Pushpa: ಅಲ್ಲು ಅರ್ಜುನ್ ಐಟಂ ಹಾಡಿಗೆ ಸಮಂತಾ, ದಿಶಾ ಪಟಾನಿ ಅಲ್ಲ ದೇವಲೋಕದ ಅಪ್ಸರೆಯಂತೆ ಇರುವ ನಟಿ ಆಯ್ಕೆ
Pushpa: ನಟ ಅಲ್ಲು ಅರ್ಜುನ್ (Allu Arjun) ಅವರ ಪುಷ್ಪ (Pushpa) ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಪುಷ್ಪ (Pushpa) ಸಿನಿಮಾ ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಅತಿಹೆಚ್ಚು ಹಣಗಳಿಕೆ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಪಾತ್ರ ಮತ್ತು ಅವರ ಮ್ಯಾನರಿಸಂ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಗಿತ್ತು.
ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಕುಮಾರ್ (Sukumar) ಅವರು ನಿರ್ದೇಶನ ಮಾಡಿದರು. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹೀರೋಯಿನ್ ಆಗಿ ನಟಿಸಿ, ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಎಲ್ಲರ ಮನಗೆದ್ದಿದ್ದರು. ಇನ್ನು ಈ ಸಿನಿಮಾದಲ್ಲಿ ಉ ಅಂಟಾವ ಮಾವ ಹಾಡಲ್ಲಿ ನಟಿ ಸಮಂತಾ (Samantha) ಅವರು ಹೆಜ್ಜೆ ಹಾಕಿದ್ದು, ಎಲ್ಲೆಡೆ ವೈರಲ್ ಆಗಿತ್ತು.. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.
ಈ ಹಾಡನ್ನು ದೇವಿಶ್ರೀ ಪ್ರಸಾದ್ (Devisri Prasad) ಅವರು ಮ್ಯೂಸಿಕ್ ನೀಡಿ, ಖ್ಯಾತ ಗಾಯಕಿ ಮಂಗ್ಲಿ (Mangli) ಅವರ ತಂಗಿ ಇಂದ್ರವತಿ ಚೌಹಾಣ್ (Indravati Chauhan) ಹಾಡಿದ್ದರು. ಸಮಂತಾ ಅವರ ಲೈಫ್ ಗೆ ಈ ಹಾಡು ದೊಡ್ಡ ಬದಲಾವಣೆಯನ್ನೇ ನೀಡಿತು. ಆಗಷ್ಟೇ ಸಮಂತಾ ಅವರು ನಾಗಚೈತನ್ಯ (Nagachaitanya) ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಅವರು ಮೊದಲ ಸಾರಿ ನಟಿಸಿದ್ದು ಈ ಹಾಡಿನಲ್ಲೇ, ಈ ಹಾಡು ಸಮಂತಾ ಅವರಿಗೆ ದೊಡ್ಡ ಹೆಸರನ್ನೇ ನೀಡಿತು.
ಇನ್ನು ಪುಷ್ಪ2 ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಯಾವ ಕಲಾವಿದೆ ನಟಿಸಬಹುದು ಎಂದು ಚರ್ಚೆ ಶುರುವಾಗಿದ್ದು, ಸಮಂತಾ ಅವರೇ ಮತ್ತೆ ಹೆಜ್ಜೆ ಹಾಕುತ್ತಾರಾ, ಅಥವಾ ಬಾಲಿವುಡ್ ನಟಿ ದಿಶಾ ಪಟಾಣಿ (DIsha Patani) ಅವರು ನಟಿಸುತ್ತಾರಾ ಎನ್ನುವ ಚರ್ಚೆ ನಡೆಯುತ್ತಲೇ ಇತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಇವರ್ಯಾರು ಅಲ್ಲ.. ಪುಷ್ಪ2 ಸಿನಿಮಾದಲ್ಲಿ ನಟಿ ಊರ್ವಶಿ ರೌಟೇಲ (Urvashi Rautela) ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿದೆ. ಇದನ್ನು ಓದಿ..Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ
ಊರ್ವಶಿ ರೌಟೇಲ ಅವರು ಬಾಲಿವುಡ್ ನಟಿಯಾಗಿದ್ದರು ಅವರಿಗೆ ಅಷ್ಟೇನು ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ, ಕನ್ನಡದಲ್ಲಿ ಸಹ ಇವರು ನಟ ದರ್ಶನ್ ಅವರು ಐರಾವತ ಸಿನಿಮಾದಲ್ಲಿ ನಟಿಸಿದರು. ಊರ್ವಶಿ ಅವರು ತೆಲುಗಿನಲ್ಲಿ ವಾಲ್ಟರ್ ವೀರಯ್ಯ, ಏಜೆನ್ಟ್ ಸೇರಿದಂತೆ ಇನ್ನು ಕೆಲವು ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗಳಲ್ಲಿ ನಟಿಸಿದ್ದಾರೆ. ಇದೀಗ ಪುಷ್ಪ2 ಸಿನಿಮಾದಲ್ಲೂ ಅವರೇ ಹೆಜ್ಜೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ
Comments are closed.