ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ತಂಡದ ರೋಚಕ ಪಂದ್ಯ, ಮಾಜಿ ಕ್ಯಾಪ್ಟನ್ ಹಾಗೂ ಹಾಲಿ ಕ್ಯಾಪ್ಟನ್ ನಡುವಿನ ಕಾದಾಟ. ಹೇಗಿತ್ತು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾಟಗಳು ಐಪಿಎಲ್ ಪಂದ್ಯಾಟ ಗಳಿಗಿಂತ ರೋಚಕವಾಗಿವೆ. ಪ್ರತಿಯೊಂದು ಪಾಯಿಂಟ್ಸ್ ಗಳಿಗಾಗಿ ತಂಡಗಳು ಕಾದಾಡುವ ರೀತಿ ನಿಜಕ್ಕೂ ರೋಮಾಂಚನಗೊಳಿಸುತ್ತವೆ. ಇನ್ನು ನಮ್ಮ ನೆಚ್ಚಿನ ಬೆಂಗಳೂರು ಬುಲ್ಸ್ ತಂಡ ನಿಮಗೆಲ್ಲರಿಗೂ ತಿಳಿದಿರುವಂತೆ ಕೊನೆಯ ಕ್ಷಣದಲ್ಲಿ ಗೆಲ್ಲುವ ಅಥವಾ ಹೋರಾಡುವ ಚಾಳಿಯನ್ನು ಮುಂದುವರಿಸಿಕೊಂಡು ಬಂದಿದೆ. ನಿನ್ನೆಯ ಪಂದ್ಯದಲ್ಲಿ ಕೂಡ ಇದೇ ರೀತಿ ನಡೆದಿದೆ.
ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ತಂಡಗಳ ನಡುವೆ ನಡೆಯುತ್ತಿದ್ದಂತಹ ಕಬಡ್ಡಿ ಪಂದ್ಯಾಟದಲ್ಲಿ ಮೊದಲ ಚರಣದಲ್ಲಿ ಬೆಂಗಳೂರು ಸಾಕಷ್ಟು ಮುನ್ನಡೆಯಲ್ಲಿತ್ತು. ಆದರೆ ಕೊನೆಕೊನೆಗೆ ಬರುತ್ತಿದ್ದಂತೆ ಬೆಂಗಳೂರು ತಂಡ ಹಿನ್ನಡೆಯನ್ನು ಅನುಭವಿಸಿತ್ತು. ಆದರೆ ನಾಯಕ ಪವನ್ ಕುಮಾರ್ ಸೆಹ್ರಾವತ್ ರವರು ಎದುರಾಳಿ ತಂಡದ ಕ್ಯಾಪ್ಟನ್ ಆಗಿರುವ ರೋಹಿತ್ ಕುಮಾರ್ ರವರನ್ನು ಹಿಡಿಯುವ ಮೂಲಕ ತಂಡವನ್ನು ಸಮಬಲದ ಫಲಿತಾಂಶಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಯ ಮುಮೆಂಟ್ ನಲ್ಲಿ ಅಂಕ ಬಂದಿದ್ದು ಸೋಲಿನ ದವಡೆಯಿಂದ ಪಾರಾಗಲು ಕಾರಣವಾಗಿದೆ.
ಪ್ರಾರಂಭದಲ್ಲಿ ಎರಡು ತಂಡಗಳು ಕೂಡ ಸಮಬಲದ ಹೋರಾಟವನ್ನು ತೋರಿಸಿದ್ದವು ಈ ಮಧ್ಯದಲ್ಲಿ ಬೆಂಗಳೂರು ಮುನ್ನಡೆಯನ್ನು ಕೂಡ ಕಾಯ್ದುಕೊಂಡಿತ್ತು. ಆದರೆ ಅದನ್ನು ಅಂತಿಮ ಸಮಯದವರೆಗೂ ಕೂಡ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕೊನೆಯ ಮೂರು ನಿಮಿಷದಲ್ಲಿ ಬೆಂಗಳೂರು ತಂಡದ ಮಾಜಿ ಕಪ್ತಾನ ಆಗಿರುವ ರೋಹಿತ್ ಕುಮಾರ್ ನೇತೃತ್ವ ತೆಲುಗು ಟೈಟನ್ಸ್ ತಂಡ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಕಡೆಯ ನಿಮಿಷದಲ್ಲಿ ರೋಹಿತ್ ಕುಮಾರ್ ರವರನ್ನು ಬೆಂಗಳೂರು ತಂಡದ ಹಾಲಿ ಕಪ್ತಾನ ಆಗಿರುವ ಪವನ್ ಕುಮಾರ್ ಸೆಹ್ರಾವತ್ ರವರು ಹಿಡಿಯುವ ಮೂಲಕ ಬೆಂಗಳೂರು ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ಪಂದ್ಯದ ಅಂಕ 34-34 ರಲ್ಲಿ ಅಂತ್ಯಗೊಂಡಿತ್ತು.
Comments are closed.