Dr Bro: ನಮ ಅಜ್ಜಿ ನೀನು ಗೊತ್ತು ಬ್ರೋ- ಚಂದನ್ ಕುಮಾರ್ DR.ಬ್ರೋ ಬಗ್ಗೆ ಹೆಮ್ಮೆಯಿಂದ ಹೇಳಿದ್ದೇನು ಗೊತ್ತೇ??
Dr Bro: ಕರ್ನಾಟಕದ ನಂಬರ್ 1 ಯೂಟ್ಯೂಬರ್ ಎಂದ ತಕ್ಷಣ ಎಲ್ಲರೂ ಹೇಳುವ ಒಂದೇ ಹೆಸರು ಡಾಕ್ಟರ್ ಬ್ರೋ (Dr Bro). ಗಗನ್ ಶ್ರೀನಿವಾಸ್ (Gagan Srinivas) ಹೆಸರಿನ ಈ ಹುಡುಗ, ಯೂಟ್ಯೂಬ್ ಲೋಕದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹೆಸರು ಮಾಡಿದ್ದಾನೆ. ಡಾ.ಬ್ರೋ (Dr Bro) ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡಿ, ದೇಶ ವಿದೇಶಗಳನ್ನು ಕನ್ನಡಿಗರಿಗೆ ತೋರಿಸುತ್ತಿದ್ದಾರೆ. ಇದೀಗ ಡಾ.ಬ್ರೋ (Dr Bro) ಬಗ್ಗೆ ಕನ್ನಡ ಕಿರುತೆರೆ ನಟ ಚಂದನ್ ಕುಮಾರ್ (Chandan Kumar) ಹೇಳಿದ್ದೇನು ಗೊತ್ತಾ?
ಕನ್ನಡದ ಹುಡುಗ ಡಾಕ್ಟರ್ ಬ್ರೋ (Dr Bro), ಯಾವುದೇ ಕಾರ್ ಅಥವಾ ಬೈಕ್ ಬಳಸದೆ, ಆಯಾ ಊರುಗಳು ದೇಶಗಳು ಇಲ್ಲೆಲ್ಲಾ ಸಿಗುವ ಸಾರ್ವಜನಿಕ ವಾಹನಗಳನ್ನು ಬಳಸಿ, ಎಲ್ಲಾ ಕಡೆ ಪ್ರಯಾಣ ಮಾಡಿ ಆ ಊರಿನ ವಿಶೇಷತೆಗಳು, ಅಲ್ಲಿನ ಊಟ ತಿಂಡಿ ವಿಷಯ ಇದೆಲ್ಲವನ್ನು ಕೂಡ ಜನರಿಗೆ ತಿಳಿಸುತ್ತಾರೆ. ಈ ವ್ಯಕ್ತಿಯ ತರ್ಲೆ, ತಮಾಷೆ ಎಲ್ಲವೂ ಜನರಿಗೆ ಇಷ್ಟ. ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಜನ ಡಾ.ಬ್ರೋ (Dr Bro) ಫ್ಯಾನ್ಸ್ ಇದ್ದಾರೆ. ಇದನ್ನು ಓದಿ..Virat Kohli: ಕೊಹ್ಲಿ ರವರು ಅನುಷ್ಕಾ ರಾವರಿಗಿಂತ ಮೊದಲು ಡೇಟ್ ಮಾಡಿದ ಅತಿ ಲೋಕ ಸುಂದರಿಗಳು- ಲಿಸ್ಟ್ ದೊಡ್ಡದಾಗಿಯೇ ಇದೆ.
ಎಂಥದ್ದೇ ರಿಸ್ಕ್ ಗಳನ್ನು ತೆಗೆದುಕೊಂಡು ಜನರಿಗೆ ವಿಶೇಷವಾದ ಜಾಗಗಳನ್ನು ತೋರಿಸಬೇಕು ಎನ್ನುವ ಈ ಹುಡುಗನ ಆಶಯ ಜನರಿಗೆ ಇಷ್ಟವಾಗಿದ್ದು, ಜನರ ಸಪೋರ್ಟ್ ಕೂಡ ಸಿಕ್ಕಿದೆ. ಕನ್ನಡದ ಕಿರುತೆರೆ ಕಲಾವಿದರಿಗಿಂತ ಹೆಚ್ಚು ಜನಪ್ರಿಯತೆ ಇವರಿಗೆ ಇದೆ ಎಂದರೆ ತಪ್ಪಲ್ಲ. ಕಿರುತೆರೆ ಮತ್ತು ಬೆಳ್ಳಿತೆರೆ ಸ್ಟಾರ್ ಗಳು ಕೂಡ ಡಾ. ಬ್ರೋ (Dr Bro) ಅವರನ್ನು ಫಾಲೋ ಮಾಡಿ, ಅವರ ವಿಡಿಯೋಗಳನ್ನು ಲೈಕ್ ಮಾಡುತ್ತಾರೆ. ಇದೀಗ ಕಿರುತೆರೆ ನಟ ಚಂದನ್ ಕುಮಾರ್ ಡಾ.ಬ್ರೋ (Dr Bro) ಬಗ್ಗೆ ಪೋಸ್ಟ್ ಮಾಡಿದ್ದಾರೆ..
ಡಾ.ಬ್ರೋ (Dr Bro) ಫೋಟೋ ಶೇರ್ ಮಾಡಿರುವ ನಟ ಚಂದನ್, “ಡಾ.ಬ್ರೋ ನೀನು ದಿ ಬೆಸ್ಟ್.. ಯಾರು ಏನೇ ಅಂದ್ರು.. ನೀನೊಬ್ಬ ಸಾಧಕ.. ನನ್ನ ಕಡೆಯಿಂದ ಬೆಸ್ಟ್ ವಿಷಸ್ ನಿನಗೆ..ನನ್ನ ಅಮ್ಮ ಅಜ್ಜಿಗೆ ನೀನು ಗೊತ್ತು..ನಮ್ಮಿಬ್ಬರಿಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಆದರೆ ನಿನ್ನ ವಿಡಿಯೋಗಳು, ನಿನ್ನ ವಿಡಿಯೋಗಳು, ನಿನ್ನ ಹಾನೆಸ್ಟಿ, ನೈಜತೆ, ಸಹಜತೆ, ತರಲೆ ಇದೆಲ್ಲಾ ನನಗೆ ತುಂಬಾ ಇಷ್ಟ..” ಎಂದು ಬರೆದುಕೊಂಡಿದ್ದಾರೆ ನಟ ಚಂದನ್. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ಇದನ್ನು ಓದಿ..Yamaha YZF R3: ಮಾರುಕಟ್ಟೆಯನ್ನು ಶೇಕ್ ಗೊಳಿಸುವ ಸಾಮರ್ಥ್ಯವಿರುವ ಹೊಸ ಯಮಹಾ YZF-R3 ಬೈಕಿನ ವಿಶೇಷತೆಗಳು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಡಾ.ಬ್ರೋ ಕರೆಸಬೇಕು ಎಂದಾಗ ಜೀಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರು ಮನೆಯಲ್ಲಿ ಅಮ್ಮ ಅಜ್ಜಿಗೆ ಡಾ.ಬ್ರೋ ಗೊತ್ತಿರುವುದಿಲ್ಲ ಎಂದು ಹೇಳಿದ್ದರು. ಆ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ಚಂದನ್ ಕುಮಾರ್ ಅವರು ಕೂಡ ಆ ಮಾತಿಗೆ ಟಾಂಗ್ ಕೊಟ್ಟಿದ್ದಾರೆ. ತಮ್ಮ ಅಮ್ಮನಿಗೆ ಅಜ್ಜಿಗೆ ಡಾ.ಬ್ರೋ ಗೊತ್ತು ಎಂದು ಹೇಳಿದ್ದಾರೆ ನಟ ಚಂದನ್. ಇದನ್ನು ಓದಿ..100 Rupees: ನಿಮ್ಮ ಬಳಿ ಅಪ್ಪಿ ತಪ್ಪಿ 100 ರೂಪಾಯಿ ನೋಟು ಇದ್ದರೇ, ತಕ್ಷಣ ಹೀಗೆ ಮಾಡಿ ಸಾಕು.
Comments are closed.