ಕೊಹ್ಲಿ, ರಾಹುಲ್ ರವರಿಗೆ ಕ್ಯಾರೇ ಎನ್ನದ ಗಂಭೀರ್: ವಿಶ್ವ ಕಪ್ ನಲ್ಲಿ ಮೊದಲ ಮೂರು ಕ್ರಮಣಕದಲ್ಲಿ ಯಾರು ಬ್ಯಾಟಿಂಗ್ ಮಾಡಬೇಕಂತೆ ಗೊತ್ತೇ?
ಪ್ರಸ್ತುತ ಭಾರತ ಕ್ರಿಕೆಟ್ ಟ್ಯಾಂಡ್ಸ್ವು ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಬ್ಯುಸಿ ಆಗಿದೆ. ಈವರೆಗೂ ಆಡಿರುವ 2 ಪಂದ್ಯಗಳನ್ನು ಭಾರತ ತಂಡ ಸೋತಿದ್ದು, ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕು ಎಂದು ನಿರ್ಧಾರ ಮಾಡಿ ಅದರ ಕಡೆಗೆ, ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ನಡುವೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು, ಇದೀಗ ವಿಶ್ವಕಪ್ ಪಂದ್ಯಗಳ ಆರಂಭಿಕ ಬ್ಯಾಟ್ಸ್ಮನ್ ಯಾರಾಗಬೇಕು ಎಂದು ಮೂವರು ಆಟಗಾರರ ಹೆಸರನ್ನು ತಿಳಿಸಿದ್ದಾರೆ.
ಗೌತಮ್ ಗಂಭೀರ್ ಅವರು ಹಲವು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕಾಗಿ ಮತ್ತು ಟೀಮ್ ಇಂಡಿಯಾಗಾಗಿ ಹಲವು ಪಂದ್ಯಗಳನ್ನು ಆಡಿ, ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಇವರು ರಾಜಕೀಯದಲ್ಲೂ ಸಹ ಸಕ್ರಿಯರಾಗಿದ್ದರು, ಜೊತೆಗೆ ಗಂಭೀರ್ ಅವರು, ಆಗಾಗ ಕ್ರಿಕೆಟ್ ತಂಡಗಳ ಬಗ್ಗೆ, ಪಂದ್ಯಗಳ ಬಗ್ಗೆ ಹಾಗೂ ಆಟಗಾರರ ಪರ್ಫಾಮೆನ್ಸ್ ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಹಾಗೂ ಐಪಿಎಲ್ ನಲ್ಲಿ ಕೋಚ್ ಆಗಿ ಸಹ ಕಾರ್ಯನಿರ್ವಹಿಸಿದ್ದಾರೆ. ಇದೀಗ ಇವರು ಮುಂದಿನ ದಿನಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಗಳಿಗೆ ಆರಂಭಿಕ ಮೂವರು ಆಟಗಾರರು ಯಾರಾಗಬೇಕು ಎಂದು ಸೂಚಿಸಿದ್ದಾರೆ.
ಗೌತಮ್ ಗಂಭೀರ್ ಅವರು ಇಶಾನ್ ಕಿಶನ್, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇಶಾನ್ ಕಿಶನ್ ಅವರು ಐಪಿಎಲ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿ ಇಲ್ಲದೆ ಹೋದರು ಸಹ, ದಕ್ಷಿಣ ಆಫ್ರಿಕಾದ ಸರಣಿ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಗೌತಮ್ ಗಂಭೀರ್ ಅವರು ಕೆ.ಎಲ್.ರಾಹುಲ್ ಅವರ ಹೆಸರನ್ನು ತೆಗೆದುಕೊಳ್ಳದೆ ಇರುವುದು, ಎಲ್ಲರಿಗೂ ಆಶ್ಚರ್ಯ ತರಿಸಿದೆ, ಕೆ.ಎಲ್.ರಾಹುಲ್ ಮತ್ತು ಗೌತಮ್ ಗಂಭೀರ್ ಇಬ್ಬರು ಸಹ ಐಪಿಎಲ್ ನಲ್ಲಿ ಎಲ್.ಎಸ್.ಜಿ ತಂಡದ ಪರವಾಗಿ ಆಡಿದ್ದರು, ಆದರೆ ಎಲ್.ಎಸ್.ಜಿ ತಂಡ ಆರ್.ಸಿ.ಬಿ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋತಾಗ ಗೌತಮ್ ಗಂಭೀರ್ ರಾಹುಲ್ ಅವರ ಮೇಲೆ ಕೋಪ ಮಾಡಿಕೊಂಡಿದ್ದರು.
Comments are closed.