Neer Dose Karnataka
Take a fresh look at your lifestyle.

ಭಾರತದ ಕ್ರಿಕೆಟ್ ತಂಡದ ಭೀಷ್ಮ, ಕೋಚ್ ರಾಹುಲ್ ದ್ರಾವಿಡ್ ರವರ ಕುರಿತು ಬಗ್ಗೆ ಮಾಜಿ ಬೌಲರ್ ಹೇಳಿದ್ದೇ ಬೇರೆ. ಏನು ಗೊತ್ತೇ?

ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿದ್ದಾರೆ. ದ್ರಾವಿಡ್ ಅವರು ತಂಡವನ್ನು ಮುನ್ನಡೆಸುತ್ತಿರುವ ಪರಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಕಳಪೆ ಪ್ರದರ್ಶನ ನೀಡಿದರು ಎಂದು ಪ್ಲೇಯಿಂಗ್ 11 ಅನ್ನು ಚೇಂಜ್ ಮಾಡದೆ, ಎಲ್ಲಾ ಆಟಗಾರರನ್ನು ಹುರಿದುಂಬಿಸುತ್ತಾರೆ, ಎಲ್ಲರನ್ನು ಮೋಟಿವೇಟ್ ಮಾಡುತ್ತಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಇದೀಗ ಮತ್ತೊಬ್ಬ ಆಟಗಾರರಾದ ಮಾಜಿ ಬೌಲರ್ ಜಹೀರ್ ಖಾನ್ ಅವರು ಮಾತನಾಡಿದ್ದಾರೆ.

ದ್ರಾವಿಡ್ ಅವರು ಪಂದ್ಯಗಳ ಫಲಿತಾಂಶದ ಮೇಲೆ ಕೆಲಸ ಮಾಡುವುದಿಲ್ಲ, ಬದಲಾಗಿ ಪ್ರಕ್ರಿಯೆಗಳನ್ನು ಅನುಸರಿಸುವಂತಹ ವ್ಯಕ್ತಿ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಪಂದ್ಯದ ಗೆಲುವಿಗೆ ಮುಖ್ಯ ಕಾರಣ ಆಗಿದ್ದವರು ದಿನೇಶ್ ಕಾರ್ತಿಕ್, ಆದರೆ ಅದಕ್ಕಿಂತ ಹೆಚ್ಚಾಗಿ ದ್ರಾವಿಡ್ ಅವರು ಡ್ರೆಸಿಂಗ್ ರೂಮ್ ಅನ್ನು ಹೇಗೆ ಇರಿಸಿದ್ದಾರೆ, ಆಟಗಾರರು ಹೇಗಿದ್ದಾರೆ ಎನ್ನುವ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಇದರ ಬಗ್ಗೆ ಜಹೀರ್ ಖಾನ್ ಅವರು ಸಹ ಹೇಳಿದ್ದಾರೆ. ಕ್ರಿಕೆಟ್ ಲೆಜೆಂಡ್ ದ್ರಾವಿಡ್ ಅವರು ಈಗಾಗಲೇ ಕ್ರಿಕೆಟ್ ಕ್ಯಾಲೆಂಡರ್ ಗೆ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ ಜಹೀರ್ ಖಾನ್. ದ್ರಾವಿಡ್ ಅವರು ತಾವು ಮಾಡಿರುವ ದಾಖಲೆಗಳು ಮತ್ತು ಅನುಭವಗಳ ಆಧಾರದ ಮೇಲೆ ಆಟಗಾರರನ್ನು ಗುರುತಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಇದು ಆಟಗಾರರು ಆಡುವ ಶೈಲಿಯ ಮೇಲೆ ಅವಲಂಬಿಸಿರುತ್ತದೆ, ಉದಾಹರಣೆಗೆ ಇಂಗ್ಲೆಂಡ್ ಗೆ ಒಬ್ಬ ಆಟಗಾರನನ್ನು ಆಯ್ಕೆ ಮಾಡಿದರೆ, ಆತ ಅಲ್ಲಿ ಹೇಗೆ ಅಡುತ್ತಾನೆ, ಆ ವಾತಾವರಣಕ್ಕೆ ತಕ್ಕ ಹಾಗೆ ಚೆನ್ನಾಗಿ ಆಡಲು ಆಗುತ್ತದೆಯೇ, ಪರಿಸ್ಥಿತಿಗೆ ಅನುಗುಣವಾಗಿ ಆಡಬಹುದೇ, ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾರೆ. ಆ ಆಟಗಾರ ತಂಡಕ್ಕೆ ಸಹಾಯವಾಗಬೇಕು ಎನ್ನುವುದನ್ನು ತಿಳಿಸಿ ಹೇಳುತ್ತಾರೆ. ಬೇರೆ ಬೇರೆ ಸರಣಿಗಳಿಗೆ ಈ ರೀತಿಯ ವಿಧಾನಗಳು ಇರುತ್ತವೆ ಎಂದು ಜಹೀರ್ ಖಾನ್ ಅವರು ರಾಹುಲ್ ದ್ರಾವಿಡ್ ಅವರ ಬಗ್ಗೆ ಹೇಳಿದ್ದಾರೆ. ದ್ರಾವಿಡ್ ಅವರು ಸಹ ಇದೇ ರೀತಿ ಕ್ರಿಕೆಟ್ ಆಡಿದ್ದು ಅದೇ ರೀತಿಯಲ್ಲಿ ಎಲ್ಲವನ್ನು ಯೋಜಿಸುತ್ತಾರೆ ಎಂದು ತಿಳಿಸಿದ್ದಾರೆ.

Comments are closed.