್ತು- ಈ ಬಾರಿ ವಿರಾಟ್ ಕೊಹ್ಲಿ ಗೆ ಏಷ್ಯಾ ಕಪ್ ತುಂಬಾ ಸ್ಪೆಸಲ್. ಯಾಕೆ ಗೊತ್ತೇ?

Virat Kohli: ವಿರಾಟ್ ಕೊಹ್ಲಿ ಭಾರತದ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. ಐಪಿಎಲ್ ಹಾಗೂ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡ ಸೋತ ನಂತರ ಈಗ ವಿರಾಟ್ ಕೊಹ್ಲಿ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ವಿರಾಟ್ ಅವರು ಮುಂದೆ ವೆಸ್ಟ್ ಇಂಡೀಸ್ ಸೀರೀಸ್ ನಲ್ಲಿ ಪಾಲ್ಗೊಳ್ಳಲಿದ್ದು, ಅದಾದ ಬಳಿಕ ಏಷ್ಯಾಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಏಷ್ಯಾಕಪ್ 50 ಓವರ್ ಮಾದರಿಯಲ್ಲಿ ನಡೆಯಲಿದೆ.

ಈ ಮೊದಲು 2018ರಲ್ಲಿ ಏಷ್ಯಾಕಪ್ ಟೂರ್ನಿ 50 ಓವರ್ ಮಾದರಿಯಲ್ಲಿ ನಡೆದಿತ್ತು, ಆಗ ವಿರಾಟ್ ಅವರು ಏಷ್ಯಾಕಪ್ ಆಡಿರಲಿಲ್ಲ. ಕೊನೆಯದಾಗಿ ಅವರು 50 ಓವರ್ ಏಷ್ಯಾಕಪ್ ಆಡಿದ್ದು 2014ರಲ್ಲಿ. ಇದೀಗ 9 ವರ್ಷಗಳ ನಂತರ ವಿರಾಟ್ ಕೊಹ್ಲಿ ಅವರು 50 ಓವರ್ ಮಾದರಿಯ ಏಷ್ಯಾಕಪ್ ಟೂರ್ನಿಯನ್ನು ಆಡಲಿದ್ದು, 9 ವರ್ಷಗಳ ನಂತರ ಈ ಸಂಭವ ನಡೆಯುತ್ತಿದೆ. ಇದರಿಂದ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಸಂತೋಷಗೊಂಡಿದ್ದಾರೆ.. ಇದನ್ನು ಓದಿ..Asia Cup: ಬೇರೆ ಯಾರು ಬೇಡ, ಇವರಿಬ್ಬರು ಇದ್ದರೇ ಸಾಕು ಭಾರತ ತಂಡ ಏಷ್ಯಾ ಕಪ್ ಗೆದ್ದು ಬೀಗುತ್ತೇ. ಆ ಕಿಲಾಡಿ ಆಟಗಾರರು ಯಾರ್ಯಾರು ಗೊತ್ತೆ??

2014ರಲ್ಲಿ ವಿರಾಟ್ ಕೊಹ್ಲಿ ಅವರು 50 ಓವರ್ ಏಷ್ಯಾಕಪ್ ಆಡಿದ್ದಾಗ, 10 ಇನ್ನಿಂಗ್ಸ್ ಗಳಲ್ಲಿ 61.3 ಆವರೇಜ್ ನಲ್ಲಿ 613 ರನ್ಸ್ ಗಳಿಸಿದ್ದರು..ಓಡಿಐ ಏಷ್ಯಾಕಪ್ ನಲ್ಲಿ ವಿರಾಟ್ ಅವರ ಮ್ಯಾಕ್ಸಿಮಮ್ ಸ್ಕೋರ್ 183 ಆಗಿದ್ದು, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಈ ಸ್ಕೋರ್ ಬಂದಿತ್ತು. ಆ ಸಾಲಿನಲ್ಲಿ 3 ಅರ್ಧಶತಕಗಳು ಹಾಗೂ 1 ಶತಕ ಭಾರಿಸಿದ್ದರು ಕಿಂಗ್ ಕೊಹ್ಲಿ. ಆದರೆ ಆಗ ಭಾರತ ತಂಡ ಫೈನಲ್ಸ್ ತಲುಪಿರಲಿಲ್ಲ. ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದಿತ್ತು.

ಇನ್ನು 2023ರ ಓಡಿಐ ಏಷ್ಯಾಕಪ್ ಪಂದ್ಯದ ಬಗ್ಗೆ ಹೇಳುವುದಾದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯನ್ನು ಹೈಬ್ರಿಡ್ ರೀತಿಯಲ್ಲಿ ನಡೆಸಲಿದೆ. ಭಾರತ, ಪಾಕಿಸ್ತಾನ್, ಅಫ್ಘಾನಿಸ್ತಾನ್, ನೇಪಾಲ್ ಹಾಗೂ ಶ್ರೀಲಂಕಾ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಪಾಕಿಸ್ತಾನ್ ಹಾಗೂ ಶ್ರೀಲಂಕಾ ಎರಡು ಕಡೆ ಟೂರ್ನಿ ನಡೆಯಲಿದೆ. 6 ತಂಡಗಳನ್ನು 3 ತಂಡಗಳ ಎರಡು ಗುಂಪುಗಳಾಗಿ ವಿಂಗಡಣೆ ಮಾಡಲಾಗುತ್ತದೆ, ಒಂದೊಂದು ಗುಂಪಿನಲ್ಲಿ ಗೆಲ್ಲುವ ಎರಡು ತಂಡಗಳು ಸೂಪರ್ 4 ಹಂತವನ್ನು ತಲುಪಲಿದ್ದು, ಆ ಹಂತದಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್ಸ್ ನಲ್ಲಿ ಸೆಣೆಸಾಡಲಿದೆ. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

Comments are closed.