ಭಾರತಕ್ಕೆ ಮತ್ತೊಂದು ಆಘಾತ, ಇಂಗ್ಲೆಂಡ್ ಸರಣಿಯಿಂದ ಮತ್ತೊಬ್ಬ ಆಟಗಾರ ಔಟ್, ಮತ್ತಷ್ಟು ಸಂಕಷ್ಟದಲ್ಲಿ ಭಾರತ.
ನಮ್ಮ ಭಾರತ ಕ್ರಿಕೆಟ್ ತಂಡವು ಈಗಷ್ಟೇ ಸೌತ್ ಆಫ್ರಿಕಾ ತಂಡದ ವಿರುದ್ಧದ ಸರಣಿ ಪಂದ್ಯಗಳನ್ನು ಮುಗಿಸಿದೆ. ಐದು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೌತ್ ಆಫ್ರಿಕಾ ಗೆದ್ದರೆ, ಇನ್ನು 2 ಪಂದ್ಯಗಳನ್ನು ಭಾರತ ತಂಡ ಗೆದ್ದಿತು. ನಿರ್ಣಾಯಕ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಹಾಗಾಗಿ ಎರಡು ತಂಡಗಳಿಗೂ ಸಮವಾಗಿ ಪಾಯಿಂಟ್ಸ್ ಗಳು ಹಂಚಿಕೆಯಾಯಿತು. ಇದಾದ ಬಳಿಕ ಈಗ ಇಂಗ್ಲೆಂಡ್ ಸರಣಿ ಪಂದ್ಯಗಳಿಗೆ ಭಾರತ ತಂಡ ಸಜ್ಜಾಗುತ್ತಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿ, ಪಂದ್ಯಗಳನ್ನು ಆಡುವ ಆಟಗಾರರ ಲಿಸ್ಟ್ ಅನ್ನು ಬಿಸಿಸಿಐ ಇನ್ನೇನು ಬಿಡುಗಡೆ ಮಾಡಬೇಕಿದೆ. ಆದರೆ ಆಟಗಾರರ ಲಿಸ್ಟ್ ಬಿಡುಗಡೆ ಆಗುವ ಮೊದಲೇ, ಭಾರತ ತಂಡದ ಸ್ಟಾರ್ ಬೌಲರ್ ದೀಪಕ್ ಚಹರ್ ಅವರು ಭಾರತ ತಂಡದ ಪರವಾಗಿ ಆಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ದೀಪಕ್ ಚಹರ್ ಅವರು ಗಾಯಕ್ಕೆ ಒಳಗಾಗಿದ್ದರು, ಅದೇ ಕಾರಣದಿಂದ ದೀಪಕ್ ಚಹರ್ ಅವರು ಈ ಬಾರಿ ಐಪಿಎಲ್ ನಲ್ಲಿ ಸಹ ಭಾಗವಹಿಸಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಾಗಾಗಿ ದೀಪಕ್ ಚಹರ್ ಅವರು ಬೇಗ ಕಂಬ್ಯಾಕ್ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು.
ಆದರೆ ಈಗ ಅವರ ಅಲಭ್ಯತೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಗಾಯವಾಗಿರುದ್ದು, ದೀಪಕ್ ಅವರು ಸಂಪೂರ್ಣವಾಗಿ ಗುಣಮುಖರಾಗಲು ಇನ್ನು 4 ರಿಂದ 5 ವಾರಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಚಹರ್ ಅವರೇ ತಿಳಿಸಿದ್ದಾರೆ. ಪೂರ್ತಿಯಾಗಿ ಗುಣಮುಖವಾದ ಬಳಿಕ ಚಹರ್ ಕ್ಲಬ್ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಪರೀಕ್ಷಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಹಾಗಾಗಿ ಅವರು ಇಂಗ್ಲೆಂಡ್ ಪಂದ್ಯಗಳಿಗೆ ಅಲಭ್ಯವಾಗಿರುವುದು ಭಾರತ ತಂಡಕ್ಕೆ ಆತಂಕ ತಂದಿದ್ದು, ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗುವ ವೇಳೆಗೆ, ಆಯ್ಕೆಗೆ ಸಿಗುತ್ತಾರೆ ಎನ್ನಲಾಗುತ್ತಿದೆ. ದೀಪಕ್ ಚಹರ್ ಅವರು ಪವರ್ ಪ್ಲೇ ಓವರ್ ಗಳಲ್ಲಿ ವಿಕೆಟ್ ಕೀಳುವ ಪ್ಲೇಯರ್ ಆಗಿದ್ದು, ಅವರ ಅನುಪಸ್ಥಿತಿ ಭಾರತ ತಂಡಕ್ಕೆ ಒಂದು ರೀತಿ ಲಾಸ್ ಎನ್ನಬಹುದು.
Comments are closed.