Shivaraj Kumar: ಶಿವಣ್ಣನೇ ಫೈನಲ್ ಎಂದ ರವಿ ಚಂದ್ರನ್ ರವರ ಬಗ್ಗೆ ಶಿವಣ್ಣ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಈ ಸಮಯದಲ್ಲಿ ಇವೆಲ್ಲ ಬೇಕಿತ್ತಾ.
Shivaraj Kumar: ಸ್ಯಾಂಡಲ್ ವುಡ್ (Sandalwood) ನಲ್ಲಿ ಈಗ ಒಂದು ವಿಷಯ ಬಹಳ ಚರ್ಚೆ ಆಗುತ್ತಿದೆ. ಅದು ನಟ ಸುದೀಪ್ (Sudeep) ಹಾಗೂ ನಿರ್ಮಾಪಕ ಎಂ.ಎನ್.ಕುಮಾರ್ (MN Kumar) ಅವರ ವಿಚಾರ. ನಟ ಸುದೀಪ್ ಅವರು ಹಣ ಪಡೆದು ತಮಗೆ ಸಿನಿಮಾ ಮಾಡಿಕೊಟ್ಟಿಲ್ಲ, ಸುದೀಪ್ ಅವರಿಂದ ನಮಗೆ ಮೋಸವಾಗಿದೆ ಎಂದು ಆರೋಪ ಮಾಡಿದ್ದಾರೆ, ಈ ಬಗ್ಗೆ ಸುದೀಪ್ ಅವರು ಕೂಡ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ವಿಚಾರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಪ್ರಸ್ತುತ ಇದರ ಚರ್ಚೆ ಜೋರಾಗಿಯೇ ಇದೆ. ನಿರ್ಮಾಪಕ ಎಂ.ಎನ್.ಕುಮಾರ್ ಅವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಚಂದನವನದ ಹಿರುಯನಟರ ಮೊರೆ ಹೋಗಿದ್ದಾರೆ. ಜುಲೈ 18ರಂದು ರವಿಚಂದ್ರನ್ ಅವರನ್ನು ಭೇಟಿ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ, ಪರಿಹರಿಸಿಕೊಡಬೇಕು ಎಂದಿದ್ದು, ಜುಲೈ 19ರಂದು ಶಿವಣ್ಣ (Shivaraj Kumar) ಅವರನ್ನು ಭೇಟಿ ಮಾಡಿ ಇದನ್ನೇ ಕೇಳಿಕೊಂಡಿದ್ದಾರೆ. ಇದನ್ನು ಓದಿ..Bike Tricks: 175 ರೂಪಾಯಿ ಖರ್ಚು ಮಾಡಿ ಇದೊಂದು ಚಿಕ್ಕ ವಸ್ತು ಬದಲಾಯಿಸಿದರೆ, ಹಳೆಯ ಬೈಕ್ ಕೂಡ ಹೊಸ ಬೈಕ್ ನಂತೆ ಓಡುತ್ತದೆ.
ರವಿಚಂದ್ರನ್ (Ravichandran) ಅವರು ಈ ಬಗ್ಗೆ ಮಾತನಾಡಿ, ಶಿವಣ್ಣ (Shivaraj Kumar) ಅವರು ಚಿತ್ರರಂಗದಲ್ಲಿ ಸೀನಿಯರ್, ಅವರೇ ಲೀಡರ್ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ ಎಂದಿದ್ದರು. ಇದೀಗ ಶಿವಣ್ಣ (Shivaraj Kumar) ಕೂಡ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.. “ನಮ್ಮ ಇಂಡಸ್ಟ್ರಿ ಯಾವಾಗಲೂ ಒಂದೇ, ಅದರಲ್ಲಿ ಡೌಟ್ ಇಲ್ಲ, ಸುದೀಪ್ ನಮಗೆ ಆತ್ಮೀಯರು, ನಮ್ಮ ತಮ್ಮನ ಹಾಗೆ ಅಂತ ಹೇಳಬಹುದು. ನಡೆದಿರೋದು ಏನು ಅಂತ ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತೆ, ಈಗಾಗಲೇ ಕಾನೂನಿನ ಮೊರೆ ಹೋಗಿದ್ದಾರೆ..ಇಂಡಸ್ಟ್ರಿಯಲ್ಲಿ ಇಬ್ನರು ಲಿಲ್ಲರ್ ಗಳು, ಆಕ್ಟರ್ ಗಳು ಪಿಲ್ಲರ್, ಅನ್ನದಾತರು ಪಿಲ್ಲರ್ ಥರ. ಎರಡು ಕಣ್ಣುಗಳಲ್ಲಿ ಯಾವ ಕಣ್ಣು ಮುಖ್ಯ ಅಂತ ಕೇಳಿದ್ರೆ ಉತ್ತರ ಕೊಡೋದು ಕಷ್ಟ..
ನಾನು ಈಗಾಗಲೇ ರವಿ ಸರ್ ಜೊತೆ ಮಾತಾಡಿದ್ದೀನಿ, ಅವರ ನಿರ್ಧಾರ ಏನು ನೋಡೋಣ.. ಅವರು ನನಗಿಂತಲೂ ದೊಡ್ಡ ಸೀನಿಯರ್, ಅವರು ಅನ್ನದಾತರು ಅವರ ತಂದೆ ವೀರಸ್ವಾಮಿ ಅವರನ್ನು ಅಪ್ಪಾಜಿ ಸಾಹುಕಾರರೇ ಅಂತ ಕರೀತಿದ್ರು, ರವಿ ಸರ್ ಚಿತ್ರರಂಗಕ್ಕೆ ಬಂದಿದ್ದು ನನಗಿಂತಲೂ ಮೂರು ನಾಲ್ಕು ವರ್ಷಗಳ ಮುಂಚೆಯೇ, ಅವರು ಚಿತ್ರರಂಗಕ್ಕೆ ಬಂದೇ 45 ವರ್ಷ ಆಗಿದೆ. ನಿರ್ಮಾಪಕ ಮತ್ತು ನಟನ ನಡುವೆ ಹೀಗೆ ಸಮಸ್ಯೆ ಬರೋದು ಕಾಮನ್, ಇದರ ಬಗ್ಗೆ ಅವರಿಬ್ಬರ ಒಂದು ಡಿಸಿಷನ್ ತಗೋಬೇಕು. ರವಿ ಸರ್ ಹೇಳೋದೇನು ಅಂತ ನೋಡಬೇಕು.. ಇದನ್ನು ಓದಿ..Sitara Mahesh: ಜಾಹೀರಾತಿನಿಂದ ದುಡಿದ ಹಣವನ್ನು ಮೊದಲ ಬಾರಿಗೆ ಮಹೇಶ್ ಪುತ್ರಿ ಏನು ಮಾಡಿದ್ದಾರೆ ಗೊತ್ತೆ? ದೊಡ್ಡವರ ಮಕ್ಕಳು ಹೀಗೆನಾ?
ಅವರ ಜೊತೆಗೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಲೆಕ್ಕಾಚಾರದ ಬಗ್ಗೆ ನಮ್ಮ ಜೊತೆಗೆ ಮಾತಾಡೋದು ತಪ್ಪಾಗುತ್ತೆ, ಏನಾಗಿದೆ ಅದರ ಬಗ್ಗೆ ಮಾತನಾಡಬೇಕು, ಲೆಕ್ಕಾಚಾರ ಇದೆಲ್ಲ ಬಿಟ್ಟು, ರವಿ ಸರ್ ಹೇಳಿರೋದೇನು ಅದರ ಬಗ್ಗೆ ಮಾತನಾಡಿ ಸಮಸ್ಯೆಯನ್ನ ಬಗೆಹರಿಸಬೇಕು..” ಎಂದಿದ್ದಾರೆ ಶಿವಣ್ಣ (Shivaraj Kumar). ಇದೀಗ ಶಿವಣ್ಣ (Shivaraj Kumar) ಅವರು ಈ ರೀತಿ ಹೇಳಿದ್ದು, ಶಿವಣ್ಣ (Shivaraj Kumar) ಈ ಥರ ಹೇಳಬಾರದು, ಶಿವಣ್ಣ ಮತ್ತು ರವಿ ಸರ್ ಇಬ್ಬರು ಕೂತು ಮಾತನಾಡಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದು ನೆಟ್ಟಿಗರ ಅಭಿಪ್ರಾಯ ಆಗಿದೆ. ಇದನ್ನು ಓದಿ..Earn Money: ಮನೆಯಲ್ಲಿರು ಹೆಣ್ಣು ಮಕ್ಕಳು ಹೇಗೆ ಸುಲಭವಾಗಿ ದುಡ್ಡು ಮಾಡಬಹುದು ಎಂದು ತೋರಿಸಿಕೊಟ್ಟ ಧಾರವಾಹಿ.
Comments are closed.