
SBI Scheme: ಪ್ರತಿ ಸಮುದಾಯದ ಮಕ್ಕಳಿಗೆ ಸಮಾನವಾಗಿ 10000 ವಿದ್ಯಾರ್ಥಿ ವೇತನ- ಅರ್ಜಿ ಸಲ್ಲಿಸಿ ನೇರವಾಗಿ ಅಕೌಂಟ್ ಗೆ ಹಣ.
SBI Scheme: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನಿಮ್ಮ ಮಕ್ಕಳು ವಿದ್ಯಾರ್ಥಿ ಆಗಿದ್ದರೆ ಅವರಿಗೆ ವಿದ್ಯಾರ್ಥಿ ವೇತನದ ಯೋಜನೆಯೊಂದನ್ನು ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ. ಪ್ರತಿಯೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಗೆ ಹಾರ್ದಿಕ ಸಹಾಯವನ್ನು ಆತನ ಶೈಕ್ಷಣಿಕ ದಿನಗಳಲ್ಲಿ ನೀಡಿದರೆ ಖಂಡಿತವಾಗಿ ಆತ ಇನ್ನಷ್ಟು ಹೆಚ್ಚಿನ ಫಲಿತಾಂಶವನ್ನು ನೀಡಲು ಸಾಧ್ಯ ಎನ್ನುವುದಾಗಿ ಹೇಳುತ್ತಾರೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ SBIF ಆಶಾ ಸ್ಕಾಲರ್ಶಿಪ್(SBIF asha scholarship) ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದುವ ಮೂಲಕ ಇದನ್ನು ಯಾವ ರೀತಿಯಾಗಿ ಹಾಗೂ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ.
ಈ ದಿನದ ಬಹು ಮುಖ್ಯವಾದ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ. ನೀವು ಗೂಗಲ್ ಪೆ ಬಳಸುತ್ತಿದ್ದೀರಾ? ಹಾಗಿದ್ದರೆ ಗೂಗಲ್ ಕೊಡುತ್ತೆ ಸಾಲ. ನಿಮಿಷಗಳಲ್ಲಿ ನೇರ ಬ್ಯಾಂಕ್ ಖಾತೆಗೆ. G-pay Loan
Below is the complete details of SBI Scheme called SBIF asha scholarship- Eligibility, Application explanation details explained in Kannada.
SBIF ಆಶಾ ಸ್ಕಾಲರ್ಶಿಪ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋಜನೆ ಆಗಿರುವಂತಹ ಈ ಯೋಜನೆಯಲ್ಲಿ ಸಮಾಜದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಸುಧಾರಣೆಗಾಗಿ ಈ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಬಹುದು. ಭಾರತ ದೇಶದಲ್ಲಿರುವಂತಹ ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಯೋಜನೆ ಮೂಲಕ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ಮಾಡಲು ಹೊರಟಿದೆ.
ಯೋಜನೆಯ ಅರ್ಹತೆ ಮೊತ್ತ ಹಾಗೂ ದಾಖಲೆಗಳು
ಭಾರತದ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಯೋಜನೆಯಲ್ಲಿ (SBI Scheme) ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಆರರಿಂದ 12ನೇ ತರಗತಿಯೊಳಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ. ಹಿಂದಿನ ತರಗತಿಯಲ್ಲಿ ಕನಿಷ್ಠ ಪಕ್ಷ 75 ಪ್ರತಿಶತ ಅಂಕಗಳನ್ನು ಪಡೆದಿರಬೇಕು. ಮೂರು ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿರುವ ಕುಟುಂಬಗಳಿಗೆ ಸಿಗೋದಿಲ್ಲ. ವಿದ್ಯಾರ್ಥಿಗಳಿಗೆ ವರ್ಷಕ್ಕೆ ಹತ್ತು ಸಾವಿರ ರೂಪಾಯಿಗಳ ವರೆಗೂ ಕೂಡ ಈ ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ. ಇನ್ನು ದಾಖಲೆಗಳ ವಿಚಾರಕ್ಕೆ ಬರೋದಾದ್ರೆ ಈ ಮೇಲಿನ ಈಗಾಗಲೇ ಕೆಲವೊಂದು ಮಾಹಿತಿಗಳನ್ನು ನೀಡಿದ್ದೇವೆ ಹಾಗೂ ಅವುಗಳ ಜೊತೆಗೆ ಆಧಾರ್ ಕಾರ್ಡ್ (Aadhar card) ಅರ್ಜಿ ಸಲ್ಲಿಸಿ ಅವರ ಬ್ಯಾಂಕ್ ಅಕೌಂಟ್ ನ ವಿವರ, ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಇನ್ಕಮ್ ಸರ್ಟಿಫಿಕೇಟ್ ಬಗ್ಗೆ ಅಂದರೆ ನಿಮ್ಮ ಆದಾಯದ ದೃಢೀಕರಣ ಮಾಡುವಂತಹ ಪುರಾವೆಗಳನ್ನು ನೀಡಬೇಕಾಗಿರುತ್ತದೆ.ಅರ್ಜಿ ಸಲ್ಲಿಸುವುದು ಹೇಗೆ? (SBI Scheme)
https://www.buddy4study.com/page/sbi-asha-scholarship-program ಇಲ್ಲಿ ತೋರಿಸಲಾಗಿರುವ ಲಿಂಕ್ ಮೇಲೆ ಮೊದಲಿಗೆ ಕ್ಲಿಕ್ ಮಾಡಬೇಕು. ಅಪ್ಲೈ ಮಾಡುವ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಇ-ಮೇಲ್ ಐಡಿ ಹಾಗೂ ನಿಮ್ಮ ನಂಬರ್ ಅನ್ನು ಕೇಳಲಾಗುತ್ತದೆ ಅಲ್ಲಿ ಸರಿಯಾದ ರೀತಿಯಲ್ಲಿ ಪೂರ್ತಿ ಮಾಡಿ. ಸ್ಕಾಲರ್ಶಿಪ್ ಪ್ರೋಗ್ರಾಮ್ ಪುಟಕ್ಕೆ ನಿಮ್ಮನ್ನು ಇದು ಕರೆದೊಯ್ಯುತ್ತದೆ. ಸ್ಟಾರ್ಟ್ ಅಪ್ಲಿಕೇಷನ್ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಕೇಳಲಾಗಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ತುಂಬ ಬೇಕಾಗುತ್ತದೆ. ಇದೆಲ್ಲಾ ಆದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಸಾಕು ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ.
ಯಾವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ
ಅವರ ಶೈಕ್ಷಣಿಕ ಅಂಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳ ಫೋನ್ ಮೂಲಕ ಸಂದರ್ಶನ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ ಹೀಗಾಗಿ ನೀವು ಕೂಡ ಈ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿಯನ್ನು ನಿಮಗಾಗಿ ಅಥವಾ ಒಂದು ವೇಳೆ ನೀವು ಪೋಷಕರಾಗಿದ್ದಾರೆ ನಿಮ್ಮ ಮಕ್ಕಳಿಗಾಗಿ ಮಾಡಬಹುದಾಗಿದೆ.
Comments are closed.