Earn Money: ಮನೆಯಲ್ಲಿರು ಹೆಣ್ಣು ಮಕ್ಕಳು ಹೇಗೆ ಸುಲಭವಾಗಿ ದುಡ್ಡು ಮಾಡಬಹುದು ಎಂದು ತೋರಿಸಿಕೊಟ್ಟ ಧಾರವಾಹಿ.
Earn Money: ಮನೆಯ ಜವಾಬ್ದಾರಿಗಳಿಂದ ಮಧ್ಯ ವಯಸ್ಸಿನ ಹೆಂಗಸರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡೋದು ಕಷ್ಟ, ಆದರೆ ಅವರು ಸ್ವಾವಲಂಬಿಯಾಗಿ ಬದುಕಬೇಕು ಎಂದು ಬಯಸುತ್ತಾರೆ. ಈ ರೀತಿ ಹೆಣ್ಣುಮಕ್ಕಳು ಮನೆಯಿಂದಲೇ ಮಾಡಬಹುದಾದ ಒಂದು ಬ್ಯುಸಿನೆಸ್ ಐಡಿಯಾ (Business Idea) ಕನ್ನಡ ಧಾರವಾಹಿ ಶ್ರೀರಸ್ತು ಶುಭಮಸ್ತು (Srirasthu Shubhamasthu) ಧಾರವಾಹಿಯಿಂದ ಸಿಕ್ಕಿದೆ. ಈ ಧಾರವಾಹಿಯಲ್ಲಿ ನಟಿ ಸುಧಾರಾಣಿ (Sudharani) ಅವರು ತುಳಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುಟುಂಬವೇ ಜೀವನ ಎನ್ನುವ ತುಳಸಿ ರುಚಿ ರುಚಿಯಾಗಿ ಅಡುಗೆ ಮಾಡುತ್ತಾರೆ.
ಅಡುಗೆ ರುಚಿ ಅದ್ಭುತ ಎನ್ನುವ ಕಾರಣಕ್ಕೆ ತುಳಸಿಗೆ ಮಾಧವನ ಕೆಫೆಯಲ್ಲಿ ಕೆಲಸ ಸಿಕ್ಕಿದೆ, ಈ ಕೆಲಸಕ್ಕೆ ಸಿಗುತ್ತಿರುವ ಸಂಬಳ ₹1,10,000 ರೂಪಾಯಿ. ಇದು ಸಿನಿಮಾ ಧಾರವಾಹಿಗಳಲ್ಲಿ ಮಾತ್ರ ಸಾಧ್ಯಯ ಅಂದುಕೊಳ್ಳಬೇಡಿ, ನಿಜ ಜೀವನದಲ್ಲಿ ಕೂಡ ಇದು ಸಾಧ್ಯ. ನಿಮಗೆ ಅಡುಗೆ ಚೆನ್ನಾಗಿ ಮಾಡುತ್ತೀರಿ ಎಂದರೆ ಅದನ್ನೇ ಬ್ಯುಸಿನೆಸ್ (Earn Money) ಮಾಡಿಕೊಳ್ಳಬಹುದು. ಈಗಿನ ಕಾಲದಲ್ಲಿ ಹೊರಗೆ ಹೋಗಿ ಕೆಲಸ ಮಾಡುತ್ತಿರುವವರಿಗೆ ಮನೆಯಲ್ಲಿ ಅಡುಗೆ ಮಾಡಿ, ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗುವಷ್ಟು ಸಮಯ ಇರುವುದಿಲ್ಲ, ಹಾಗಿದ್ದಾಗ ಅವರು ಹೋಟೆಲ್ ನಲ್ಲಿ ಊಟ ಮಾಡಲು ಇಷ್ಟಪಡದೆ, ಮನೆ ಊಟ ಬಯಸುತ್ತಾರೆ, ಅವರಿಗೆ ನೀವು ಅಡುಗೆ ಮಾಡಿ ಊಟ ತಲುಪಿಸಬಹುದು. ಇದನ್ನು ಓದಿ..Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??
ಆರಂಭದಲ್ಲಿ ನಿಮ್ಮ ಅಕ್ಕಪಕ್ಕದ ಮನೆಯವರಿಗೆ ಈ ಸೇವೆ ನೀಡಿ ಬ್ಯುಸಿನೆಸ್ ಶುರು ಮಾಡಬಹುದು, ಇದರಿಂದ ಹೆಚ್ಚು ಸಂಪಾದನೆ ಕೂಡ ಮಾಡಬಹುದು. ವಿವಿಧ ಕ್ಯಾಟಗರಿ ರೀತಿಯಲ್ಲಿ ನೀವು ಈ ಬ್ಯುಸಿನೆಸ್ (Earn Money) ಶುರು ಮಾಡಬಹುದು..ಅವುಗಳು ಹೀಗಿವೆ…
*ಟಿಪ್ ಸರ್ವೀಸ್ :- ಕಂಪನಿಗಳಲ್ಲಿ ಕೆಲಸ ಮಾಡುತ್ತಾ, ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗಲು ಆಗದೆ ಇರುವವರಿಗೆ ಮಧ್ಯಾಹ್ನದ ಊಟದ ಡಬ್ಬಿ ತಲುಪಿಸಬಹುದು. ಶುರುವಿನಲ್ಲಿ ಕಡಿಮೆ ಜನರಿಗೆ ಶುರು ಮಾಡಿ, ನಂತರ ನಿಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸಬಹುದು (Earn Money).
ಮಕ್ಕಳಿಗೆ ಮಧ್ಯಾಹ್ನದ ಅಡುಗೆ :- ಶಾಲೆ ಕಾಲೇಜಿಗೆ ಹೋಗುವ ಮಕ್ಕಳು ಹಾಗೂ ಕೆಲವು ಹಿರಿಯರು ಹೊರಗಡೆ ಓಡಾಡುವವರಿರುತ್ತಾರೆ. ಕಾರಣಾಂತರಗಳಿಂದ ಅವರು ಮನೆಯಿಂದ ಊಟ ತಂದಿಲ್ಲದೆ ಇರಬಹುದು. ಆ ಥರದ ಜನರಿಗಾಗಿ ನೀವು ಚಿಕ್ಕದಾಗಿ ಮೆಸ್ ಶುರು ಮಾಡಬಹುದು. ಮಧ್ಯಾಹ್ನ ಹಾಗೂ ಸಂಜೆ ವೇಳೆ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಬಹುದು. ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರರು ನಿಮಗೆ ಗ್ರಾಹಕರಾಗಿ ಸಿಗುತ್ತಾರೆ (Earn Money). ಇದನ್ನು ಓದಿ..Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.
ಸ್ವೀಟ್ಸ್, ಚಿಪ್ಸ್, ಕೇಕ್ ಮಾರಾಟ :- ಒಂದು ವೇಳೆ ದಿನಾ ಅಡುಗೆ ಮಾಡುವುದು ಕಷ್ಟ ಎಂದು ಅನ್ನಿಸಿದರೆ, ಕೇಕ್, ಚಿಪ್ಸ್, ಸ್ವೀಟ್ಸ್ ಇವುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಮನೆಯಲ್ಲಿ ತಯಾರಿಸುವ ಅಡುಗೆ ತಿಂಡಿಗೆ ಬೇಡಿಕೆ ಇದ್ದೆ ಇರುತ್ತದೆ, ಆದರೆ ನೀವು ಮಾಡುವ ಅಡುಗೆ ರುಚಿಯಾಗಿರುವುದು ಬಹಳ ಮುಖ್ಯವಾಗುತ್ತದೆ. ಈ ತಿಂಡಿಗಳನ್ನು ಗ್ರಾಹಕರಿಗೆ ನೀವೇ ಖುದ್ದಾಗಿ ಮಾರಾಟ ಮಾಡಬಹುದು, ಅಥವಾ ಹೋಟೇಲ್ ಬೇಕರಿ ಜೊತೆಗೆ ಟೈ ಅಪ್ ಮಾಡಿಕೊಳ್ಳಬಹುದು. ಸಂಜೆ ವೇಳೆ ಬಜ್ಜಿ ಬೋಂಡಾ ಕೂಡ ಶುರು ಮಾಡಬಹುದು (Earn Money). ಅಡುಗೆ ಒಂದು ಗೊತ್ತಿದ್ದರೆ, ವಿವಿಧ ರೀತಿಯಲ್ಲಿ ನೀವು ಹಣ ಸಂಪಾದನೆ ಮಾಡಬಹುದು. ಇದನ್ನು ಓದಿ..Rupay Card: ಭಾರತದ ರೂಪೇ ಕಾರ್ಡ್ ಬೇರೆ ವಿದೇಶಿ ಕಾರ್ಡ್ ಗಳಿಗಿಂತ ಬೆಸ್ಟ್- ಕಾರಣಗಳೇನು ಗೊತ್ತೇ? ಬ್ಯಾಂಕ್ ನಲ್ಲಿ ರೂಪೇ ಕಾರ್ಡ್ ಕೇಳಿ ಪಡೆಯಿರಿ.
Comments are closed.