Neer Dose Karnataka
Take a fresh look at your lifestyle.

ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಪ್ರಾರಂಭವಾಗಿದೆಯೇ?? ಈ ಚಿಕ್ಕ ಕ್ರಮವನ್ನು ಅನುಸರಿಸಿ ಬಿಳಿ ಕೂದಲು ನಿಲ್ಲುತ್ತದೆ.

ನಮಸ್ಕಾರ ಸ್ನೇಹಿತರೇ ಜನರನ್ನು ಅತಿಯಾಗಿ ಕಾಡುವ ಸಮಸ್ಯೆ ಇದು. ಹೌದು ವಯಸ್ಸಾದ ಮೇಲೆ ಬಿಳಿ ಕೂದಲು ಬರುವುದು ಸಹಜ. ಆದ್ರೆ ಇಳೆವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಈ ಕಾಲಮಾನದ ದೊಡ್ದ ಸಮಸ್ಯೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿಗಳು ಜೊತೆಗೆ ಹವಾಮಾನ ಬಿಳಿ ಕೂದಲು ಶುರುವಾಗುವುದಕ್ಕೆ ಅತ್ಯಂತ ಪ್ರಮುಖ ಕಾರಣ. ವೈದ್ಯರ ಪ್ರಕಾರ ಬಿಳಿ ಕೂದಲು ಬಂದರೆ ಮತ್ತೆ ಅದನ್ನು ಕಪ್ಪಾಗಿಸಲು ಸಾಧ್ಯವಿಲ್ಲ, ಆದರೆ ಕೆಲವು ಆಹಾರಗಳಿಂದ ಬಿಳಿ ಕೂದಲು ಹೆಚ್ಚಾಗುವುದನ್ನು ತಡೆಗಟ್ಟಬಹುದು, ಮತ್ತೆ ಬೇಗ ಬಿಳಿ ಕೂದಲು ಹುಟ್ಟದಂತೆಯೂ ನೋಡಿಕೊಳ್ಳಬಹುದು.

ಅಕಾಲಿಕ ಬಿಳಿ ಕೂದಲನ್ನು ತಡೆಯಲು ಮುಖ್ಯವಾಗಿ ನಮ್ಮ ದಿನನಿತ್ಯ ಸೇವಿಸುವ ಆಹಾರಗಳ ಬಗ್ಗೆ ಗಮನವಹಿಸಬೇಕು. ಅತ್ಯಂತ ಹೆಚ್ಚಿನ ಪ್ರೋಟಿನ್ ಇರುವ, ವಿಟಮಿನ್ ಸಿ ಯನ್ನು ಹೊಂದಿರುವ ಹಾಗೂ ಕೂದಲ ಬೇರುಗಳನ್ನು ಗಟ್ಟಿಯಾಗಿಸುವ ಕಿತ್ತಳೆ ಹಣ್ಣುಗಳನ್ನು ಸೇವಿಸುವುದು ಉತ್ತಮ. ಇದೀಗ ಚಳಿಗಾಲ ಆರಂಭವಾಗಿದೆ, ಹಾಗಾಗಿ ಸುಲಭವಾಗಿ ಕಿತ್ತಳೆ ಹಣ್ಣುಗಳು ಸಿಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಕಿತ್ತಳೆ ಹಣ್ಣು ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು.

ಇನ್ನು ಕೂದಲಿಗೆ ಹೆಚ್ಚಿನ ವಿಟಮಿನ್ ದೊರೆತರೆ ಬೇಗ ಬಿಳಿಯಾಗುವುದನ್ನು ನಿಯಂತ್ರಿಸಬಹುದು. ಜೊತೆಗೆ ಅಜೀರ್ಣ ಸಮಸ್ಯೆ ಇಲ್ಲದಿದ್ದರೆ ಕೂದಲಿಗೆ ತೊಂದರೆಯಾಗುವುದಿಲ್ಲ. ಹಾಗಾಗಿ ನಿತ್ಯದ ಆಹಾರದಲ್ಲಿ ಮೊಸರು, ಸೋಯಾ, ವಿನೆಗರ್ ಹಾಗೂ ಆರೋಗ್ಯಕರ ಉಪ್ಪಿನಕಾಯಿಗಳನ್ನು ಕೂಡ ಸೇವನೆ ಮಾಡಬೇಕು. ವಿಟಮಿನ್ ಬಿ ಅಂಶವಿರುವ ಕೋಳಿಯ ಮೊಟ್ಟೆಯನ್ನು ಒಡೆದು ಕೂದಲಿಗೆ ಹಚ್ಚಿಕೊಂಡು ಸ್ವಲ್ವ ಸಮಯ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂದಲು ಬೇಗ ಬೆಳ್ಳಗಾಗುವುದನ್ನು ತಡೆಯಬಹುದು. ಜೊತೆಗೆ ಕೂದಲುದುರುವಿಕೆ, ತಲೆ ಹೊಟ್ಟು ಕೂಡ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಡಾರ್ಕ್ ಚಾಕಲೇಟ್ ಸೇವನೆ ಮಾಡುವುದು. ಇದರಲ್ಲಿ ಕಬ್ಬಿಣದ ಅಂಶ ಮತ್ತು ಕಾಪರ್ ಪ್ರಮಾಣ ಹೆಚ್ಚಾಗಿ ಕಂಡುಬರುವುದರಿಂದ ಕೂದಲಿನ ಆರೋಗ್ಯಕ್ಕೆ ಬೇಕಾದ ಮೆಲನಿನ್ ಉತ್ಪತ್ತಿಯಾಗಲು ಸಹಾಯ ಮಾಡುತದೆ. ಹೀಗೆ ಆರೋಗುಅಕರ ಆಹಾರವೇ ನಮ್ಮ ಆರೊಗ್ಯದ ಮೂಲಮಂತ್ರವಾಗಿದೆ.

Comments are closed.