Neer Dose Karnataka
Take a fresh look at your lifestyle.

ಮೊನ್ನೆ ತಾನೇ ಕೆಎಲ್ ರಾಹುಲ್ ವಿರುದ್ಧ ಟೀಕೆ ಮಾಡಿದ್ದ ಗವಾಸ್ಕರ್: ಉಲ್ಟಾ ಹೊಡೆದು ಈಗ ರಾಹುಲ್ ಬಗ್ಗೆ ಹೇಳಿದ್ದೇನು ಗೊತ್ತೇ??

ಭಾರತ ತಂಡದಲ್ಲಿ ಮಿಂಚುತ್ತಿರುವ ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್, ಇವರು ಅದ್ಭುತವಾದ ಬ್ಯಾಟ್ಸ್ಮನ್ ಆಗಿ ಹೆಸರು ಮಾಡಿದ್ದರು, ಆದರೆ ಇಂಜುರಿ ಇಂದ ಬ್ರೇಕ್ ಪಡೆದು, ಭಾರತ ತಂಡಕ್ಕೆ ವಾಪಸ್ ಬಂದ ಬಳಿಕ ಕೆ.ಎಲ್.ರಾಹುಲ್ ಅವರು ಫಾರ್ಮ್ ಕಳೆದುಕೊಂಡಿದ್ದಾರೆ. ಏಷ್ಯಾಕಪ್ ಇಂದ ರಾಹುಲ್ ಅವರ ಪ್ರದರ್ಶನ ಚೆನ್ನಾಗಿಲ್ಲ, ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಇನ್ನು ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3ನೇ ನಿರ್ಣಾಯಕ ಪಂದ್ಯದಲ್ಲಿ, ರಾಹುಲ್ ಅವರು 1 ರನ್ ಗಳಿಸಿ ಔಟ್ ಆದರು, ಇದು ಬಹಳಷ್ಟು ಚರ್ಚೆಗೂ ಕಾರಣವಾಗಿದೆ. ಅಡರ್ರ್ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ರಾಹುಲ್ ಅವರ ಪರವಾಗಿ ಮಾತನಾಡಿದ್ದಾರೆ. “ರಾಹುಲ್ ಅವರಿಂದ ತಂಡ ಏನನ್ನು ನಿರೀಕ್ಷೆ ಮಾಡುತ್ತಿದೆಯೋ ಅದನ್ನೇ ಮಾಡುತ್ತಿದ್ದಾರೆ. ಏಷ್ಯಾಕಪ್ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು, ಎರಡನೇ ಪಂದ್ಯದಲ್ಲಿ 1 ರನ್ ಗೆ ಔಟ್ ಆದರು. ಏಕೆಂದರೆ ಅದು 8 ಓವರ್ ಗಳ ಪಂದ್ಯವಾಗಿತ್ತು, ಅದರಿಂದ ತಂದಕ್ಕಾಗಿ ತಮ್ಮ ವಿಕೆಟ್ ದಾನ ಮಾಡಿದರು..” ಎಂದಿದ್ದಾರೆ ಸುನೀಲ್ ಗವಾಸ್ಕರ್.

ಇಷ್ಟೇ ಅಲ್ಲದೇ, 3ನೇ ಪಂದ್ಯದಲ್ಲಿ ಒಂದು ಓವರ್ ಗೆ 9 ರನ್ ಗಿಂತ ಹೆಚ್ಚು ರನ್ ಗಳ ಅಗತ್ಯತೆ ಇತ್ತು. ಒಳ್ಳೆಯ ಆರಂಭ ಪಡೆಯಲೇಬೇಕಾದ ಒತ್ತಡದಲ್ಲಿದ್ದರು, ಆ ಕಾರಣದಿಂದಲೇ ಬಿಗ್ ಶಾಟ್ ಹೊಡೆಯಲು ಹೋಗಿ ರಾಹುಲ್ ಔಟ್ ಆದರು. ಕೋಹ್ಲಿ ಅವರಂತೆಯೇ ರಾಹುಲ್ ಅವರು ಸರಿಯಾದ ರೀತಿಯಲ್ಲಿ ಆಡಲು ಶುರು ಮಾಡಿದರೆ, ಇವರಿಬ್ಬರನ್ನು ಹಿಡಿಯಲು ಸಾಧ್ಯವಿಲ್ಲ. ಆದರೆ, ಬ್ಯಾಟ್ ಸ್ವಿಂಗ್ ಮತ್ತು ಕ್ರಾಡ್ ಬ್ಯಾಟರ್ ಶಾಟ್ ಹೊಡೆಯಲು ಪ್ರಯತ್ನಪಟ್ಟಾಗ ತೊಂದರೆಗೆ ಒಳಗಾಗುತ್ತಾರೆ. ಇದನ್ನು ತಪ್ಪಿಸಿದರೆ, ಹೆಚ್ಚು ರನ್ಸ್ ಗಳಿಸುತ್ತಾರೆ… ಎಂದು ಕೆ.ಎಲ್.ರಾಹುಲ್ ಅವರ ಬಗ್ಗೆ ಹೇಳಿದ್ದಾರೆ ಸುನೀಲ್ ಗವಾಸ್ಕರ್.

Comments are closed.