ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿ ವಿಲ್ಲನ್ ಆದ ಆಟಗಾರ ಯಾರು ಗೊತ್ತೇ?? ಮುಂದಿನ ಪಂದ್ಯದಿಂದ ಔಟ್. ಬದಲಿ ಯಾರು ಆಡುತ್ತಾರೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಅವರ ನಾಯಕತ್ವದ ಅನುಪಸ್ಥಿತಿಯಲ್ಲಿ ರಾಹುಲ್ ರವರು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಆದರೆ ಕೆಎಲ್ ರಾಹುಲ್ ರವರು ನಾಯಕನಾದ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇದು ಈಗ ಭಾರತೀಯ ಕ್ರಿಕೆಟ್ ತಂಡದ ಹಲವಾರು ಬದಲಾವಣೆಗಳಿಗೆ ಕಾರಣವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ವಿರಾಟ್ ಕೊಹ್ಲಿ ರವರು ನಂತರ ತಂಡದ ನಾಯಕತ್ವ ಎನ್ನುವುದು ಯಾರ ಬಳಿ ಇದ್ದರೆ ಎಷ್ಟು ಸೇಫ್ ಎನ್ನುವುದು ಇನ್ನೂ ಕೂಡ ಕಂಡುಹಿಡಿಯಲು ಕಷ್ಟವಾಗುತ್ತಿದೆ.
ಇದರ ನಡುವಲ್ಲಿ ಏಕದಿನ ಸರಣಿಯ ಮೊದಲ ಪಂದ್ಯವನ್ನು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋತಂತಹ ಮುಖಭಂಗವನ್ನು ಈಗಾಗಲೇ ಭಾರತ ತಂಡ ಅನುಭವಿಸಿದೆ. ಇದನ್ನು ಮುಖಭಂಗ ಎಂದು ಹೇಳಲು ಕಾರಣ ಸೌತ್ ಆಫ್ರಿಕಾ ತಂಡ ಭಾರತ ತಂಡಕ್ಕೆ ಹೋಲಿಸಿದರೆ ಸಾಕಷ್ಟು ಅನನುಭವಿ ತಂಡವಾಗಿತ್ತು. ಸುಲಭವಾಗಿ ಗೆಲ್ಲುವಂತಹ ಪಂದ್ಯವನ್ನು ಭಾರತ ತಂಡ ಕೈಚೆಲ್ಲಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಭಾರತ ತಂಡದ ಸೋಲಿಗೆ ಕಾರಣವಾಗಿರುವಂತಹ ಒಬ್ಬ ಆಟಗಾರನನ್ನು ಮುಂದಿನ ಪಂದ್ಯದಿಂದ ಹೊರಹಾಕಲಾಗಿದ್ದು ಅವರ ಬದಲಿಗೆ ಬೇರೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ.
ಹಾಗಿದ್ದರೆ ತಂಡದಿಂದ ಹೊರಹಾಕಲ್ಪಟ್ಟ ಆಟಗಾರ ಯಾರು ಮತ್ತು ಅವರ ಜಾಗದ ಬದಲಿಗೆ ತಂಡದ ಒಳಕ್ಕೆ ಬರುತ್ತಿರುವ ಆಟಗಾರರು ಯಾರೆಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಭುವನೇಶ್ವರ್ ಕುಮಾರ್ ಅವರ ಕಳಪೆ ಬೌಲಿಂಗ್ ನಿಂದಾಗಿ ಭಾರತ ಕಂಡ ಸೋತಿದೆ ಎಂಬುದಾಗಿ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. 10 ಓವರುಗಳಲ್ಲಿ ಬರೋಬ್ಬರಿ 64 ರನ್ನುಗಳನ್ನು ಭುವನೇಶ್ವರ್ ಕುಮಾರ್ ನೀಡಿದ್ದಾರೆ. ಯಾವುದೇ ವಿಕೆಟ್ ಗಳನ್ನು ಕೂಡ ಕಿತ್ತಿಲ್ಲ. ಇಷ್ಟು ಮಾತ್ರವಲ್ಲದೆ ಅವರ ಬೌಲಿಂಗ್ ನ ಗತಿಯಲ್ಲಿ ಕೂಡ ಕೊಂಚ ಮಟ್ಟಿಗೆ ನಿಧಾನಗತಿ ಕಾಣಿಸುತ್ತಿದೆ. ಹೀಗಾಗಿ ಮುಂದಿನ ಪಂದ್ಯದಿಂದ ಅವರ ಬದಲಿಗೆ ಮಹಮ್ಮದ್ ಸಿರಾಜ್ ಅಥವಾ ದೀಪಕ್ ಚಹರ್ ಅವರನ್ನು ಆಡಿಸಬಹುದಾಗಿದೆ.
Comments are closed.