Neer Dose Karnataka
Take a fresh look at your lifestyle.

News: ದೊಡ್ಡ ಶಾಕ್- ತುಸು ನೆಮ್ಮದಿ- ಹಾಲಿನ ದರ ಹೆಚ್ಚಳದ ಕುರಿತು ಮಹತ್ವದ ನಿರ್ಧಾರ- ಆದರೆ ನೀವಂದು ಕೊಂಡಷ್ಟು ಅಲ್ಲ.

News: ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆಯ ಬಿಸಿ ಜೋರಾಗಿದೆ.. ದಿನನಿತ್ಯ ಬಳಸುಗ ವಸ್ತುಗಳ ಬೆಲೆ, ತರಕಾರಿ ಬೆಲೆ ಜಾಸ್ತಿಯಾಗಿ, ಜನರು ಅವುಗಳನ್ನು ಕೊಂಡುಕೊಳ್ಳುವುದಕ್ಕೆ ಕಷ್ಟವಾಗಿದೆ. ಪರಿಸ್ಥಿತಿ ಹೀಗಿರುವಾಗ, ಹಾಲಿನ ದರವನ್ನು ಹೆಚ್ಚಳ ಮಾಡುವ ನಿರ್ಧಾರ ಮಾಡಲಾಗಿದೆ (News). ಕೆಎಂಎಫ್ (KMF) ಇದರ ಬಗ್ಗೆ ನಿರ್ಧಾರ ಮಾಡಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಅವರೊಡನೆ ಸಭೆ ನಡೆಸಲಾಗುತ್ತದೆ.

milk cost will at least rise 3 rupees in karnataka
milk cost will at least rise 3 rupees in karnataka

ಮುಂದಿನ ವಾರದಿಂದಲೇ ಹೊಸ ಹಾಲಿನ ದರ ಜಾರಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಕೆಎಂಎಫ್ ಅಧಿಕಾರಿಗಳು ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಒಪ್ಪಿಗೆಯೊಂದು ಬಾಕಿ ಉಳಿದಿದೆ (News). ಕೆಎಂಎಫ್ ಅಧಿಕಾರಿಗಳು ಸಿದ್ದರಾಮಯ್ಯ ಅವರ ಜೊತೆಗೆ ಶುಕ್ರವಾರ ಸಭೆ ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??

ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದ್ದು, ಮುಂದಿನ ಸಭೆಯಲ್ಲಿ ನಿರ್ಧಾ ಕೈಗೊಳ್ಳಲಾಗುತ್ತದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರು ಬೆಲೆ ಹೆಚ್ಚಳಕ್ಕೆ ಒಪ್ಪಿಕೊಳ್ಳುವ ಸಾಧ್ಯೆತೆ ಜಾಸ್ತಿ ಇದೆ ಎಂದು ಹೇಳಲಾಗುತ್ತಿದೆ (News)..ಕೆಎಂಎಫ್ ಮಾಡಿದ್ದ ನಿರ್ಧಾರ ಏನು ಎಂದರೆ, ಪ್ರತಿ ಲೀಟರ್ 5 ರೂಪಾಯಿ ಹೆಚ್ಚಳ ಮಾಡುವ ನಿರ್ಧಾರ ಮಾಡಿದ್ದು, ಇದರಲ್ಲಿ 3 ರೂಪಾಯಿ ರೈತರಿಗೆ ಇನ್ನು 2 ರೂಪಾಯಿ ಸಂಸ್ಕರಣ ವೆಚ್ಚ ಎಂದು ಹೇಳಲಾಗುತ್ತಿದೆ.

ಆದರೆ ಸರ್ಕಾರ 5 ರೂಪಾಯಿ ಹೆಚ್ಚಳಕ್ಕೆ ಒಪ್ಪಿಕೊಳ್ಳುತ್ತಾ, ಅಥವಾ 2 ರಿಂದ 3 ರೂಪಾಯಿ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಕೊಡಬಹುದು ಎಂದು ಹೇಳಲಾಗುತ್ತಿದೆ (News). 2 ಅಥವಾ 3 ರೂಪಾಯಿ ಏರಿಕೆ ಅಂತೂ ಪಕ್ಕಾ ಎನ್ನಲಾಗಿದೆ..ಈಗ ರಾಜ್ಯದಲ್ಲಿ ವಿದ್ಯುತ್ ಬೆಲೆ ಹಾಗೂ ಇನ್ನಿತರ ವಸ್ತುಗಳ ಬೆಲೆ ಎಲ್ಲವೂ ಜಾಸ್ತಿ ಆಗಿರುವುರಿಂದ ಹಾಲಿನ ಬೆಲೆಯಲ್ಲಿ ಕೂಡ ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಇದನ್ನು ಓದಿ..Anna Bhagya: ಅಂದು ಮೋದಿ ಕೊಟ್ಟಿಲ್ಲ ಎಂದ ಸಿದ್ದು, ಈಗ ಮೋದಿ ಕೊಟ್ಟಿರುವ 5 KG ಅಕ್ಕಿಯನ್ನು ಏನು ಮಾಡಿದ್ದಾರೆ ಗೊತ್ತೇ? ಬೊಮ್ಮಾಯಿ ಅಂತೂ ಫುಲ್ ಗರಂ.

ಈಗ ರೈತರಿಗೆ ಕೆಎಂಎಫ್ ಎಷ್ಟು ಹಣ ನೀಡುತ್ತಿದೆಯೋ, ಅದಕ್ಕಿಂತ ಹೆಚ್ಚು ಹಣವನ್ನು ಖಾಸಗಿ ಸಂಸ್ಥೆಗಳು ರೈತರಿಗೆ ಕೊಡುತ್ತಿದ್ದು, ರೈತರು ಅವರಿಗೆ ಹಾಲು ಕೊಡಲು ಮುಂದಾಗಿದ್ದಾರೆ. ಹಾಗೆಯೇ ಬೇರೆ ರಾಜ್ಯಗಳಲ್ಲಿ ಹಾಲಿನ ಬೆಲೆ ಇನ್ನು ಜಾಸ್ತಿ ಆಗಿದೆ. ಈಗ ಪಶು ಸಂಗೋಪನೆ ವೆಚ್ಚ ಕೂಡ ಜಾಸ್ತಿ ಇದೆ (News)..ರೈತರು ಮತ್ತು ಹಾಲು ಉತ್ಪಾದನೆ ಮಾಡುವ ಸಂಘಗಳು ಕೂಡ ಕಷ್ಟದಲ್ಲಿ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಓದಿ..Nikon Z8: ಇತ್ತೀಚಿಗೆ ಬಿಡುಗಡೆಯಾಗಿರುವ ನಿಕೋನ್ Z8 ಕ್ಯಾಮೆರಾ ವಿಶೇಷತೆ ಏನಲ್ಲ ಇದೇ ಗೊತ್ತಾ? ಇದಪ್ಪ ಬೆಸ್ಟ್ ಕ್ಯಾಮೆರಾ ಅಂದ್ರೆ.

Comments are closed.