Ayushman Card: ನೀವು ಸುಲಭವಾಗಿ ಐದು ಲಕ್ಷ ಆಯುಷ್ಮನ್ ವಿಮೆಯನ್ನು ಪಡೆಯುವುದು ಹೇಗೆ ಗೊತ್ತೇ? ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೇ?
Ayushman Card: ಸರ್ಕಾರವು ದೇಶದ ಜನತೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಜನರಿಗೆ ಉಪಯೋಗ ಆಗುವುದೇ ಹೆಚ್ಚು. ರೇಷನ್ ಕಾರ್ಡ್ (Ration Card), ವಸತಿ ಯೋಜನೆ, ಇನ್ಷುರೆನ್ಸ್ (Insurance), ಪೆನ್ಶನ್ (Pension) ಸೇರಿದಂತೆ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ಅಂಥದ್ದೇ ಒಂದು ಯೋಜನೆ ಆಯುಶ್ಮಾನ್ ಭಾರತ್ ಪ್ರಧಾನ ಮಂತ್ರಿ ಯೋಜನೆ ಆಗಿದೆ (Ayushman Bharat Pradhana Mantri Yojane). ದೇಶದ ಸಾಕಷ್ಟು ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಒಂದು ವೇಳೆ ನೀವು ಕೂಡ ಈ ಯೋಜನೆಗೆ ಸೇರಿ, ಆಯುಶ್ಮಾನ್ ಕಾರ್ಡ್ ಪಡೆಯಬೇಕು ಎಂದರೆ, ಅದನ್ನು ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಆಯುಶ್ಮಾನ್ ಯೋಜನೆಯ ಮೂಲಕ ಅರ್ಹತೆ ಹೊಂದುವ ಜನರಿಗೆ ಉಚಿತ ಆರೋಗ್ಯ ಸೌಲಭ್ಯಗಳು ಸಿಗುತ್ತದೆ, 5 ಲಕ್ಷ ರೂಪಾಯಿವರೆಗು ನೀವು ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಯೋಜನೆಗೆ ಅರ್ಹತೆ ಹೊಂದುವವರಿಗೆ ಈ ಕಾರ್ಡ್ ಸಿಗಲಿದ್ದು, ಕಾರ್ಡ್ ನ ಮೂಲಕ ನೀವು ಆಸ್ಪತ್ರೆಯಲ್ಲಿ 5ಲಕ್ಷದವರೆಗು ಉಚಿತ ಚಿಕಿತ್ಸೆ ಪಡೆಯಬಹುದು. ಆಯುಶ್ಮಾನ್ ಕಾರ್ಡ್ ಪಡೆಯಲು ಕೆಲವು ಸ್ಟೆಪ್ಸ್ ಗಳನ್ನು ನೀವು ಫಾಲೋ ಮಾಡಬೇಕು.. ಅದರಲ್ಲಿ ಸ್ಟೆಪ್ 1 ಹೀಗಿದೆ. ಆಯುಶ್ಮಾನ್ ಕಾರ್ಡ್ ಪಡೆಯಲು ನಿಮಗೆ ಅರ್ಹತೆ ಇದೆಯೇ ಎಂದು ಮೊದಲು ನೀವು ಚೆಕ್ ಮಾಡಬೇಕು. ಇದಕ್ಕಾಗಿ pmjay.gov.in ಪೋರ್ಟಲ್ ಗೆ ಭೇಟಿ ನೀಡಿ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.
ಸ್ಟೆಪ್ 2..
ಅಲ್ಲಿ ಕ್ಲಿಕ್ ಮಾಡಿದಾಗ, ನಿಮ್ಮ ಮೊಬೈಲ್ ನಂಬರ್ ಅನ್ನು ಕೇಳುತ್ತದೆ, ನಿಮ್ಮ ನಂಬರ್ ಹಾಕಿ.. ಬಳಿಕ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ವೆಬ್ಸೈಟ್ ನಲ್ಲಿ ಹಾಕಿ. ಬಳಿಕ ನಿಮ್ಮ ಎದುರಲ್ಲಿ ಎರಡು ಆಯ್ಕೆ ಬರುತ್ತದೆ. ಮೊದಲು ನೀವು ನಿಮ್ಮ ರಾಜ್ಯ ಯಾವುದು ಎಂದು ಆಯ್ಕೆ ಮಾಡಬೇಕು..
ಸ್ಟೆಪ್ 3..
ರಾಜ್ಯವನ್ನು ಆಯ್ಕೆ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಬೇಕಾಗುತ್ತದೆ. ಈಗ ನಿಮಗೆ ಸರ್ಚ್ ಆಪ್ಶನ್ ಬರುತ್ತದೆ. ಸರ್ಚ್ ಆಪ್ಶನ್ ಆಯ್ಕೆ ಮಾಡುವ ಮೂಲಕ ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು. ಇದನ್ನು ಓದಿ..Jobs: ನೀವು SSLC, ಅಥವಾ PUC ಪಾಸ್ ಆಗಿದ್ದೀರಾ?? ಹಾಗಿದ್ದರೆ ಈ ಕೂಡಲೇ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ- ಉದ್ಯೋಗ ಪಡೆಯಿರಿ.
Comments are closed.