ಇದ್ದಕ್ಕಿದ್ದ ಹಾಗೆ ಧೋನಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಲು ಆ ಆಟಗಾರನೇ ಕಾರಣ ಎಂದ ರವಿ ಶಾಸ್ತ್ರೀ, ಆಟಗಾರ ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೇಟ್ ಕಂಡ ಅತ್ಯಂತ ಯಶಸ್ವಿ ನಾಯಕ. ಕ್ರಿಕೇಟ್ ನ ಮೂರು ಮಾದರಿಯಲ್ಲಿಯೂ ಭಾರತ ತಂಡವನ್ನ ಚಾಂಪಿಯನ್ ಪಟ್ಟಕ್ಕೆ ಕರೆದೊಯ್ದ ನಾಯಕ ಎಂದು ಹೇಳಬಹುದು. ಇಂತಹ ಧೋನಿ 2014ರಲ್ಲಿ ಏಕಾಏಕಿ ಟೆಸ್ಟ್ ಕ್ರಿಕೇಟ್ ಗೆ ನಿವೃತ್ತಿ ಘೋಷಿಸಿಬಿಟ್ಟರು. ಅದಕ್ಕೆ ಕಾರಣ ಏನು ಎಂದು ಇದುವರೆಗೂ ತಿಳಿದಿರಲಿಲ್ಲ.
ಈಗ ಭಾರತದ ಮಾಜಿ ಕೋಚ್ ಆಗಿರುವ ಹಾಗೂ 2014ರಲ್ಲಿ ಭಾರತ ತಂಡದ ಮ್ಯಾನೇಜರ್ ಆಗಿದ್ದ ರವಿಶಾಸ್ತ್ರಿ ಈಗ ಧೋನಿ ರಾಜೀನಾಮೆಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. 2014 ರಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಯಕತ್ವವನ್ನು ಧೋನಿ ಪಿತೃತ್ವ ರಜೆಗೆ ತೆರಳಿದ ಕಾರಣ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಆಗ ಎರಡು ಇನ್ನಿಂಗ್ಸ್ ನಲ್ಲಿ ಶತಕ ಭಾರಿಸಿದ್ದ ವಿರಾಟ್, ಕೆಲವೇ ರನ್ನುಗಳ ಅಂತರದಲ್ಲಿ ಭಾರತ ಸೋಲಬೇಕಾಯಿತು. ನಂತರ ಎರಡನೇ ಟೆಸ್ಟ್ ಗೆ ನಾಯಕನಾಗಿ ಧೋನೌ ಮರಳಿದರು. ಈ ಮಧ್ಯೆ ಮೆಲ್ಬೋರ್ನ್ ಟೆಸ್ಟ್ ರೋಚಕ ಡ್ರಾ ನಲ್ಲಿ ಅಂತ್ಯವಾಯಿತು.
ಆಗ ತಂಡದ ಎಲ್ಲಾ ಆಟಗಾರರನ್ನು ಮಾತನಾಡಬೇಕೆಂದು ಧೋನಿ ಕರೆದರು. ಎಲ್ಲಾ ಆಟಗಾರರು ಟೆಸ್ಟ್ ಬಗ್ಗೆ ಧೋನಿ ಮಾತನಾಡಬಹುದೆಂದು ಊಹಿಸಿದ್ದರು. ಆದರೇ ಧೋನಿ ಏಕಾಏಕಿ ಟೆಸ್ಟ್ ಕ್ರಿಕೇಟ್ ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದರು. ಟೆಸ್ಟ್ ಕ್ರಿಕೇಟ್ ಗೆ ನನ್ನ ದೇಹ ಸ್ಪಂದಿಸುತ್ತಿಲ್ಲ. ಮೇಲಾಗಿ ಟೆಸ್ಟ್ ಕ್ರಿಕೇಟ್ ತಂಡದ ನಾಯಕತ್ವವನ್ನ ವಿರಾಟ್ ಕೊಹ್ಲಿ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದರಂತೆ. ಅದಲ್ಲದೇ ನಾನು ವೈಟ್ ಬಾಲ್ ಕ್ರಿಕೇಟ್ ಗೆ ಹೆಚ್ಚು ಆಸಕ್ತಿ ವಹಿಸುವ ಸಲುವಾಗಿ ರೆಡ್ ಬಾಲ್ ಗೆ ವಿದಾಯ ಹೇಳುತ್ತೇನೆ ಎಂದರಂತೆ. ಹಾಗಾಗಿ ರವಿಶಾಸ್ತ್ರಿ ಪ್ರಕಾರ, ಧೋನಿ ಧೀಡಿರ್ ಅಂತ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳಲು ವಿರಾಟ್ ಕೊಹ್ಲಿಯೇ ಕಾರಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.