Rupay Card: ಭಾರತದ ರೂಪೇ ಕಾರ್ಡ್ ಬೇರೆ ವಿದೇಶಿ ಕಾರ್ಡ್ ಗಳಿಗಿಂತ ಬೆಸ್ಟ್- ಕಾರಣಗಳೇನು ಗೊತ್ತೇ? ಬ್ಯಾಂಕ್ ನಲ್ಲಿ ರೂಪೇ ಕಾರ್ಡ್ ಕೇಳಿ ಪಡೆಯಿರಿ.
Rupay Card: ಕ್ರೆಡಿಟ್ ಕಾರ್ಡ್ ಎಂದರೆ ಸಾಮಾನ್ಯವಾಗಿ ಎಲ್ಲರೂ ವೀಸಾ ಕಾರ್ಡ್ (Visa Card) ಅಥವಾ ಮಾಸ್ಟರ್ ಕಾರ್ಡ್ (Master Card) ಬಳಸುತ್ತಾರೆ. ಆದರೆ ಸರ್ಕಾರದ ಮಾನ್ಯತೆ ಪಡೆದಿರುವ ರುಪೇ ಕಾರ್ಡ್ (Rupay Card) ಕೂಡ ಈಗ ಕ್ರೆಡಿಟ್ ಕಾರ್ಡ್ ಪಟ್ಟಿಯಲ್ಲಿದೆ. ಇದು ಸರ್ಕಾರದ ಸಪೋರ್ಟ್ ಪಡೆದಿರುವ, ಸರ್ಕಾರದ ಸಂಸ್ಥೆಯೇ ರೂಪಿಸಿರುವ ಕಾರ್ಡ್ ಆಗಿರುವುದರಿಂದ ರುಪೇ ಕಾರ್ಡ್ (Rupay Card) ಸುರಕ್ಷಿತವಾಗಿರುತ್ತದೆ, ಹಾಗೆಯೇ ವಿಶ್ವಾಸ ಪಡೆಯುತ್ತದೆ. ಕಾರ್ಡ್ ನೆಟ್ವರ್ಕ್ ಗಳಲ್ಲಿ ರುಪೇ ಕಾರ್ಡ್ (Rupay Card) ಇದ್ದು, ಈ ಕಾರ್ಡ್ ನೆಟ್ವರ್ಕ್ ಗಳು ನೇರವಾಗಿ ಗ್ರಾಹಕರಿಗೆ ಕಾರ್ಡ್ ನೀಡುವುದಿಲ್ಲ. ಬ್ಯಾಂಕ್ ಗಳ ಮೂಲಕ ಗ್ರಾಹಕರಿಗೆ ನೀಡುತ್ತದೆ.
ಬ್ಯಾಂಕ್ ಗಳು ನೆಟ್ವರ್ಕ್ ಕಂಪನಿಗಳ ಸಹಭಾಗಿತ್ವದ ಜೊತೆಗೆ ಜನರಿಗೆ ಕಾರ್ಡ್ ಗಳನ್ನು ನೀಡುತ್ತದೆ. ಎಲ್ಲಾ ಬ್ಯಾಂಕ್ ಗಳು ಎಲ್ಲಾ ಕಾರ್ಡ್ ಗಳ ಆಯ್ಕೆಯನ್ನು ಗ್ರಾಹಕರಿಗೆ ಕೊಡಬೇಕು ಎಂದು ಸರ್ಕಾರ ಆದೇಶ ನೀಡಿತ್ತು. HDFC ಬ್ಯಾಂಕ್ ನಲ್ಲಿ ನಿಮಗೆ ವೀಸಾ ಕಾರ್ಡ್ ಅಥವಾ ಮಾಸ್ಟರ್ ಕಾರ್ಡ್ ಅಥವಾ ರುಪೇ ಕಾರ್ಡ್ (Rupay Card) ಎಲ್ಲವೂ ಸಿಗುತ್ತದೆ. ಹಾಗೆಯೇ ಯುಪಿಐ ಪೇಮೆಂಟ್ (UPI Payment) ಗೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಆಯ್ಕೆಯನ್ನು ಸರ್ಕಾರ ನೀಡಿದೆ. ಇಂದು ನಿಮಗೆ ರುಪೇ ಕಾರ್ಡ್ (Rupay Card) ಬಳಸುವುದರಿಂದ ಏನೆಲ್ಲಾ ಅನುಕೂಲ ಸಿಗುತ್ತದೆ ಈ ದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
*ಬಹಳಷ್ಟು ಕ್ರೆಡಿಟ್ ಕಾರ್ಡ್ ಇದ್ದು, ಅದರಲ್ಲಿ ರುಪೇ ಭಾರತ ಕ್ರೆಡಿಟ್ ಕಾರ್ಡ್ ಆಗಿದೆ, ಇದರ ಸರ್ವರ್ ನಮ್ಮ ದೇಶದ್ದೆ ಆಗಿರುವುದರಿಂದ ವಹಿವಾಟುಗಳು ಯಾವುದೇ ತೊಂದರೆ ಆಗದ ಹಾಗೆ ನಡೆಯುತ್ತದೆ.
*ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ (NPCI) ರುಪೇ ಕಾರ್ಡ್ (Rupay Card) ತಯಾರಿಸುತ್ತದೆ.. ಈ ಕಾರ್ಡ್ ವಿಷಯಾದಲ್ಲಿ ಮೋಸ, ವಂಚನೆ ಆಗದೆ ಇರುವ ಹಾಗೆ ಸೆಕ್ಯೂರ್ ಮಾಡಲಾಗಿದೆ.
*ರುಪೇ ಕಾರ್ಡ್ (Rupay Card) ಗೆ ಭರಿಸುವ ವಾರ್ಷಿಕ ಶುಲ್ಕ ಮತ್ತು ಪ್ರವೇಷ ಶುಲ್ಕ ಎರಡು ಸಹ ಬಹಳ ಕಡಿಮೆ ಇದೆ.
*ರುಪೇ ಕ್ರೆಡಿಟ್ ಕಾರ್ಡ್ (Rupay Card) ಅನ್ನು ಯುಪಿಐ ಗೆ ಲಿಂಕ್ ಮಾಡಬಹುದು. ಬೇರೆ ಕ್ರೆಡಿಟ್ ಕಾರ್ಡ್ ಗಳನ್ನು ಲಿಂಕ್ ಮಾಡಲಾಗುವುದಿಲ್ಲ.
*ಹೆಚ್ಚಿನ ಸುರಕ್ಷತೆಗಾಗಿ ರುಪೇ ಕಾರ್ಡ್ (Rupay Card) ನಲ್ಲಿ ಆಂಟಿ ಫಿಶಿಂಗ್ ಟೆಕ್ನಾಲಜಿ ಅಳವಡಿಸಲಾಗಿದೆ ಜೊತೆಗೆ EMV ಚಿಪ್ಸೆಟ್ ಹೊಂದಿದೆ. ಇದರಿಂದ ಮೋಸ ಆಗುವುದು ಬಹಳ ಕಡಿಮೆ ಆಗಿದೆ.
*ರುಪೇ ನೆಟ್ವರ್ಕ್ ನಲ್ಲಿ ಹಲವು ಗ್ರೂಪ್ ಗಳಿಗೆ, ಹ್ಯಾಬಿಟ್ ಗೆ ತಕ್ಕ ಹಾಗೆ ಹಲವು ಬಹಳಷ್ಟು ಆಯ್ಕೆಗಳಿವೆ..
*ರುಪೇ ಕಾರ್ಡ್ (Rupay Card) ನಲ್ಲಿ ರಿವಾರ್ಡ್ ಮತ್ತು ಡಿಸ್ಕೌಂಟ್ ಜಾಸ್ತಿ ಸಿಗುತ್ತದೆ.
ರುಪೇ ಕಾರ್ಡ್ (Rupay Card) ನಲ್ಲಿ ಕೆಲವು ಅನಾನುಕೂಲತೆ ಸಹ .. ಅವು ಯಾವುವು ಎಂದರೆ..
*ಬೇರೆ ದೇಶಗಳಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಬಳಸುವ ಪಿಒಎಸ್ ಗಳು ಇರುವುದು ಕಡಿಮೆ.
*ವೀಸಾ ಮತ್ತು ಮಾಸ್ಟರ್ ಕಾರ್ಡ್ ಗಿಂತ ರುಪೇ ಕಾರ್ಡ್ (Rupay Card) ನಲ್ಲಿ ಕ್ರೆಡಿಟ್ ಲಿಮಿಟ್ ಕಡಿಮೆ ಇರುತ್ತದೆ. ಇದನ್ನು ಓದಿ..Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.
ಈ ಅನಾನುಕೂಲತೆಗಳನ್ನು ಸರಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ, ರುಪೇ ಕ್ರೆಡಿಟ್ ಕಾರ್ಡ್ ಗೆ ಬೇರೆ ದೇಶದಲ್ಲಿ ಮಾನ್ಯತೆ ಸಿಗಬೇಕು ಎಂದು ಪೋರೆಕ್ಸ್ ಕಾರ್ಡ್, ಪ್ರೀಪೇಯ್ಡ್ ಕಾರ್ಡ್ ಇದೆಲ್ಲವನ್ನು ಸಹ ನೀಡುತ್ತಿದೆ. ಇದಕ್ಕೆ ಒಂದು ಪರಿಹಾರ ಕ್ರೆಡಿಟ್ ಕಾರ್ಡ್ ನ ಟ್ರಾನ್ಸ್ಫರ್ ವ್ಯವಸ್ಥೆಯನ್ನು ಸರ್ಕಾರ ತರಬೇಕು. ಒಂದು ಕ್ರೆಡಿಟ್ ಕಾರ್ಡ್ ಇಂದ ಇನ್ನೊಂದು ಕ್ರೆಡಿಟ್ ಕಾರ್ಡ್ ಗೆ ಬದಲಾಯಿಸಲು ಅವಕಾಶವನ್ನು ಬ್ಯಾಂಕ್ ಗಳು ಗ್ರಾಹಕರಿಗೆ ನೀಡಬೇಕು. ಹೀಗೆ ಮಾಡಿದರೆ ಸಹಾಯ ಆಗಬಹುದು. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?
Comments are closed.