ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ಅಹಮದಾಬಾದ್ ಐಪಿಎಲ್ ತಂಡ. ಆಯ್ಕೆ ಮಾಡಿದ ಮೂರು ಘಟಾನುಘಟಿ ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ಕ್ಷೇತ್ರದ ಹಬ್ಬವೆಂದೇ ಖ್ಯಾತವಾಗಿರುವ ಐಪಿಎಲ್ ನ ಹೊಸ ಸೀಸನ್ ಅತಿಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಇದೇ ಫೆಬ್ರವರಿ ಎರಡನೇ ವಾರದಲ್ಲಿ ಅಂದರೆ 12 ಹಾಗೂ 13 ರಂದು ಮಗ ಆಕ್ಷನ್ ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕಿಂತ ಮುಂಚೆ ಅಂದರೆ ಜನವರಿ 31ರ ಒಳಗಡೆ ಹೊಸ ತಂಡಗಳ ಆಗಿರುವ ಅಹಮದಾಬಾದ್ ಹಾಗೂ ಲಕ್ನೋ ತಂಡಗಳಿಗೆ ತಮ್ಮ ಆಟಗಾರರ ಆಯ್ಕೆಯ ಅವಧಿಯ ಗಡುವನ್ನು ನೀಡಲಾಗಿತ್ತು.
ಈ ಎರಡು ಹೊಸ ತಂಡಗಳು ಯಾವ ಆಟಗಾರರನ್ನು ಆಯ್ಕೆ ಮಾಡುತ್ತಾರೆ ಎಂಬುದರ ಕುರಿತಂತೆ ಸಾಕಷ್ಟು ಕುತೂಹಲ ಹೆಚ್ಚಾಗಿತ್ತು. ಯಾಕೆಂದರೆ ಹಲವಾರು ಆಟಗಾರರು ತಾವು ಹಿಂದೆ ಇದ್ದಂತಹ ತಂಡಗಳಿಂದ ಹೊರ ಬಂದಿದ್ದರಿಂದಾಗಿ ಯಾರು ಯಾವ ತಂಡಕ್ಕೆ ಹೋಗಲಿದ್ದಾರೆ ಎಂಬುದರ ಕುರಿತಂತೆ ಕುತೂಹಲಗಳು ಹೆಚ್ಚಾಗಿದ್ದವು. ಆದರೆ ಈಗ ಅಹಮದಾಬಾದ್ ಕಂಡ ತಾನು ಆಯ್ಕೆ ಮಾಡಬೇಕಾಗಿದ್ದ ಮೂರು ಆಟಗಾರರ ಪಟ್ಟಿಯನ್ನು ಕೊನೆಗೂ ಕೂಡ ತಿಳಿಸಿದೆ
ಹೌದು ಸ್ನೇಹಿತರೆ ಮೂರು ಘಟಾನುಘಟಿ ಆಟಗಾರರನ್ನೇ ಅಹಮದಾಬಾದ್ ತಂಡ ಆಯ್ಕೆ ಮಾಡಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಹಾಗಿದ್ದರೆ ಆ ಮೂರು ಆಟಗಾರರು ಯಾರೆಂಬುದನ್ನು ನಾವು ತಿಳಿಯೋಣ ಬನ್ನಿ. ಸ್ನೇಹಿತರೆ ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯ ರವರನ್ನು 15 ಕೋಟಿ ರೂಪಾಯಿ ಖರೀದಿಸಿದ್ದು ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಫ್ಘಾನಿಸ್ತಾನ ಮೂಲದ ಸ್ಟಾರ್ ಸ್ಪಿನ್ನರ್ ಆಗಿರುವ ರಶೀದ್ ಖಾನ್ ಅವರನ್ನು ಕೂಡ 15 ಕೋಟಿ ರೂಪಾಯಿ ಖರೀದಿಸಿದೆ. ಈ ಹಿಂದೆ ಕೊಲ್ಕತ್ತಾ ತಂಡದಲ್ಲಿ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದಂತಹ ಶುಭಮನ್ ಗಿಲ್ ರವರನ್ನು ಏಳು ಕೋಟಿ ರೂಪಾಯಿ ಖರೀದಿಸಿದೆ. ತಂಡ ಈಗಾಗಲೇ ಯುವ ಪ್ರತಿಭೆಗಳಿಂದ ಪ್ರಾಮಿಸಿಂಗ್ ಆಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ಆಟಗಾರರು ಸೇರಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments are closed.