Neer Dose Karnataka
Take a fresh look at your lifestyle.

ಸರಣಿ ಗೆದ್ದ ಕೂಡಲೇ ಶುರುವಾಯಿತು ಸಮಸ್ಯೆ; ಸರಣಿ ಗೆದ್ದ ಖುಷಿಯಲ್ಲಿ ಇದ್ದ ಭಾರತಕ್ಕೆ ಡಬಲ್ ಶಾಕ್. ಏನಾಗಿದೆ ಗೊತ್ತೇ??

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಗೆದ್ದು ಟ್ರೋಫಿ ಗೆದ್ದ ಬಳಿಕ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಯಾರಿ ಶುರುವಾಗಿದೆ. ಭಾನುವಾರವೇ ಭಾರತ ತಂಡ ಕೇರಳದ ತಿರುವನಂತಪುರಂ ತಲುಪಿದ್ದು, ಮೊದಲ ಪಂದ್ಯ ಅಲ್ಲೇ ನಡೆಯಲಿದೆ. ಆದರೆ ಸೌತ್ ಆಫ್ರಿಕಾ ತಂಡದ ವಿರುದ್ಧ ಪಂದ್ಯಗಳು ಶುರುವಾಗುವ ಮೊದಲೇ, ಭಾರತ ತಂಡಕ್ಕೆ ಮತ್ತೊಂದು ಸಮಸ್ಯೆ ಶುರುವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಶುರು ಆಗುವುದಕ್ಕಿಂತ ಮೊದಲು, ಮೊಹಮ್ಮದ್ ಶಮಿ ಅವರು ಕೋವಿಡ್ ಕಾರಣದಿಂದ ತಂಡದಿಂದ ಹೊರಗೆ ಉಳಿದಿದ್ದರು. ಇನ್ನು ಸಹ ಶಮಿ ಅವರು ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ..

ಶಮಿ ಅವರು ಕೇರಳಕ್ಕೆ ತಂಡದ ಜೊತೆಗೆ ಬಂದಿಲ್ಲ ಎಂದು ವರದಿಯ ಪ್ರಕಾರ ತಿಳಿದುಬಂದಿದೆ. ಶಮಿ ಅವರ ಬದಲಾಗಿ ಉಮೇಶ್ ಯಾದವ್ ಅವರು ತಂಡ ಸೇರಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಈಗ ಭಾರತ ತಂಡಕ್ಕೆ ಮತ್ತೊಬ್ಬ ಆಟಗಾರನ ಅಲಭ್ಯತೆ ಉಂಟಾಗಿದೆ. ಅವರು ದೀಪಕ್ ಹೂಡಾ, ಅಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯ ಶುರುವಾಗುವ ಮೊದಲೇ ದೀಪಕ್ ಹೂಡಾ ಅವರು ಇಂಜುರಿಗೆ ಒಳಗಾಗಿದ್ದರು. ಹಾಗಾಗಿ ಅವರು ಈಗ ಎನ್.ಸಿ.ಎ ತಲುಪಿ ಇಂಜುರಿ ಇಂದ ಹೊರಬರಲು ತರಬೇತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ದೊರಕಿದೆ. ಇನ್ನು ಹೂಡಾ ಅವರ ಬದಲಾಗಿ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಸಿಗಬಹುದು ಎಂದು ಮಾಹಿತಿ ಸಿಕ್ಕಿದೆ.

ಪಂದ್ಯ ಶುರುವಾಗುವ ಸಮಯದಲ್ಲೇ ಈ ರೀತಿ ಆಗಿರುವುದು ಭಾರತಕ್ಕೆ ಮತ್ತೊಂದು ಸಂಕಷ್ಟದ ಪರಿಸ್ಥಿತಿ ತಂದಿದೆ. ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲು ಭಾರತ ತಂಡ ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇದು ಅಂತಿಮವಾದ ಅವಕಾಶ ಆಗಿದೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಬೌಲಿಂಗ್ ಸಮಸ್ಯೆ ಇತ್ತು, ಅದೆಲ್ಲವನ್ನು ಈಗ ಭಾರತ ತಂಡ ಬಗೆಹರಿಸಿಕೊಳ್ಳುತ್ತಾ ಎನ್ನುವುದು ಪಂದ್ಯಗಳು ಶುರುವಾದ ಬಳಿಕ ಗೊತ್ತಾಗಲಿದೆ. ಭಾರತ ತಂಡವು ಈಗಾಗಲೇ ಕೇರಳದಲ್ಲಿ ಅಭ್ಯಾಸ ಶುರುಮಾಡಿಕೊಂಡಿದೆ.

Comments are closed.