Sowjanya case: ಮತ್ತೆ ಕ್ಯಾಮೆರಾ ಮುಂದೆ ಬಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆರವರು, ಸೌಜನ್ಯ ಕೇಸ್ ಬಗ್ಗೆ ಸರಿಯಾಗಿ ಹೇಳಿದ್ದೇನು ಗೊತ್ತೇ?
Sowjanya Case: ಮಂಗಳೂರಿನ (Mangalore) ಸೌಜನ್ಯ ಕೇಸ್ (Sowjanya Case) ಈಗ ಭಾರಿ ಸದ್ದು ಮಾಡುತ್ತಿದೆ. ಸೌಜನ್ಯ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯದ ಎಲ್ಲೆಡೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ನಡೆದಿರುವುದು 2012ರಲ್ಲಿ, ಆದರೆ 11 ವರ್ಷ ಉರುಳಿದ್ದರು ಕೂಡ ಇನ್ನು ಸೌಜನ್ಯ ಕೇಸ್ ಗೆ ತೀರ್ಪು ಸಿಕ್ಕಿಲ್ಲ. ಈ ಘಟನೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ (Veerendra Heggade) ಕುಟುಂಬದ ಕೈವಾಡ ಇದೆ ಎಂದು ಆರೋಪ ಮಾಡಲಾಗಿತ್ತು.
ಹೆಗ್ಗಡೆಯವರು ಈ ಬಗ್ಗೆ ಏನನ್ನು ಮಾತನಾಡಿರಲಿಲ್ಲ, ಪ್ರತಿಕ್ರಿಯೇ ಕೊಟ್ಟಿರಲಿಲ್ಲ. ಹಾಗಾಗಿ ಇವರ ಕುಟುಂಬ ಕೂಡ ಈ ಕೇಸ್ ನಲ್ಲಿ ಶಾಮೀಲಾಗಿರಬಹುದು ಎಂದು ಅನುಮಾನ ಕೇಳಿಬಂದಿತ್ತು. ಈ ವಿಚಾರಗಳಿಗೆ ಈಗ ಖುದ್ದು ವೀರೇಂದ್ರ ಹೆಗ್ಗಡೆ ಅವರೇ ಸ್ಪಷ್ಟನೆ ನೀಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಪ್ರೆಸ್ ನೋಟೀಸ್ ಬಿಡುಗಡೆ ಮಾಡಿದ್ದಾರೆ. ಪ್ರೆಸ್ ನೋಟ್ ನಲ್ಲಿ ಹೆಗ್ಡೆಯವರು ಬೇಸರ ವ್ಯಕ್ತಪಡಿಸಿದ್ದಾರೆ, 2012ರಲ್ಲೇ ಈ ಕೇಸ್ (Sowjanya Case) ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದು ನಮ್ಮ ಕುಟುಂಬ ಆಗ್ರಹಿಸಿತ್ತು. ಇದನ್ನು ಓದಿ..Jiobook: ಬಂದಿದೆ ಹೊಸ ಜಿಯೋ ಬುಕ್- ಇದರ ಲಾಭ ತಿಳಿದರೆ ಇಂದೇ ಖರೀದಿ ಮಾಡಿ ಮನೇಲಿ ಇಟ್ಕೋತೀರಾ.
CID ಬಿಟ್ಟರೆ ನಮ್ಮ ದೇಶದಲ್ಲಿ ಅತ್ಯುನ್ನತ ತನಿಖೆ ನಡೆಸುವ ಸಂಸ್ಥೆ ಎಂದರೆ CBI, CBI ಕೂಡ ತನಿಖೆ ಶುರು ಮಾಡಿತ್ತು. ಆದರೆ ಸರ್ಕಾರ ಆರೋಪಿಯನ್ನು ಬಿಟ್ಟಿದೆ. ಈಗ ನಮ್ಮ ಕುಟುಂಬದ ಮೇಲೆ ಅನುಮಾನ ಪಟ್ಟು, ಸುಳ್ಳು ಆರೋಪಗಳನ್ನು ಹೊರೆಸಲಾಗುತ್ತಿದೆ ಎಂದಿದ್ದಾರೆ. ಈ ಪ್ರಕರಣ ಸರ್ಕಾರ ಹಾಗೂ ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ಹೀಗಾಗಿ ಸರ್ಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಕೊಡಲು ಒತ್ತಾಯಿಸ್ತೇನೆ. ಸುಳ್ಳು ಹೇಳಿಕೆ, ಅಪಾದನೆ, ವದಂತಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಬೇಡಿ (Sowjanya Case)..
ಎಂದು ವೀರೇಂದ್ರ ಹೆಗ್ಗಡೆ ಅವರು ಪ್ರೆಸ್ ನೋಟ್ ನಲ್ಲಿ ತಿಳಿಸಿದ್ದಾರೆ. ಈ ಪ್ರಕರಣ ಈಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇತ್ತು, ಸ್ಯಾಂಡಲ್ ವುಡ್ ನಟ ನಟಿಯರು ಕೂಡ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ನಟ ಕಿಶೋರ್ ಅವರು ಸೌಜನ್ಯ ಅವರ ಕೇಸ್ ಬಗ್ಗೆ ಪೋಸ್ಟ್ ಮಾಡಿ, “ಧರ್ಮ ಸ್ಥಳದಲ್ಲಿ ಸಮಾಜದ ಅಧರ್ಮಕ್ಕೆ ಅಮಾಯಕ ಸೌಜನ್ಯ (Sowjanya Case) ಬಲಿಪಶು. ಅನ್ಯಾಯ ನಡೆದೇ ಹೋದಾಗ ನ್ಯಾಯ ದೊರಕಿಸಿಕೊಡುವುದು ಸ್ವಸ್ಥ ವ್ಯವಸ್ಥೆಯ ಸಹಜ ಪ್ರತಿಕ್ರಿಯೆಯಾಗಬೇಕಲ್ಲವೇ? ನ್ಯಾಯಕ್ಕಾಗಿ 10 ವರ್ಷ ಹೋರಾಡಬೇಕೆ? ಇದು ಅಸ್ವಸ್ಥ ವ್ಯವಸ್ಥೆಯ ಅಧರ್ಮದ ರಾಜಕಾರಣದ ನಾಚಿಕೆಗೇಡು ಮುಖದ ದರ್ಶನ.” ಎಂದು ಬರೆದಿದ್ದಾರೆ. ಇದನ್ನು ಓದಿ..Jobs Openings: ನೀವು SSLC ಪಾಸ್ ಆಗಿದ್ದರೆ ಸಾಕು, ಖಾಲಿ ಇದೆ ಕೇಂದ್ರ ಸರ್ಕಾರೀ ನೌಕರಿ- 60000 ಸಾವಿರ ಸಂಬಳ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.
ನಟ ದುನಿಯಾ ವಿಜಯ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, “ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ..” ಎಂದು ಬರೆದಿದ್ದಾರೆ ನಟ ದುನಿಯಾ ವಿಜಯ್ (Sowjanya Case). ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.
Comments are closed.