Loan: ಖಾಸಗಿ ಬ್ಯಾಂಕ್ ಆದರೆ ಮಹಿಳೆಯರಿಗೆ ಕೊಡುತ್ತೆ ಲೋನ್- ಅಡಮಾನ, ಗ್ಯಾರಂಟಿ ಏನು ಬೇಡ. ಅರ್ಜಿ ಹಾಕಿದ್ರೆ ಹಣ ಕೊಡ್ತಾರೆ.
Loan: ನಮಸ್ಕಾರ ಸ್ನೇಹಿತರೆ ಇಂದಿನ ದಿನಗಳಲ್ಲಿ ಭಾರತದಲ್ಲಿ ಸಾಕಷ್ಟು ಬ್ಯಾಂಕುಗಳು ನಿಮಗೆ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ಹಾಗೂ ಸಾಲ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತವೆ ಅವುಗಳಲ್ಲಿ ಇಂದು ನಾವ್ ಮಾತನಾಡಲು ಹೊರಟಿರೋದು ಬಂಧನ್ ಬ್ಯಾಂಕಿನ(Bandhan Bank) ಬಗ್ಗೆ. ದೇಶದಲ್ಲಿ ಈ ಬ್ಯಾಂಕ್ ನವರು ಈಗಾಗಲೇ 5371 ಶಾಖೆಗಳಿಗಿಂತ ಹೆಚ್ಚಿನ ಶಾಖೆಯನ್ನು ಹೊಂದಿದ್ದಾರೆ.
Table of Contents
ಇನ್ನು ಈ ಬ್ಯಾಂಕಿನಲ್ಲಿ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡುವ ಮೂಲಕ ಸಮಾಜವನ್ನು ಇನ್ನಷ್ಟು ಮುಂದುವರಿಯುವಂತೆ ಮಾಡಬಹುದಾಗಿದೆ ಎನ್ನುವ ಕಾರಣಕ್ಕಾಗಿ ಸಾಕಷ್ಟು ಲೋನ್ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಾಗಿದ್ರೆ ಬನ್ನಿ ಬಂಧನ್ ಬ್ಯಾಂಕಿನ ಮೂಲಕ ಮಹಿಳೆಯರಿಗೆ ಜಾರಿಗೆ ತಂದಿರುವಂತಹ ಜನಪ್ರಿಯ ಲೋನ್ ಯೋಜನೆಗಳು ಯಾವುವು ಎಂಬುದನ್ನು ತಿಳಿಯೋಣ.
ಸೂಚನಾ ಲೋನ್(Suchana Loan)
ಬಂಧನ್ ಬ್ಯಾಂಕಿನ ಮೂಲಕ ಹೊಸದಾಗಿ ವ್ಯಾಪಾರವನ್ನು ಪ್ರಾರಂಭ ಮಾಡಬೇಕೆಂದಿರುವ ಮಹಿಳೆಯರಿಗೆ ಅಥವಾ ಈಗಾಗಲೇ ಇರುವಂತಹ ವ್ಯಾಪಾರವನ್ನು ಇನ್ನಷ್ಟು ದೊಡ್ಡದು ಮಾಡುವುದಕ್ಕಾಗಿ ಸೂಚನಾ ಲೋನ್ ಯೋಜನೆಯನ್ನು ನೀಡಲಾಗುತ್ತಿದ್ದು ಇದನ್ನು ಡೋರ್ ಸ್ಟೆಪ್ ಡೆಲಿವರಿಯ ಮೂಲಕ ಇನ್ನಷ್ಟು ಸುಲಭವಾಗಿಸಲಾಗಿದೆ. ಈ ಯೋಜನೆಯ ಕಾರ್ಯರೂಪಕ್ಕೆ ತರುವ ಕಾರಣಕ್ಕಾಗಿ ಬ್ಯಾಂಕಿನಿಂದ ಕೆಲವು ತಂಡಗಳು ಬಯೋಮೆಟ್ರಿಕ್ ಹಾಗೂ ಡಿಜಿಟಲ್ ಪ್ರಾಸೆಸ್ ಮೂಲಕ ಲೋನ್ ಅನು ನೀಡುವುದಕ್ಕಾಗಿ ನಿಮ್ಮ ಮನೆಗೆ ಬರುವಂತಹ ಸೇವೆಯನ್ನು ಕೂಡ ಹೊಂದಿದ್ದಾರೆ. ಒಂದು ವೇಳೆ ನಿಮ್ಮ ಖಾತೆ ಮೊದಲಿನಿಂದಲೂ ಕೂಡ ಬಂಧನ್ ಬ್ಯಾಂಕಿನಲ್ಲಿ ಇದ್ದರೆ ಸಾವಿರ ರೂಪಾಯಿಗಳಿಂದ 25,000 ವರೆಗೆ ಸಾಲವನ್ನು ನೀವು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು.
- ಈ ಲೋನ್ ಪಡೆದುಕೊಳ್ಳುವಂತಹ ಮಹಿಳೆಯರ ವಯಸ್ಸು 18 ರಿಂದ 65 ವರ್ಷಗಳ ನಡುವೆ ಇರಬೇಕು.
- ಲೋನ್ಗಾಗಿ ಅರ್ಜಿ ಸಲ್ಲಿಸುವಂತಹ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯ ಇರಬೇಕು.
- ಸೂಚನೆ ಯೋಜನೆ ಚಾಲ್ತಿಯಲ್ಲಿರುವಂತಹ ಸ್ಥಳದಲ್ಲಿ ಇರುವವರಿಗೆ ಮಾತ್ರ ಯೋಜನೆ ಸಿಗುತ್ತದೆ ಹಾಗೂ ಈ ಲೋನಿನ ಮೇಲೆ ಬಡ್ಡಿದರ 17.95 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
- ಒಂದು ವೇಳೆ ನೀವು ಈ ಲೋನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿದ್ದರೆ 18002588181 ನಂಬರಿಗೆ ಕರೆ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಸೃಷ್ಟಿ ಬಂಧನ ಬ್ಯಾಂಕ್ ಲೋನ್(Srishti Bandhana Bank Loan)
ಈ ವಿಶೇಷವಾದ ಲೋನ್ ಯೋಜನೆಯನ್ನು ಈಗಾಗಲೇ ಇರುವಂತಹ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವ ಕಾರಣಕ್ಕಾಗಿ ಅಥವಾ ಕಚ್ಚಾ ಮೆಟೀರಿಯಲ್ ಗಳನ್ನು ಖರೀದಿಸಲು ಬಳಸಲು ಶಕ್ತವಾಗುವಂತಹ ಲೋನ್ ಯೋಜನೆಯಾಗಿದೆ.
- ಈ ಲೋನ್ ಯೋಜನೆಯಲ್ಲಿ 26,000 ಗಳಿಂದ ಪ್ರಾರಂಭಿಸಲಾಗಿ 1.50 ಲಕ್ಷಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ.
- ಈ ಲೋನ್ ಪಡೆದುಕೊಳ್ಳಲು ವಯೋಮಾನ್ಯತೆ 18ರಿಂದ 65 ವರ್ಷದ ನಡುವೆ ಇರಬೇಕು.
- ಲೋನ್ ಅನ್ನು ಎರಡು ವರ್ಷದ ಒಳಗೆ ತೀರಿಸಬೇಕಾಗಿರುತ್ತದೆ ಹಾಗೂ ಪ್ರೋಸೆಸಿಂಗ್ ಫೀಸ್ ಒಂದು ಪ್ರತಿಶತ ಹಾಗೂ ಜಿಎಸ್‌ಟಿ ಸೇರಿರುತ್ತದೆ.
- ಲೋನ್ ಅನ್ನು ಎರಡು ವರ್ಷದ ಒಳಗೆ ಚುಕ್ತಾ ಮಾಡಬೇಕಾಗಿರುತ್ತದೆ.
ಇದನ್ನು ಕೂಡ ಓದಿ: Instant Personal Loan: ದಿಡೀರ್ ಎಂದು 3 ಲಕ್ಷ ಹಣ ಬೇಕು ಅಂದ್ರೆ – ಗ್ಯಾರಂಟಿ ಇಲ್ಲದೆ ಕೊಡುತ್ತಾರೆ. ಅರ್ಜಿ ಹಾಕಿ ಹಣ ಬರುತ್ತೆ.
ಸುಬ್ರಿದ್ಧಿ ಬಂಧನ್ ಬ್ಯಾಂಕ್ ಲೋನ್ (Loan)
ಒಂದು ವೇಳೆ ಈಗಾಗಲೇ ನೀವು ಒಂದು ವ್ಯಾಪಾರವನ್ನು ನಡೆಸುತ್ತಿದ್ದು ಒಂದು ವೇಳೆ ಅದರಲ್ಲಿ ಲೋನ್ ಪಡೆದುಕೊಂಡು ಅದನ್ನು ತೀರಿಸಲು ಸಾಧ್ಯವಾಗದೆ ನೀವು ಕಷ್ಟ ಪಡುತ್ತಿದ್ದರೆ ಅದನ್ನು ತೀರಿಸಲು ನೀವು ಈ ಯೋಜನೆಯ ಲೋನ್ ಪಡೆದುಕೊಳ್ಳಬಹುದಾಗಿದೆ.
- ಅರ್ಜಿ ಸಲ್ಲಿಸುವವರು ಯಾವುದೇ ರೀತಿಯ ಈ ಮೇಲೆ ಹೇಳಿರುವಂತಹ ಲೋನ್ ಗಳನ್ನು ಪಡೆದುಕೊಂಡಿದ್ದು, ಈ ಲೋನ್ ಅನ್ನು ಪಡೆಯಲು ಕೂಡ ಅರ್ಹತೆಯನ್ನು ಹೊಂದಿದ್ದರೆ ಲೋನ್ ಕಟ್ಟಲು ಬೇಕಾಗಿರುವಂತಹ 50 ಪ್ರತಿಶತ ಹಣವನ್ನು ಈ ಸಾಲದ (Loan) ರೂಪದಲ್ಲಿ ನೀಡಲಾಗುತ್ತದೆ.
- ಈ ಲೋನಿನ ಬಡ್ಡಿದರ ವಾರ್ಷಿಕ 18.95 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
- ಲೋನ್ ಮರುಪಾವತಿ ಮಾಡಲು ನಿಮಗೆ 12 ತಿಂಗಳು, 24 ತಿಂಗಳು, 36 ಹಾಗೂ 48 ತಿಂಗಳುಗಳ ಅವಕಾಶವನ್ನು ನೀಡಲಾಗುತ್ತದೆ.
ಸಮಾಧಾನ ಲೋನ್
ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳು ಬಂದಾಗ ಅಥವಾ ಲಾಕ್ಡೌನ್ ಸಂದರ್ಭದಲ್ಲಿ ಎದುರಿಸಿದಂತಹ ಪರಿಸ್ಥಿತಿಗಳನ್ನು ತಡೆಗಟ್ಟಲು ರೆವಿನ್ಯೂ ಜನರೇಟ್ ಮಾಡಲು 5 ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 15000 ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ. ಎರಡು ವರ್ಷಗಳ ಸಮಯಾವಕಾಶವನ್ನು ಮರುಪಾವತಿಗೆ ನೀಡಲಾಗುತ್ತದೆ. 18 ರಿಂದ 65 ವರ್ಷಗಳ ನಡುವಿನ ವಯಸ್ಸಿನ ಮಹಿಳೆಯರು ಈ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದ್ದು 17.95 ಪ್ರತಿಶತದಿಂದ ಬಡ್ಡಿ ಪ್ರಾರಂಭವಾಗುತ್ತದೆ.
ಸಮೃದ್ಧಿ ಲೋನ್ ಯೋಜನೆ
ಯಾವುದೇ ವ್ಯಾಪಾರವನ್ನು ನಡೆಸುತ್ತಿರುವಂತಹ ಮಹಿಳೆಯರಿಗೆ ತಮ್ಮ ವ್ಯಾಪಾರವನ್ನು ಇನ್ನಷ್ಟು ಹೆಚ್ಚಾಗಿ ವಿಸ್ತರಿಸಲು 75,000 ಗಳಿಂದ ಮೂರು ಲಕ್ಷ ರೂಪಾಯಿಗಳವರೆಗೆ ಈ ಯೋಜನೆಯ ಮೂಲಕ ಲೋನ್ ನೀಡಲಾಗುತ್ತದೆ. 12 ತಿಂಗಳು, 18 ಹಾಗೂ 24 ತಿಂಗಳ 3 ಮರುಪಾವತಿ ಮಾಡುವಂತಹ ಆಪ್ಷನ್ ನೀಡಲಾಗುತ್ತದೆ. ಇಲ್ಲಿ ಕೂಡ ಬಡ್ಡಿದರ 17.95 ಪ್ರತಿಶತ ಆಗಿರುತ್ತದೆ ಹಾಗೂ ಒಂದು ಪ್ರತಿಶತದ ಜೊತೆಗೆ ಜಿ ಎಸ್ ಟಿ ಸೇರಿಸಿ ಪ್ರೊಸೆಸಿಂಗ್ ಫೀಸ್ ಅನ್ನು ನೀಡಬೇಕಾಗಿರುತ್ತದೆ. ಈ ಮೂಲಕ ನೀವು ಈ ಮೇಲೆ ಹೇಳಿರುವಂತ ಲೋನ್ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ.
Comments are closed.