ಅಪ್ಪಿ ತಪ್ಪಿಯೂ ಕೂಡ ಎಣ್ಣೆ ಮುಟ್ಟದ ಟೀಮ್ ಇಂಡಿಯಾದ ನಾಲ್ಕು ಆಟಗಾರರು ಯಾರ್ಯಾರು ಗೊತ್ತೇ??
ಕ್ರಿಕೆಟಿಗರು ಸಹ ಸಿನಿಮಾ ಸೆಲೆಬ್ರಿಟಿಗಳ ಹಾಗೆ, ಅವರಿಗೂ ಬಹಳ ದೊಡ್ಡ ಫ್ಯಾನ್ ಬೇಸ್ ಇರುತ್ತದೆ. ಒಳ್ಳೆಯ ಕ್ರಿಕೆಟ್ ಆಟಗಾರರು ಕೋಟಿ ಗಟ್ಟಲೆ ಹಣ ಸಂಪಾದನೆ ಮಾಡುತ್ತಾರೆ.ಅದಕ್ಕೆ ತಕ್ಕ ಹಾಗೆ ಐಷಾರಾಮಿ ಲೈಫ್ ಸ್ಟೈಲ್ ಅನುಸರಿಸುತ್ತಾರೆ. ಕ್ರಿಕೆಟ್ ನ ಜೊತೆಗೆ, ಸ್ನೇಹಿತರೊಡನೆ, ಸಹೋದ್ಯೋಗಿಗಳೊಡನೆ ಪಾರ್ಟಿ ಹೀಗೆ ಸಾಕಷ್ಟು ಎಂಜಾಯ್ ಮಾಡುತ್ತಾರೆ. ಎಂಜಾಯ್ ಮಾಡುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಕೆಲವು ಕ್ರಿಕೆಟಿಗರು ಮದ್ಯಪಾನ ಮಾಡಿ, ಪಾರ್ಟಿ ಮಾಡುತ್ತಾರೆ. ಆದರೆ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಮಾತ್ರ, ಮದ್ಯಪಾನ ಇರಲಿ, ವೈನ್ ಸಹ ಸೇವಿಸುವುದಿಲ್ಲ. ಆ ನಾಲ್ವರು ಆಟಗಾರರು ಯಾರು ಗೊತ್ತಾ?
ಭುವನೇಶ್ವರ್ ಕುಮಾರ್ :- ಬಹಳ ಸರಳವಾದ ಲೈಫ್ ಸ್ಟೈಲ್ ನಡೆಸುತ್ತಿದ್ದಾರೆ ಈ ಯುವ ಆಟಗಾರ. ಇವರಿಗೆ ಮದ್ಯಪಾನ ಮತ್ತು ಧೂಮಪಾನ ಎರಡರ ಚಟ ಸಹ ಇಲ್ಲ. ಇವರು ಬೌಲಿಂಗ್ ಮಾಡುವಾಗ, ಎರಡು ಕಡೆಗಳಲ್ಲಿ ಬಾಲ್ ಅನ್ನು ಸ್ವಿಂಗ್ ಮಾಡುತ್ತಾರೆ. ಹಾಗಾಗಿ ಭಾರತ ಕ್ರಿಕೆಟ್ ತಂಡದ ವೇಗಿಯಾಗಿ ಭರವಸೆ ಮೂಡಿಸಿದ್ದಾರೆ.
ರಾಹುಲ್ ದ್ರಾವಿಡ್ :- ಮೂಲಗಳ ಪ್ರಕಾರ ಸಿಕ್ಕಿರುವ ಮಾಹಿತಿಯ ಅನುಸಾರ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರು ಸಹ ಧೂಮಪಾನ ಮತ್ತು ಮದ್ಯಪಾನ ಸೇವಿಸುವವರಲ್ಲ. ಇಂತಹ ಚಟಗಳಿಂದ ದೂರ ಇರುವ ಕೋಚ್ ಆಗಿದ್ದಾರೆ ರಾಹುಲ್ ದ್ರಾವಿಡ್.
ಗೌತಮ್ ಗಂಭೀರ್ :- ಭಾರತ ಕ್ರಿಕೆಟ್ ತಂಡದ ಅದ್ಭುತವಾದ ಮಾಜಿ ಆಟಗಾರರಲ್ಲಿ ಇವರು ಸಹ ಒಬ್ಬರು. ಗೌತಮ್ ಗಂಭೀರ್ ಅವರು ಒಂದು ಸಾರಿ ವೈನ್ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಿಜ ಜೀವನದಲ್ಲಿ ಇವರು ಮದ್ಯಪಾನ ಸೇವಿಸುವುದಿಲ್ಲ. ಸ್ಮೋಕಿಂಗ್ ಸಹ ಮಾಡುವುದಿಲ್ಲ. ಇದೆಲ್ಲದರಿಂದ ದೂರವಿದ್ದಾರೆ.
ಪರ್ವೇಜ್ ರಸೂಲ್ :- ಮೂಲತಃ ಕಾಶ್ಮೀರದವರಾದ ಪರ್ವೇಜ್ ರಸೂಲ್ ಅವರು, ದೇಶೀಯ ಕ್ರಿಕೆಟ್ ಆಟದಲ್ಲಿ ಬಹಳ ಫೇಮಸ್ ಆಗಿರುವವರು. ಇವರು ಸಹ ತಮ್ಮ ಜೀವಮಾನದಲ್ಲಿ ವೈನ್ ಸಹ ಮುಟ್ಟಿಲ್ಲ. ಮದ್ಯಪಾನದಿಂದ ದೂರ ಉಳಿದಿದ್ದಾರೆ.
Comments are closed.