News: ಬಂತು ಬಂತು ಖಡಕ್ ಎಚ್ಚರಿಕೆ- ಬಕ್ರೀದ್ ಹಬ್ಬಕ್ಕೂ ಮುನ್ನವೇ ಶುರುವಾಯ್ತು- ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ಹೇಳಿಕೆ.
News: ನಾಳೆ ಮುಸ್ಲಿಂ ಬಾಂಧವರು ಬಕ್ರೀದ್ (Bakrid) ಹಬ್ಬ. ಈ ಹಬ್ಬ ಅವರಿಗೆ ಬಹಳ ವಿಶೇಷವಾದದ್ದು, ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಾರೆ. ಇನ್ನೇನು ನಾಳೆ ಹಬ್ಬ ಎನ್ನುವ ವೇಳೆಯಲ್ಲಿ ಮಂಗಳೂರಿನ (Mangalore) ಕಮಿಷನರ್ ಕಡೆಯಿಂದ ಖಡಕ್ ಹೇಳಿಕೆ ಬಂದಿದೆ. ಈ ಸಮಯದಲ್ಲಿ ಯಾವುದೇ ತೊಂದರೆ ಆಗದ ಹಾಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಷ್ಟಕ್ಕೂ ಏನಿದು ಕ್ರಮಗಳು? ಪೂರ್ತಿಯಾಗಿ ತಿಳಿಸುತ್ತೇವೆ ಲೇಖನವನ್ನು ಓದಿ..
ಈ ಸಂದರ್ಭದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವಂಥ ಕೆಲಸ ಮಾಡುವವರ ಮೇಲೆ ಕಠಿಣವಾದ ತೆಗೆದುಕೊಳ್ಳಲಾಗುತ್ತದೆ ಎಂದು ಮಂಗಳೂರಿನ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ (Kuldeep Kumar Jain) ಅವರು ತಿಳಿಸಿದ್ದಾರೆ. ನಾಳೆ ಬಕ್ರೀದ್ ಹಬ್ಬ ಇರುವ ಕಾರಣದಿಂದ ಶಾಂತಿ ಇರಬೇಕು ಎಂದು ಈ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಂದುವರೆದು ಮಾತನಾಡಿರುವ ಕುಲದೀಪ್ ಜೈನ್ ಅವರು.. ಇದನ್ನು ಓದಿ..Electricity Bill: ನಿಮ್ಮ ಮನೆಯ ಕರೆಂಟ್ ಬಿಲ್ ಮತ್ತಷ್ಟು ಜಾಸ್ತಿ- ಶಾಕ್ ಕೊಟ್ಟ ಕೇಂದ್ರ- ಎಷ್ಟಾಗಲಿದೆ ಗೊತ್ತೆ?
“ಈ ಹಿಂದಿನ 15 ದಿನಗಳಿಂದ ಮಂಗಳೂರಿನಲ್ಲಿ ಶಾಂತಿ ಸಭೆಯನ್ನು ನಡೆಸಲಾಗುತ್ತಿದೆ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಈಗ ನಾವು ಕಮಿಷನರೇಟ್ ವ್ಯಾಪ್ತಿಗೆ ಬರುವಲ್ಲಿ ಚೆಕ್ ಪೋಸ್ಟ್ ವ್ಯವಸ್ಥೆ ಕೂಡ ಮಾಡಿದ್ದೇವೆ. ಇಡೀ ದಿನ 24 ಗಂಟೆಗಳ ಕಾಲ ಬರುವ ಪ್ರತಿಯೊಂದು ವಾಹನವನ್ನು ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ..”ಎಂದಿದ್ದಾರೆ. ಈ ಸಮಯದಲ್ಲಿ ಯಾವುದೇ ಸಂಘ ಸಂಘಟನೆಗಳು ಕಾನೂನನ್ನು ಮೀರುವ ಹಾಗಿಲ್ಲ..
ಹಾಗೇನಾದರೂ ಮಿತಿ ಮೀರಿ ಕಾನೂನನ್ನು ಕೈಗೆ ತೆಗೆದುಕೊಂಡರೆ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.. ಇದುವರೆಗೂ ಅಕ್ರಮ ಗೋಸಾಗಣಿಕೆ ಕೇಸ್ ನಲ್ಲಿ ಸಿಕ್ಕವರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಎಲ್ಲರನ್ನು ಕರೆಸಿ ವಾರ್ನಿಂಗ್ ಕೂಡ ಕೊಟ್ಟಿದ್ದೇವೆ..” ಎಂದು ಕುಲದೀಪ್ ಅವರು ತಿಳಿಸಿದ್ದಾರೆ. ಇದರ ಬಗ್ಗೆ ನಳಿನ್ ಕುಮಾರ್ ಅವರು ಸಹ ಮಾತನಾಡಿದ್ದಾರೆ. ಇದನ್ನು ಓದಿ..ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?
“ನಮ್ಮ ಭಾರತ ದೇಶ ಯಾವಾಗಲೂ ಗೋ ರಕ್ಷಣೆಗೆ ಆದ್ಯತೆ ಕೊಟ್ಟ ದೇಶ. ಗೋವು ನಮ್ಮ ಸಂಸ್ಕೃತಿಯ ಪ್ರತೀಕ..” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ (Nalin Kumar) ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದೆ, ಈ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆ ಮಾಡುತ್ತಿದೆ. ಮಹಾತ್ಮ ಗಾಂಧಿ ಅವರು ದನಗಳ ಸಂರಕ್ಷಣೆ ಬಗ್ಗೆ ಹೇಳಿದ್ದರು, ಇವುಗಳಿಗೆ ರಕ್ಷಣೆ ಕೊಡಬೇಕು..ಎಂದು ಹೇಳಿದ್ದಾರೆ. ಇದನ್ನು ಓದಿ..AI Jobs: ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಗ್ ಶಾಕ್ ಕೊಟ್ಟ AI – ಇನ್ನು ಮುಂದೆ ಸುದ್ದಿ ಪ್ರಸಾರ ಹೇಗೆ ಆಗಲಿದೆ ಗೊತ್ತೇ?
Comments are closed.