ಕೊನೆಯ ಟೆಸ್ಟ್ ಪಂದ್ಯದಿಂದ ಹೊರ ಬಿದ್ದರೆ ರೋಹಿತ್?? ಇವರ ಸ್ಥಾನ ತುಂಬುವ ಟಾಪ್ ಮೂರು ಆಟಗಾರರು ಯಾರ್ಯಾರು ಗೊತ್ತೇ?
ಕ್ರಿಕೆಟ್ ನಲ್ಲಿ ಈಗ ಐಪಿಎಲ್ ಮುಗಿದು ಟೆಸ್ಟ್ ಪಂದ್ಯ ಶುವಿರುವಾಗಿದೆ. ಈ ಟೆಸ್ಟ್ ಪಂದ್ಯದಿಂದ ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆ ಕಡಿಮೆ ಇಲ್ಲ ಎಂದರೆ ತಪ್ಪಾಗಲಾರದು. ಈ ಮೊದಲು ಈ ಟೆಸ್ಟ್ ಪಂದ್ಯ ಶುರುವಾಗುವ ಮುನ್ನ ಭಾರತ ತಂಡ ಒಂದು ಕಹಿ ಸುದ್ದಿಯನ್ನು ಹೊರಹಾಕಿತ್ತು ಅದೇನೆಂದರೆ.. ಈ ಟೆಸ್ಟ್ ಪಂದ್ಯಾವಳಿಯಲ್ಲಿ ಗಾಯದ ಕಾರಣದಿಂದ ಆರಂಭಿಕ ಆಟಗಾರನಾದ ಕೆ ಎಲ್ ರಾಹುಲ್ ಲಭ್ಯವಿರುವುದಿಲ್ಲ ಎಂದು ತಿಳಿಸಿದರು. ಈ ವಿಚಾರವನ್ನು ಹೇಗೋ ಅರಗಿಸಿಕೊಂಡು ಇನ್ನು ಅನುಭವಿ ಬ್ಯಾಟ್ಸ್ ಮೆನ್ ಗಳು ನಮ್ಮೊಟ್ಟಿಗೆ ಇದ್ದಾರೆ ಎಂಬ ಭರವಸೆಯಿಂದ ಮುಂದೆ ಸಾಗುತ್ತಿದ್ದ ಆಟಗಾರರಿಗೂ ಹಾಗೂ ವೀಕ್ಷಕರಿಗೂ ಇದೀಗ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ಆ ಸುದ್ದಿ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಈಗಾಗಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಅಂತಿಮ ಪಂದ್ಯಗಳನ್ನು ಆಡಲು ಇಂಗ್ಲೆಂಡ್ ಗೆ ತೆರಳಿರುವ ಭಾರತ ತಂಡ. ಲಿಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಎಸ್ ಭರತ್ ತಮ್ಮ ಅದ್ಬುತ ಬ್ಯಾಟಿಂಗ್ ನಡೆಸುವ ಮುಕಾಂತರ ತನ್ನ ಫಾರ್ಮ್ ನನ್ನು ಮುಂದುವರಿಸಿದ್ದಾರೆ. ಈಗಾಗಲೇ ಭಾರತ ತಂಡ ಅಭ್ಯಾಸ ಪಂದ್ಯದಲ್ಲಿಯೇ ಮೊದಲ ಇನ್ನಿಂಗ್ಸ್ ಮುಕಾಂತರ ಭಾರತದ ಯಾವ ಬಲಿಷ್ಠರು ಸಹ 40 ರನ್‌ಗಳಿಗಿಂತ ಅಧಿಕ ರನ್ ಬಾರಿಸಲು ವಿಫಲವಾಗಿದ್ದಾಗ ಭರತ್ 70 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ’43’ ರನ್‌ಗಳ ಕೊಡುಗೆ ನೀಡಿದ್ದಾರೆ ಭರತ್. ಹೀಗಾಗಿ ಎಡ್ಜ್ ಬಾಸ್ಟನ್ ಟೆಸ್ಟ್‌ನಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದು ಆರಂಭಿಕನಾಗಿ ಕಣಕ್ಕಿಳಿದರೆ ಅಚ್ಚರಿಯಿಲ್ಲ.
ಇದೀಗ 2 ಮತ್ತು 1 ಸರಣಿಯಲ್ಲಿ ಇರುವ ಭಾರತ ತಂಡಗಳಿಗೆ ರೋಹಿತ್ ಶರ್ಮಾ ಅವರು ಅಚ್ಚರಿ ಉಂಟು ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ಭಾರತ ತಂಡದ ಮ್ಯಾನೇಜ್ ಮೆಂಟ್ ರೋಹಿತ್ ಶರ್ಮಾ ಅವರು ಮುಂದಿನ ಪಂದ್ಯದಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಈಗಾಗಲೇ ಅನುಭವಿ ಬಾಟ್ಸ್ ಮೆನ್ ಗಳು ನಮ್ಮ ಭಾರತ ತಂಡದಲ್ಲಿ ಬೆರಳೆಣಿಕೆಯಷ್ಟು ಇದ್ದು ಈಗ ರೋಹಿತ್ ಶರ್ಮಾ ಕೂಡ ಈ ತಂಡದಿಂದ ದೂರ ಸರಿದಿರುವುದು.ಎಲ್ಲರಿಗೂ ಆಘಾತಕಾರಿ ಆಗಿದೆ. ಇದೀಗ ಎಲ್ಲಾ ಜವಾಬ್ದಾರಿಯನ್ನು ಪೂಜಾರ ಮೇಲೆ ಭಾರತ ತಂಡ ಹೇರಿದ್ದಾರೆ.
ಆದರೆ ಅನುಭವಿ ಆಟಗಾರನಾದ ಚೇತೇಶ್ವರ್ ಪೂಜಾರ ಅವರು ಅನುಭವಿ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. 0 ಮತ್ತು 22 ರನ್ ಗಳು ಮಾತ್ರ ಇವರ ಬ್ಯಾಟಿನಿಂದ ಬಂದಿರುವುದರಿಂದ ಇವರಿಗೂ ಕಂಬ್ಯಾಕ್ ಮಾಡಲು ಒಂದು ಉತ್ತಮ ಅವಕಾಶ ಎಂದು ತಿಳಿಸಿದೆ ಮ್ಯಾನೇಜ್ಮೆಂಟ್.ಆದರೆ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಟೂರ್ನಿಯಲ್ಲಿ ಪೂಜಾರ ಅವರು ತಮ್ಮ ಉತ್ತಮ ಫಾರ್ಮ್ ಪರಿಚಯಿಸಿದ್ದಾರೆ. ಸಸೆಕ್ಸ್ ಪರವಾಗಿ ಆಡಿದ 8 ಇನ್ನಿಂಗ್ಸ್‌ಗಳಲ್ಲಿ ಪೂಜಾರ 720 ರನ್‌ಗಳನ್ನು ಗಳಿಸಿದ್ದು 120ರ ಸರಾಸರಿಯಲ್ಲಿ ಪೂಜಾರ ಬ್ಯಾಟಿಂಗ್ ಮಾಡಿ ನಾಲ್ಕು ಶತಕಗಳನ್ನು ಬರಿಸಿದ್ದಾರೆ. ಈ ಪ್ರದರ್ಶನವೇ ಅವರು ಭಾರತ ತಂಡಕ್ಕೆ ಮರಳಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಒಂದು ತುದಿಯಲ್ಲಿ ಶುಬ್ಮನ್ ಗುಲ್ ಹಣಕ್ಕಿಳಿಯುವ ಕಾರಣ ಅನುಭವಿ ಆಟಗಾರನ ಅಗತ್ಯವಿದೆ ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ ಪೂಜಾರ ಆರಂಬಿಕನಾಗಿ ರೋಹಿತ್ ಶರ್ಮಾ ಸ್ಥಾನ ತುಂಬಲಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿದೆ.
Comments are closed.