Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.
Business Idea: ಒಂದು ವೇಳೆ ನೀವು ಹಳ್ಳಿಯಲ್ಲಿದ್ದು, ಅಲ್ಲಿಂದಲೇ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿದ್ದರೆ, ಇಂದು ನಿಮಗಾಗಿ ಹಳ್ಳಿಯಲ್ಲಿ ಮಾಡಬಹುದಾದಂಥ ಬ್ಯುಸಿನೆಸ್ ಬಗ್ಗೆ ತಿಳಿಸಿಕೊಡುತ್ತೇವೆ. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ನಿಮ್ಮ ಹತ್ತಿರ ಸ್ವಲ್ಪ ಹಣ ಮತ್ತು ಸ್ವಲ್ಪ ಜಾಗ ಇವೆರಡು ಇದ್ದರೆ ಸಾಕು. ಹೊಸ ಬ್ಯುಸಿನೆಸ್ ಶುರು ಮಾಡಿ, ಒಂದಷ್ಟು ಜನರಿಗೆ ಕೆಲಸ ಕೂಡ ಕೊಡಬಹುದು. ಹಳ್ಳಿಯಿಂದ ಶುರು ಮಾಡಬಹುದಾದ ಬ್ಯುಸಿನೆಸ್ ಗಳು (Business Idea) ಯಾವುವು ಎಂದು ತಿಳಿಸುತ್ತೇವೆ ನೋಡಿ..
ಗಿರಣಿ ಅಂಗಡಿ :- ಹಳ್ಳಿಗಳಲ್ಲಿ ಗಿರಣಿ ಅಂಗಡಿಗಳು ಇರುವುದು ಬಹಳ ಕಡಿಮೆ. ಸಾಮಾನ್ಯವಾಗಿ ಹಳ್ಳಿಯಲ್ಲಿ ಜನರು ಗೋಧಿ, ರಾಗಿ, ಜೋಳ ಇದೆಲ್ಲವನ್ನು ಬೆಳೆಯುತ್ತಾರೆ, ಬಳಸುತ್ತಾರೆ. ಆದರೆ ಇವುಗಳನ್ನ ಸಂಸ್ಕರಿಸಲು ಗಿರಣಿ ಅಂಗಡಿ ಹುಡುಕಿ ನಗರಕ್ಕೆ ಬರಬೇಕು. ಸಿಟಿಗಳಲ್ಲಿ ಖರ್ಚು ಕೂಡ ಜಾಸ್ತಿ. ಹಾಗಾಗಿ ನೀವು ಹಳ್ಳಿಯಲ್ಲಿ ಒಂದು ಗಿರಣಿ ಅಂಗಡಿ ಶುರು ಮಾಡಿದರೆ, ನಿಮ್ಮ ಹಳ್ಳಿ ಹಾಗೂ ಸುತ್ತಮುತ್ತಲಿನ ಕಡೆಯಿಂದ ಹೆಚ್ಚು ಗ್ರಾಹಕರನ್ನು ಪಡೆಯುತ್ತೀರಿ (Business Idea). ಹಾಗೆಯೇ ನಿಮ್ಮ ಈ ಪ್ರಾಡಕ್ಟ್ ಗಳನ್ನು ಸಿಟಿಯಲ್ಲಿ ಮಾರಾಟ ಮಾಡಬಹುದು. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.
ಕಿರಾಣಿ ಅಂಗಡಿ :- ಪ್ರತಿದಿನ ಬಳಸುವುದಕ್ಕೆ ಅನೇಕ ವಸ್ತುಗಳು ಬೇಕಾಗುತ್ತದೆ. ಆದರೆ ಅವುಗಳನ್ನು ಕೊಂಡುಕೊಳ್ಳಲು ಹಳ್ಳಿಯಿಂದ ಸಿಟಿಗೆ ಬರಬೇಕಾಗುತ್ತದೆ. ಈ ರೀತಿ ದಿನಾಲು ಅಷ್ಟು ದೂರ ಓಡಾಡಬೇಕು ಎಂದರೆ ತೊಂದರೆ ಆಗುತ್ತದೆ. ಹಾಗಾಗಿ ನಿಮ್ಮ ಹಳ್ಳಿಯಲ್ಲಿ ದಿನಬಳಕೆ ವಸ್ತುಗಳು ಸಿಗುವಂಥ ಒಂದು ಅಂಗಡಿ ಶುರು ಮಾಡಬಹುದು. ಇದರಿಂದ ಜನರಿಗೆ ಕಷ್ಟ ತಪ್ಪುತ್ತದೆ ನೀವು ಲಾಭ ಪಡೆಯಬಹುದು (Business Idea).
ಸೆಣಬು :- ಇದು ನಮ್ಮ ದೇಶದಲ್ಲಿ ಸಿಗುವ ಅತ್ಯಂತ ನೈಸರ್ಗಿಕ ಫೈಬರ್ ಗಳಲ್ಲಿ ಒಂದು. ಈ ನಾರುಗಳನ್ನು ನೀವು ರೀಸೈಕಲ್ ಮಾಡಿ ಮತ್ತೆ ಬಳಸಬಹುದು. ಒಂದು ವೇಳೆ ನೀವು ಸ್ಮಾಲ್ ಬ್ಯುಸಿನೆಸ್ ಮಾಡುವ ಐಡಿಯಾ ಹೊಂದಿದ್ದರೆ, ಸೆಣಬಿನ ಬ್ಯಾಗ್ಸ್ ತಯಾರಿಸುವ ಬ್ಯುಸಿನೆಸ್ ಕೂಡ ಒಳ್ಳೆಯ ಆಯ್ಕೆ ಆಗಿದೆ. ಹಳ್ಳಿಯ ಮಹಿಳೆಯರಿಗೆ ಕೂಡ ಇದು ಒಳ್ಳೆಯ ಆಯ್ಕೆ ಆಗಿದೆ (Business Idea). ಇದನ್ನು ಓದಿ..Health Insurance: ಕಾರ್ಮಿಕರಿಗೆ ಬಡವರಿಗೆ ಸುಲಭವಾಗಿ ಸಿಗುತ್ತಿದೆ ಉಚಿತ ಇನ್ಶೂರೆನ್ಸ್- ಖಾಸಗಿ ಆಸ್ಪತ್ರೆಯಲ್ಲೂ ಪಡೆಯುವುದು ಸುಲಭ.
ಫ್ಯಾಶನೆಬಲ್ ಬಟ್ಟೆ ಅಂಗಡಿ :- ಈಗ ಹಳ್ಳಿಯ ಜನರು ಕೂಡ ಟ್ರೆಂಡ್ ಗೆ ಫ್ಯಾಶನ್ ಗೆ ತಕ್ಕ ಹಾಗೆ ಬಟ್ಟೆ ಧರಿಸಬೇಕು ಎಂದು ಇಶ್ಯಪಡುತ್ತಾರೆ. ಆದರೆ ಅವರ ಹಳ್ಳಿಗಳಲ್ಲಿ ಅಂಥ ಬಟ್ಟೆಗಳು ಲಭ್ಯ ಇರುವುದಿಲ್ಲ. ಹಾಗಾಗಿ ಅವರು ಇಷ್ಟವಾದರು ಫ್ಯಾಷನೆಬಲ್ ಬಟ್ಟೆ ಧರಿಸಲು ಆಗೋದಿಲ್ಲ, ಬಟ್ಟೆ ತರುವುದಕ್ಕಾಗಿ ಸಿಟಿಗೆ ಹೋಗುವುದಕ್ಕಿಂತ ತಮಗೆ ಹತ್ತಿರದಲ್ಲೇ ಇರುವ ಅಂಗಡಿಯಲ್ಲಿ ಬಟ್ಟೆ ಸಿಕ್ಕರೆ ಖುಷಿಯಿಂದ ಕೊಂಡುಕೊಳ್ಳುತ್ತಾರೆ (Business Idea). ಹಾಗಾಗಿ ಹಳ್ಳಿಯಲ್ಲಿ ಈ ಥರದ ಟ್ರೆಂಡಿ ಬಟ್ಟೆ ಸಿಗುವ ಅಂಗಡಿಯನ್ನು ಶುರು ಮಾಡಬಹುದು. ಇದರಿಂದ ಅಲ್ಲಿನ ಜನರಿಗೂ ಕೆಲಸ ಸಿಗುತ್ತದೆ.
ಕೀಟನಾಶಕ ರಸಗೊಬ್ಬರ ಸಂಗ್ರಹಣೆ :- ಇವುಗಳ ಖರೀದಿಗೆ ರೈತರು ಸಿಟಿಗೆ ಹೋಗಬೇಕಾಗುತ್ತದೆ. ಹಾಗಾಗಿ ನೀವು ನಿಮ್ಮ ಹಳ್ಳಿಯಲ್ಲಿ ಕೀಟನಾಶಕ ಮತ್ತು ರಸಗೊಬ್ಬರ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಬಹುದು. ಇದರಿಂದ ಜನರಿಗೂ ಅನುಕೂಲವಾಗುತ್ತದೆ. ನಿಮಗೆ ಲಾಭವಾಗುತ್ತದೆ (Business Idea). ಇದನ್ನು ಓದಿ..PF Balance Check: ಮನೆಯಲ್ಲಿಯೇ ಕುಳಿತು ನಿಮ್ಮ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ- ಸುಲಭವಾದ ವಿಧಾನಗಳು.
Comments are closed.