Dukati Panigale: ಹೊಸದಾಗಿ ಬಿಡುಗಡೆಯಾಗುತ್ತಿರುವ ಡುಕಾಟಿ- ಈ 69.99 ಲಕ್ಷದ ಬೈಕ್ ಹೇಗಿರಲಿದೆ, ಏನೆಲ್ಲಾ ಇರುತ್ತದೆ ಗೊತ್ತೇ?
Dukati Panigale: ಡುಕಾಟಿ ಇಂಡಿಯಾ ಸಂಸ್ಥೆ ಈಗ ಭಾರತದಲ್ಲಿ Dukati Panigale V4 R ಬೈಕ್ ಅನ್ನು ಲಾಂಚ್ ಮಾಡಿದೆ. ಈ ಬೈಕ್ ನ ಶೋರೂಮ್ ಬೆಲೆ ₹69.90 ಲಕ್ಷ ರೂಪಾಯಿ ಆಗಿದೆ. ಈಗಾಗಲೇ ಈ ಬೈಕ್ ನ ಬುಕಿಂಗ್ಸ್ ಶುರುವಾಗಿದೆ. ಈಗಾಗಲೇ 5 ಬೈಕ್ ಗಳು ಭಾರತಕ್ಕೆ ಬಂದು ಸೋಲ್ಡ್ ಔಟ್ ಆಗಿದೆ. ಸ್ಟ್ಯಾಂಡರ್ಡ್ Dukati Panigale ಬೈಕ್ ನ ಹೈಯರ್ ವರ್ಷನ್ ಬೈಕ್ ಇದಾಗಿದೆ. ಈ ಬೈಕ್ ಬಗ್ಗೆ ಹೇಳುವುದಾದರೆ, Dukati Panigale V4 R ಬೈಕ್ ಹೊಸ 998cc Desmosedici Stardale R ಆಗಿದೆ.
ಇದರಲ್ಲಿ 6 ಗೇರ್ ಇದ್ದು, 16,500 rpm ಇದೆ. ಈ ಬೈಕ್ ನ ಇಂಜಿನ್ 15,500 rpm ನಲ್ಲಿ 215bhp ಉತ್ಪಾದನೆ ಮಾಡುತ್ತದೆ. 12000rpm ನಲ್ಲಿ 111.3 Nm ಟಾರ್ಕ್ ಔಟ್ ಪುಟ್ ಕೊಡುತ್ತದೆ. 6Speed Gear box ಜೊತೆಗೆ ಬೈ ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಇರುತ್ತದೆ. ಒಂದು ವೇಳೆ ರೇಸ್ ಮಾಡುವುದಾದರೆ, 15,500 rpm ನಲ್ಲಿ 233 bhp ಹಾಗೂ 12500rpm ನಲ್ಲಿ 118Nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದನ್ನು ಓದಿ..LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.
ಈ ಬೈಕ್ ನ ಸಸ್ಪೆನ್ಷನ್ ಡ್ಯೂಟಿ 43mm Ohlins NPX 25/30 front forks ಹಾಗೂ Ohlins TTX36 Rear Mono Shock ಹೊಂದಿದೆ. ಈ ಎರಡು ಕೂಡ ಚೆನ್ನಾಗಿ ಅಡ್ಜಸ್ಟ್ ಆಗುತ್ತದೆ. ಈ ಬೈಕ್ ನ ಬ್ರೇಕ್ 320 mm ಡಿಸ್ಕ್ ಹೊಂದಿದೆ, dukati panigale ಬೈಕ್ ನಲ್ಲಿ Brembo Monobloc Stylema M4.30 ಖ್ಯಾಲಿಪರ್ಸ್ ಹಾಗೂ 4 ಪಿಸ್ಟನ್ ಇದೆ. ಹಾಗೆಯೇ 245mm ಸಿಂಗಲ್ ರೋಟರ್, ಹಾಗೂ ಎರಡು ಪಿಸ್ಟನ್ ಕ್ಯಾಲಿಪರ್ ಹೊಂದಿದೆ.
ಈ dukati panigale ಬೈಕ್ ನಲ್ಲಿ ಎಲೆಕ್ಟ್ರಾನಿಕ್ ಪ್ಯಾಕೇಜ್ ಇದೆ. Dukati Panigale V4 R ಬೈಕ್ ನಲ್ಲಿ Traction Control , Ride by Wire, ರೈಡಿಂಗ್ ಮೋಡ್ ಗಳು, ಎಂಜಿನ್ ಬ್ರೇಕ್ ಕಂಟ್ರೋಲ್, ಪವರ್ ಮೋಡ್ಸ್, ABS, ಲಾಂಚ್ ಕಂಟ್ರೋಲ್, wheelie ಕಂಟ್ರೋಲ್, ಸೈಡ್ ಕಂಟ್ರೋಲ್ ಸಹ ಇದೆ. ಇದರಲ್ಲಿ TFT ಸ್ಕ್ರೀನ್ ಸಹ ಇದೆ. ಇದನ್ನು ಬೈಕ್ ನ ಹಲವು ಆಯಾಮಗಳನ್ನು ಕಂಟ್ರೋಲ್ ಮಾಡಬಹುದು. ಈ ಬೈಕ್ ನ ಲಾಂಚ್ ಬಗ್ಗೆ ಡುಕಾಟಿ ಇಂಡಿಯಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಬಿಪುಲ್ ಚಂದ್ರ ಅವರು ಮಾತನಾಡಿದ್ದಾರೆ. ಇದನ್ನು ಓದಿ..JIO 5G Phone: ವಿಶ್ವದ ಅತ್ಯಂತ ಅಗ್ಗದ 5 ಜಿ ಫೋನ್ ಬಿಡುಗಡೆಗೆ ಮುಂದಾದ ಅಂಬಾನಿ- ಎಷ್ಟು ಕಡಿಮೆ ಬೆಲೆ ಗೊತ್ತೇ??
“ಇದು ರೇಸಿಂಗ್ ಬೈಕ್ ಗಳಿಗೆ ಬಹಳ ಕ್ಲೋಸ್ ಕಾಂಪಿಟೇಶನ್ ಆಗಿರುವ ಬೈಕ್ ಆಗಿದೆ. ಡುಕಾಟಿ ಸಂಸ್ಥೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಮೋಟೋ ಜಿಪಿ ಹಾಗೂ ವರ್ಲ್ಡ್ ಎಸ್.ಬಿಕೆ ಚಾಂಪಿಯನ್ಶಿಪ್ ನಲ್ಲಿ ಸಕ್ಸಸ್ ಕಂಡಿದೆ. ಮೊದಲ 5 ಬೈಕ್ ಗಳು ಭಾರತ ತಲುಪಿ ಬಹಳ ಬೇಗ ಸೋಲ್ಡ್ ಔಟ್ ಆದವು..” ಎಂದು ಬೈಕ್ ಬಗ್ಗೆ ಹೇಳಿದ್ದಾರೆ. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?
Comments are closed.