Neer Dose Karnataka
Take a fresh look at your lifestyle.

Kawasaki Ninja 7 Hybrid: ವಿಶ್ವದ ಮೊದಲ ಟಾಪ್ ಎಂಡ್ ಹೈಬ್ರಿಡ್ ಬೈಕ್ Kawasaki Ninja 7 Hybrid ಲಾಂಚ್. ಬೈಕ್ ಬಗ್ಗೆ ತಿಳಿದರೆ ಖರೀದಿ ಮಾಡುತ್ತೀರಿ.

Kawasaki Ninja 7 Hybrid Bike Details Explained: ನಮಸ್ಕಾರ ಸ್ನೇಹಿತರೆ ದ್ವಿಚಕ್ರ ವಾಹನಗಳಲ್ಲಿ ಜಾಗತಿಕವಾಗಿ ದೊಡ್ಡಮಟ್ಟದಲ್ಲಿ ಹೆಸರನ್ನು ಮಾಡಿರುವಂತಹ Kawasaki ಸಂಸ್ಥೆ ಕೊನೆಗೂ ತನ್ನ ಬಹುನಿರೀಕ್ಷಿತ Kawasaki Ninja 7 Hybrid ಬೈಕ್ ಅನ್ನು ಅಧಿಕೃತವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಸದ್ಯಕ್ಕೆ ಇದು ಭಾರತಕ್ಕೆ ಯಾವಾಗ ಬರುತ್ತದೆ ಎನ್ನುವ ಅಧಿಕೃತ ಮಾಹಿತಿ ಇನ್ನು ಕೂಡ ಸಿಕ್ಕಿಲ್ಲ ಆದರೆ, ಇಂಗ್ಲೆಂಡ್ ನಲ್ಲಿ 2024 ರ ಏಪ್ರಿಲ್ ನಿಂದ ಮಾರುಕಟ್ಟೆಯಲ್ಲಿ ಈ ಬೈಕ್ ಲಭ್ಯವಿರಲಿದೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಜಗತ್ತಿನ ಮೊದಲ ಸ್ಟ್ರಾಂಗ್ ಹೈಬ್ರಿಡ್ ಬೈಕ್(strong hybrid bike) ಎಂಬುದಾಗಿ ಗುರುತಿಸಲಾಗಿದೆ.

ಇದನ್ನು ಕೂಡ ಓದಿ: ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ – Post Office Scheme

Kawasaki Ninja 7 Hybrid Bike Details Explained Clearly in kannada By Automobile News Experts.

Kawasaki Ninja 7 Hybrid ಬೈಕ್ ನಲ್ಲಿ 451 ಸಿಸಿ ವಾಟರ್ ಕೂಲ್ಡ್ ತಂತ್ರಜ್ಞಾನವನ್ನು ಹೊಂದಿರುವಂತಹ ಅವಳಿ ಇಂಜಿನ್ ಗಳನ್ನು ಅಳವಡಿಸಲಾಗಿದೆ. 9kw ಟ್ರಾಕ್ಷನ್ ಮೋಟಾರ್ ಅನ್ನು ಜನರೇಟ್ ಮಾಡುವಂತಹ 48V ಲಿಥಿಯಂ ಅಯಾನ್ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. 69Bhp ಇ ಬೂಸ್ಟ್ ಅನ್ನು ಜನರೇಟ್ ಮಾಡುತ್ತದೆ. ಇದನ್ನು ಇಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್ ಎರಡು ಸೇರಿ ಜನರೇಟ್ ಮಾಡುತ್ತವೆ ಎಂಬುದನ್ನು ನೀವು ಇಲ್ಲಿ ಕಾಣಬಹುದಾಗಿದೆ.

Kawasaki Ninja 7 Hybrid ಕೆಲವೊಂದು ಮೂಲಗಳ ಪ್ರಕಾರ 650 ರಿಂದ 700 ಸಿಸಿ ಪರ್ಫಾರ್ಮೆನ್ಸ್ ನೀಡುವಂತಹ ಕ್ಷಮತೆಯನ್ನು ಕೂಡ ಹೊಂದಿದೆ ಎಂಬುದಾಗಿ ತಿಳಿದು ಬರುತ್ತದೆ. ಇನ್ನು ಇದರ ಇಂಧನ ದಕ್ಷತೆ ಕೂಡ 250 ಸಿಸಿ ಇಂಜಿನ್ ಹೊಂದಿರುವಂತಹ ಬೈಕುಗಳಿಗೆ ಸಮಾನವಾಗಿದೆ ಎಂದು ತಿಳಿದು ಬರುತ್ತದೆ. Kawasaki Ninja 7 Hybrid ಮೂರು ರೈಡಿಂಗ್ ಮೋಡ್ ಗಳನ್ನು ಕೂಡ ನೀವು ಕಾಣಬಹುದಾಗಿದೆ. ಸ್ಪೋರ್ಟ್ಸ್, ಇಕೋ ಹಾಗೂ EV ಮೋಡ್ ಎಂಬುದಾಗಿ ತಿಳಿದು ಬರುತ್ತದೆ.

Kawasaki Ninja 7 Hybrid ನಲ್ಲಿ ನೀವು ಟಿ ಎಫ್ ಟಿ ಡ್ಯಾಶ್ ಬೋರ್ಡ್ ಅನ್ನು ಕೂಡ ಕಾಣಬಹುದಾಗಿದೆ. ಇದರಲ್ಲಿರುವ ವಾಕ್ ಮೋಡ್ ನಿಮಗೆ ರಿವರ್ಸ್ ಫಂಕ್ಷನ್ ಹಾಗೂ ಲೋ ಸ್ಪೀಡ್ ಅನ್ನು ಕೂಡ ನೀಡುತ್ತದೆ. ಬೈಕ್ ನಿಂತಾಗ ಇಂಜಿನ್ ಅನ್ನು ಕೂಡ ಸ್ಟಾರ್ಟ್ ಹಾಗೂ ಸ್ಟಾಪ್ ಮಾಡುವಂತಹ ತಂತ್ರಜ್ಞಾನವನ್ನು ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. ಇದೇ ಕಾರಣಕ್ಕಾಗಿ ನೀವು Kawasaki Ninja 7 Hybrid ಬೈಕಿನಲ್ಲಿ ಇಂಧನ ದಕ್ಷತೆಯನ್ನು ಸುಲಭವಾಗಿ ಕಾಣಬಹುದಾಗಿದೆ.

Kawasaki Ninja 7 Hybrid ಬೈಕ್ ನಲ್ಲಿ ಬ್ರೇಕಿಂಗ್ ಸಿಸ್ಟಮ್ ಅನ್ನು ಕೂಡ ಸುರಕ್ಷತಾ ದೃಷ್ಟಿಯಲ್ಲಿ ಉತ್ತಮವಾಗಿ ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಎರಡು ಡಿಸ್ಕ್ ಬ್ರೇಕ್ ಗಳನ್ನು ಹಾಗೂ ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ನ್ನು ಅಳವಡಿಸಲಾಗಿದೆ. ಸಸ್ಪೆನ್ಷನ್ ವಿಚಾರದ ಬಗ್ಗೆ ಮಾತನಾಡುವುದಾದರೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹಾಗೂ ಹಿಂಭಾಗದಲ್ಲಿ ಮೋನೋ ಶಾರ್ಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ. ಖಂಡಿತವಾಗಿ ನಿಮಗೆ ಇದು ರೈಡಿಂಗ್ನಲ್ಲಿ ಕೂಡ ಸಾಕಷ್ಟು ಉತ್ತಮವಾದ ಅನುಭವವನ್ನು ನೀಡುವ ತಂತ್ರಜ್ಞಾನವನ್ನು ಹೊಂದಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಬೈಕ್ 24 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ.

ಹೊಸ ಯೋಜನೆ- ಸರ್ಕಾರನೇ ಕೊಡುತ್ತೆ 25000. ನಿಮ್ಮ ಮನೆಯ ಮಹಿಳೆಯರ ಕೈಯಲ್ಲಿ ಕೂಡಲೇ ಅರ್ಜಿ ಹಾಕಿಸಿ. Shrama Shakthi Scheme

Comments are closed.