Neer Dose Karnataka
Take a fresh look at your lifestyle.

ಐಪಿಎಲ್ ನಲ್ಲಿ ಮಿಂಚಿದ್ದರೂ ವಿಶ್ವಕಪ್ ರೇಸ್ ನಲ್ಲಿ ಹಿಂದೆ ಬಿದ್ದ ಆಟಗಾರನನ್ನು ಹೆಸರಿಸಿದ ಆಕಾಶ್ ಚೋಪ್ರಾ, ಯಾರಂತೆ ಗೊತ್ತೇ??

ಟೀಮ್ ಇಂಡಿಯಾ ಈಗ ಟಿ20 ವಿಶ್ವಕಪ್ ಪಂದ್ಯಗಳಿಗೆ ತಯಾರಿ ನಡೆಸುತ್ತಿದೆ. ಈವರೆಗೂ ಭಾರತ ತಂಡವು ಒಂದು ಸಾರಿ ಕೂಡ ಟಿ20 ವಿಶ್ವಕಪ್ ಗೆಲ್ಲದೆ ಇರುವ ಕಾರಣ, ಈ ವರ್ಷ ಬಲಿಷ್ಠವಾದ ತಂಡ ಕಟ್ಟಿ, ಗೆಲ್ಲಿಸಬೇಕು ಎನ್ನುವ ಯೋಜನೆಯನ್ನು ಟೀಮ್ ಇಂಡಿಯಾ ಹಾಕಿಕೊಂಡಿದೆ. ಹಾಗಾಗಿ ಈ ಬಾರಿ ತಂಡದಲ್ಲಿ ಯಾರೆಲ್ಲಾ ಆಟಗಾರರು ಇರಬಹುದು ಎನ್ನುವ ಬಗ್ಗೆ ಈಗಾಗಲೇ ಎಲ್ಲೆಡೆ ಚರ್ಚೆ ಶುರುವಾಗುತ್ತಿದೆ. ಇದೀಗ ಭಾರತದ ಮಾಜಿ ಆಟಗಾರ ಮತ್ತು ಈಗ ಕಾಮೆಂಟೇಟರ್ ಆಗಿ ಗುರುತಿಸಿಕೊಂಡಿರುವ ಆಕಾಶ್ ಚೋಪ್ರಾ ಅವರು ಇದರ ಬಗ್ಗೆ ಮಾತನಾಡಿದ್ದು, ಈಗಾಗಲೇ ಒಬ್ಬ ಆಟಗಾರ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ..

ಆಕಾಶ್ ಚೋಪ್ರಾ ಅವರು ಈಗಾಗಲೇ ನಮ್ಮ ಭಾರತ ತಂಡದ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ, ಈ ಬಾರಿ ಅವರು ಈಗಾಗಲೇ ಒಬ್ಬ ಆಟಗಾರ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಹೇಳುತ್ತಿರುವುದು ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರ ಬಗ್ಗೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್ ಅವರು ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಿಲ್ಲ ಎಂದು ಹೇಳಿದ್ದಾರೆ ಆಕಾಶ್ ಚೋಪ್ರಾ ಅವರು, ಆರಂಭಿಕ ಆಟಗಾರನಾಗಿ ಋತುರಾಜ್ ಅವರು 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು ಗಳಿಸಿರುವುದು ಕೇವಲ 96 ರನ್ ಗಳನ್ನು ಮಾತ್ರ. 5ನೇ ಪಂದ್ಯ ಮಳೆ ಇಂದಾಗಿ ರದ್ದಾಯಿತು, ಆ ಪಂದ್ಯದಲ್ಲೂ ಸಹ ಋತುರಾಜ್ ಗಾಯಕ್ವಾಡ್ ಅವರಿಗೆ ಆಡುವ ಅವಕಾಶ ಸಿಕ್ಕಿತು ಅದರ ಅವರು ಒಳ್ಳೆಯ ಪ್ರದರ್ಶನ ನೀಡಲಿಲ್ಲ ಎಂದು ಆಕಾಶ್ ಚೋಪ್ರಾ ಅವರು ಹೇಳಿದ್ದಾರೆ.

ಇನ್ನು ಆರಂಭಿಕ ಆಟಗಾರನ ಸ್ಥಾನಕ್ಕೆ ಬಹಳ ಪೈಪೋಟಿ ಇಡೇಜ್ ಜೊತೆಗೆ ಟ್ರಾಫಿಕ್ ಜಾಮ್ ಸಹ ಆಗಿದೆ ಎಂದಿದ್ದಾರೆ. ರೋಹಿತ್ ಶರ್ಮಾ ಅವರೊಡನೆ ಮತ್ತೊಂದು ಕಡೆ ಆರಂಭಿಕ ಆಟಗಾರನಾಗಿ ಆಡಲು, ಕೆ.ಎಲ್.ರಾಹುಲ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್ ಇವರೆಲ್ಲರೂ ಲೈನಪ್ ನಲ್ಲಿದ್ದು, ಋತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ಸಿಗುವುದು ಕಷ್ಟ ಎಂದು ಆಕಾಶ್ ಚೋಪ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ವಿರಾಟ್ ಕೋಹ್ಲಿ ಅವರು ಸಹ ಆರಂಭಿಕ ಆಟಗಾರ ಆಗಬಹುದು ಎನ್ನುವ ಮಾತುಗಳು ಸಹ ಕೇಳಿಬರುತ್ತಿದ್ದು, ರೋಹಿತ್ ಶರ್ಮಾ ಅವರ ಜೊತೆಗೆ ನಿಲ್ಲುವ ಆರಂಭಿಕ ಆಟಗಾರ ಯಾರು ಎನ್ನುವುದನ್ನು ಕಾದು ನೋಡಬೇಕಿದೆ.

Comments are closed.