Neer Dose Karnataka
Take a fresh look at your lifestyle.

ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಮತ್ತೊಬ್ಬ ಆಟಗಾರನಿಗೆ ಇಂಜುರಿ. ಈ ಬಾರಿ ಯಾರಿಗೆ ಗೊತ್ತೇ??

ಟಿ20 ವಿಶ್ವಕಪ್ ಈಗಾಗಲೇ ಶುರುವಾಗಿದ್ದು , ಆಕ್ಟೊಬರ್ 23 ರಂದು ಪಾಕಿಸ್ತಾನ್ ವಿರುದ್ಧ ಆಡುವ ವಿಶ್ವಕಪ್ ನಲ್ಲಿ ಮೊದಲ ಪಂದ್ಯ ಆಡಲಿದೆ. ಪ್ರಸ್ತುತ ಭಾರತ ಸತತವಾಗಿ ಪ್ರಾಕ್ಟೀಸ್ ಗಳಲ್ಲಿ ಪಾಲ್ಗೊಳ್ಳುತ್ತಿದೆ. ಈ ಸಾರಿ ಭಾರತ ತಂಡದಲ್ಲಿ ಒಳ್ಳೆಯ ಆಟಗಾರರು ಇದ್ದರು ಸಹ, ಒಂದಲ್ಲ ಒಂದು ಸಮಸ್ಯೆ ಭಾರತ ತಂಡಕ್ಕೆ ಕಾಡುತ್ತಲೇ ಇದೆ.

ಅದರಲ್ಲೂ ಸದಸ್ಯರಿಗೆ ಇಂಜುರಿ ಸಮಸ್ಯೆ ತಂಡದ ಹೆಚ್ಚಿನವರಿಗೆ ಕಾಡುತ್ತಿದೆ. ಮೊನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಬ್ ಪಂತ್ ಅವರು ಮೊಣಕಾಲಿಗೆ ಐಸ್ ಪ್ಯಾಕ್ ಹಾಕಿ ಕುಳಿತಿದ್ದರು. ಮೊನ್ನೆ ನಡೆದ ಪಂದ್ಯದಲ್ಲಿ ಹೀಗೆ ಕುಳಿತಿದ್ದ ರಿಷಬ್ ಪಂತ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹಾಗಿದ್ರೆ ರಿಷಬ್ ಅವರಿಗೆ ನಿಜಕ್ಕೂ ಇಂಜುರಿ ಆಗಿದೆಯೇ ಎನ್ನುವ ಚರ್ಚೆ ಸಹ ಶುರುವಾಗಿದೆ. ರಿಷಬ್ ಅವರ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಫಿಟ್ ಆಗಿರುವ ಆಟಗಾರರು ಈ ರೀತಿ ಐಸ್ ಪ್ಯಾಕ್ ಇಟ್ಟುಕೊಂಡು ಕುಳಿತುಕೊಳ್ಳುವುದಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಜನರ ಅಭಿಪ್ರಾಯದ ಹಾಗೆ ರಿಷಬ್ ಪಂತ್ ಅವರ ಮೊಣಕಾಲಿಗೆ ಗಾಯ ಆಗಿದ್ದರೆ.

ಅದು ಭಾರತ ತಂಡಕ್ಕೆ ನಷ್ಟವಾಗುತ್ತದೆ. ಮೊನ್ನೆ ಬ್ರಿಸ್ಟನ್ ನಲ್ಲಿ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ರಿಷಬ್ ಅವರು ಆಡಲಿಲ್ಲ,.ತಂಡದಿಂದ ಹೊರಗೆ ಉಳಿದಿದ್ದರು, ರಿಷಬ್ ಪಂತ್ ಅವರಿಗೆ ಗಾಯ ಆಗಿರುವ್ ಕಾರಣದಿಂದಲೇ ಅವರು ಹೊರಗಿದ್ದಾರೆ ಎನ್ನುವ ಒಂದು ಚರ್ಚೆ ಸಹ ಶುರುವಾಗಿದೆ. ಹಾಗೊಂದು ವೇಳೆ ಇದು ನಿಜವೇ ಆಗಿದ್ದು,..

ರಿಷಬ್ ಪಂತ್ ಅವರು ಗಾಯದ ಕಾರಣದಿಂದ ಭಾರತ ತಂಡದಿಂದ ಹೊರಗುಳಿಯುವ ಆದರೆ ಭಾರತ ತಂಡಕ್ಕೆ ಇದು ಹಿನ್ನಡೆ ಆಗುತ್ತದೆ.. ಈಗಾಗಲೇ ನಮ್ಮ ತಂಡದಿಂದ ಇಂಜುರಿ ಕಾರಣದಿಂದಾಗಿ ಬಲಿಷ್ಠ ಆಟಗಾರರೆ ಹೊರಬಿದ್ದಿದ್ದಾರೆ, ಮೊದಲಿಗೆ ರವೀಂದ್ರ ಜಡೇಜಾ ಅವರು ಭಾರತ ತಂಡದಿಂದ ಹೊರಬಿದ್ದರು.

ನಂತರ ಜಸ್ಪ್ರೀತ್ ಬುಮ್ರ ಅವರು ಸಹ ಬೆನ್ನು ನೋವಿನ ಇಂಜುರಿ ಇಂದಾಗಿ ಹೊರಗುಳಿದಿದ್ದಾರೆ. ಇನ್ನು ದೀಪಕ್ ಚಹರ್ ಅವರಿಗೂ ಕೂಡ ಕಡೆಯ ಕ್ಷಣದಲ್ಲಿ ಆಂಕಲ್ ಇಂಜುರಿ ಆದ ಕಾರಣ ತಂಡದಿಂದ ಹೊರಗಿದ್ದಾರೆ. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಅವರು ಕೂಡ ಈಗ ಫಾರ್ಮ್ ನಲ್ಲಿ ಇಲ್ಲದೆ ಇರುವುದು ಭಾರತ ತಂಡಕ್ಕೆ ಸ್ವಲ್ಪ ಕಷ್ಟವೇ ಆಗಿದೆ.

ಮತ್ತೊಂದು ಕಡೆ ರಿಷಬ್ ಪಂತ್ ಅವರು ಕೂಡ ಈಗ ಒಳ್ಳೆಯ ಫಾರ್ಮ್ ನಲ್ಲಿ ಇರಲಿಲ್ಲ, ಏಷ್ಯಾಕಪ್ ಬಳಿಕ ರಿಷಬ್ ಅವೈರ್ಗೆ ಎಷ್ಟೇ ಅವಕಾಶ ಸಿಕ್ಕರೂ, ಅವರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆರಂಭಿಕನಾಗಿ ಕಣಕ್ಕೆ ಇಳಿಸಿದರು ಕೂಡ ಕಳಪೆ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ರಿಷಬ್ ಅವರನ್ನು ವಿಶ್ವಕಪ್ ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಸುವ ಪ್ಲಾನ್ ಮಾಡಿಕೊಳ್ಳಲಾಗಿತ್ತು.

ಆದರೆ ಈ ರೀತಿ ಆಗಿದೆ. ಪರಿಸ್ಥಿತಿ ಹೀಗಿರುವಾಗ, ರಿಷಬ್ ಪಂತ್ ಅವರಿಗೂ ಇಂಜುರಿ ಆಗಿ ಅವರು ಕೂಡ ಹೊರಗುಳಿದರೆ, ಭಾರತ ವಿಶ್ವಕಪ್ ಗೆಲ್ಲುವ ಕನಸು ಉತ್ಸಾಹಕ್ಕೆ ದೊಡ್ಡ ಪೆಟ್ಟು ಬಿದ್ದ ಹಾಗೆ ಆಗುತ್ತದೆ. ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲದೆ ಇರುವುದರಿಂದ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Comments are closed.