Neer Dose Karnataka
Take a fresh look at your lifestyle.

ಮುಂದಿನ ವಿಶ್ವಕಪ್ ನಲ್ಲಿ ತಂಡ ಹೇಗಿರಲಿದೆ ಗೊತ್ತೇ?? ಸುಳಿವು ಕೊಟ್ಟ ಗಂಗೂಲಿ. ದ್ರಾವಿಡ್ ಮಾಸ್ಟರ್ ಪ್ಲಾನ್ ಶುರು. ಯಾರ್ಯಾರು ಲಿಸ್ಟ್ ನಲ್ಲಿ ಇದ್ದಾರೆ ಗೊತ್ತೆ??

ನಮ್ಮ ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಸೌತ್ ಆಫ್ರಿಕಾ ತಂಡದ ವಿರುದ್ಧ ಟಿ20 ಸರಣಿ ಪಂದ್ಯಗಳನ್ನು ಆಡುತ್ತಿದೆ. ಭಾರತದಲ್ಲೇ ಈ ಪಂದ್ಯಗಳು ನಡೆದಿದ್ದು, ಮೊದಲ ಎರಡು ಪಂದ್ಯಗಳಲ್ಲಿ ಸೋತ ಭಾರತ ತಂಡ, ನಂತರದ ಎರಡು ಪಂದ್ಯಗಳಲ್ಲಿ ಭರ್ಜರಿಯಾಗಿ. ಹಾರಿ ಅಂತರದಲ್ಲಿ ಗೆದ್ದಿದೆ. ಈಗ ಎಲ್ಲರ ಕಣ್ಣು ಆಕ್ಟೊಬರ್ ತಿಂಗಳಿನಲ್ಲಿ ಶುರುವಾಗುವ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಇದೆ. ನಾವೆಲ್ಲರೂ ಗಮಣಿಸಿರುವ ಹಾಗೆ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಇದುವರೆಗೂ ಭಾರತ ತಂಡ ಗೆಲುವು ಸಾಧಿಸಿಲ್ಲ. ಹಾಗಾಗಿ ಈ ಬಾರಿ ಗೆಲ್ಲೆಲು ಬಲಿಷ್ಠವಾದ ತಂಡ ಇರಬೇಕು ಎಂದು ಪ್ರಯತ್ನಗಳು ನಡೆಯುತ್ತಿದೆ.

ಈ ವರ್ಷ ಟಿ20 ವಿಶ್ವಕಪ್ ತಂಡ ಹೇಗಿರುತ್ತದೆ ಎನ್ನುವುದರ ಬಿಸಿಸಿಐ ನ ಸೌರವ್ ಗಂಗೂಲಿ ಅವರು ಕೆಲವು ಸುಳಿವುಗಳನ್ನು ನೀಡಿದ್ದಾರೆ. ತಂಡದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಸೇರಿ, ಇಂಗ್ಲೆಂಡ್ ಪ್ರವಾಸದ ನಂತರ ತಂಡವನ್ನು ಅಂತಿಮಗೊಳಿಸುತ್ತಾರೆ ಎಂದು ಗಂಗೂಲಿ ಅವರು ತಿಳಿಸಿದ್ದಾರೆ. ಈ ಸರಣಿ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡುವ ಉತ್ತಮವಾದ ಆಟಗಾರರು ಟಿ20 ವಿಶ್ವಕಪ್ ಗೆ ಆಯ್ಕೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸಧ್ಯಕ್ಕೆ ಈಗ ಅಡಿರುವವರಲ್ಲಿ ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್ ಇವರೆಲ್ಲರೂ ಪ್ರಬಲವಾದ ಪ್ರದರ್ಶನ ನೀಡಿದ್ದಾರೆ.

ಇನ್ನು ತಂಡದ ನಾಯಕ ರಿಷಬ್ ಪಂತ್ ಮತ್ತು ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರು ನಿರೀಕ್ಷೆಯ ಮಟ್ಟದಲ್ಲಿ ಆಟವಾದಿಲ್ಲ. ಇದೇ ಜೂನ್ 26ರಿಂದ ಐರ್ಲೆಂಡ್ ಪಂದ್ಯಗಳು ಶುರುವಾಗಲಿದ್ದು, ಈ ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಮತ್ತು ರಾಹುಲ್ ತ್ರಿಪಾಠಿ ಆಯ್ಕೆಯಾಗಿದ್ದಾರೆ. ಟೆಸ್ಟ್ ಮ್ಯಾಚ್ ಗಳ ಬಗ್ಗೆ ಹೇಳುವುದಾದರೆ, 3ಮ್ಯಾಚ್ ಗಳನ್ನು ಭಾರತ ತಂಡ ಆಡಲಿದೆ. ಇಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಕೂಡ ಭಾರತ ತಂಡಕ್ಕೆ ಮರಳಿ ಬರಲಿದ್ದಾರೆ. ಹೆಚ್ ಕೋಚ್ ರಾಹುಲ್ ದ್ರಾವಿಡ್ ಅವರು ಎಲ್ಲವನ್ನು ಸ್ಥಿರವಾಗಿ ಗಮನಿಸಿ, ಕೆಲವು ಹಂತಗಳಿಗೆ ಆಟಗಾರರನ್ನು ಆಯ್ಕೆ ಮಾಡುತ್ತಾರೆ, ಇಂಗ್ಲೆಂಡ್ ಪ್ರವಾಸದ ಬಳಿಕ ಲಿಸ್ಟ್ ತಯಾರಾಗಲಿದೆ ಎಂದು ತಿಳಿಸಿದ್ದಾರೆ.

Comments are closed.