Neer Dose Karnataka
Take a fresh look at your lifestyle.

ನಿಜಕ್ಕೂ ದಿನೇಶ್ ಕಾರ್ತಿಕ್ ವಿಶ್ವಕಪ್ ಗೆ ಆಯ್ಕೆಯಾದಗೂ ಸಾಧ್ಯವೇ? ಅಡ್ಡಗಾಲು ಹಾಕುತ್ತಿರುವ ಆಟಗಾರ ಯಾರು ಗೊತ್ತೇ??

ದಿನೇಶ್ ಕಾರ್ತಿಕ್ ಅವರು ಈ ವರ್ಷ ಆರ್.ಸಿ.ಬಿ ತಂಡದ ಪರಗಾಗಿ ಅದ್ಭುತವಾದ ಪ್ರದರ್ಶನ ನೀಡಿ, ಆರ್.ಸಿ.ಬಿ ತಂಡದ ಆಪತ್ಬಾಂಧವ ಎಂದು ಹೆಸರು ಪಡೆದುಕೊಂಡಿದ್ದರು. ಐಪಿಎಲ್ ಪಂದ್ಯಗಳು ನಡೆಯುವ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೆ ಐಪಿಎಲ್ ಪಂದ್ಯಗಳು ನಡೆಯುವಾಗ ಟೀಮ್ ಇಂಡಿಯಾಗೆ ಮತ್ತೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ, ಮತ್ತೆ ಟೀಮ್ ಇಂಡಿಯಾಗೆ ಬರುವ ಆಸೆ ಇದೆ ಎಂದು ಹೇಳಿದ್ದರು. ದಿನೇಶ್ ಕಾರ್ತಿಕ್ ಅವರಿಗೆ ಇದ್ದ ಇಂಗಿತ ಜೊತೆಗೆ, ಅವರು ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ.

ಐಪಿಎಲ್ ನಡೆಯುವ ಸಮಯದಲ್ಲಿ, ಐಪಿಎಲ್ ನ ಪ್ರದರ್ಶನ ಒಂದು ಉದಾಹರಣೆ ಅಷ್ಟೇ, ದೇಶಕ್ಕಾಗಿ ಇನ್ನು ಹೆಚ್ಚಿನ ಸಾಧನೆ ಮಾಡುವ ಛಲ ಇದೆ ಎಂದು ಹೇಳಿದ್ದರು. ಅದೇ ರೀತಿ ಈಗ ಭಾರತ ತಂಡಕ್ಕೆ ಸೆಲೆಕ್ಟ್ ಆಗಿ ಸೌತ್ ಆಫ್ರಿಕಾದ ನಾಲ್ಕನೇ ಪಂದ್ಯದಲ್ಲಿ ಕೇವಲ 27 ಬಾಲ್ ಗಳಲ್ಲಿ 56 ರನ್ ಸಿಡಿಸಿ, ತಂಡದ ಗೆಲುವಿಗೆ ಮುಖ್ಯ ಕಾರಣವಾಗಿದ್ದರು ಡಿಕೆ. ಮುಂದಿನ ದಿನಗಳಲ್ಲಿ ಡಿಕೆ ಅವರು ಟಿ20 ವಿಶ್ವಕಪ್ ನಲ್ಲಿ ಭಾರತದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಬೇಕು ಎಂದುಕೊಂಡಿದ್ದಾರೆ, ಆದರೆ ಮತ್ತೊಬ್ಬ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಪ್ರತಿಸ್ಪರ್ಧಿ ಆಗುವುದು ಖಂಡಿತ. ದಿನೇಶ್ ಕಾರ್ತಿಕ್ ಅವರಿಗೆ ಪ್ರತಿಸ್ಪರ್ಧಿ ಮತ್ಯಾರು ಅಲ್ಲ ಹಾರ್ದಿಕ್ ಪಾಂಡ್ಯ ಅವರು.

ಇವರು ಇಂಜೂರಿ ಇಂದಾಗಿ ಟೀಮ್ ಇಂಡಿಯಾ ಇಂದ ಹೊರಗುಳಿದಿದ್ದರು. ಆದರೆ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ, ತಾವು ಕ್ಯಾಪ್ಟನ್ ಆಗಿದ್ದ ಗುಜರಾತ್ ತಂಡದ ಗೆಲುವಿಗೆ ಮುಖ್ಯ ಕಾರಣ ಆಗಿರುವುದರಿಂದ, ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡಕ್ಕೆ ಮತ್ತೆ ಆಯ್ಕೆ ಮಾಡಲಾಗಿದೆ. ಸೌತ್ ಆಫ್ರಿಕಾ ಸರಣಿಯಲ್ಲಿ ಉತ್ತಮವಾದ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ, ಇದೀಗ ಐರ್ಲೆಂಡ್ ಸರಣಿ ಪಂದ್ಯಗಳಿಗೆ ಕ್ಯಾಪ್ಟನ್ ಆಗಿದ್ದಾರೆ. ದಿನೇಶ್ ಕಾರ್ತಿಕ್ ಅವರ ಹಾಗೆ ಹಾರ್ದಿಕ್ ಪಾಂಡ್ಯ ಸಹ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅದ್ಭುತವಾದ ಬ್ಯಾಟ್ಸ್ಮನ್ ಆಗಿದ್ದಾರೆ. ಹಾಗಾಗಿ ಟಿ20 ವಿಶ್ವಕಪ್ ಗೆ ಸೆಲೆಕ್ಟ್ ಆಗುವುದರಲ್ಲಿ ಇವರಿಬ್ಬರ ನಡುವೆ ಬಹಳ ಪೈಪೋಟಿ ಆಗುವುದಂತೂ ಖಂಡಿತ.

Comments are closed.