ಬಾಂಗ್ಲಾ ವಿರುದ್ಧ ಮಳೆ ಬಂದು ಮತ್ತೆ ಪಂದ್ಯ ಆರಂಭವಾದಾಗ, ಕನ್ನಡಿಗ ರಘು ಮಾಡಿದ್ದೇನು ಗೊತ್ತೇ?? ಭೇಷ್ ಎಂದ ನೆಟ್ಟಿಗರು.
ಒಂದು ಪಂದ್ಯ ಗೆಲ್ಲಬೇಕು ಎಂದರೆ ಮೈದಾನದ ಒಳಗೆ ಆಡುವ ಕ್ರಿಕೆಟಿಗರು ಮಾತ್ರವಲ್ಲ, ಹೊರಗೆ ಕೆಲಸ ಮಾಡುವ, ತಂದಕ್ಕಾಗಿ ಸಹಾಯ ಮಾಡುವ ಸಾಕಷ್ಟು ಜನರಿರುತ್ತಾರೆ. ಅವರೆಲ್ಲರ ಸಹಾಯ ದಿಂದಲೇ ಒಂದು ತಂಡ ಪಂದ್ಯವನ್ನು ಗೆಲ್ಲುತ್ತದೆ. ಅದೇ ನಿನ್ನೆ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ್ ಮ್ಯಾಚ್ ನಲ್ಲಿ ನಮ್ಮ ಕನ್ನಡಿಗ ಸೈಡ್ ಆರ್ಮ್ ಬೌಲರ್ ರಾಘವೇಂದ್ರ ಅವರು ಮಾಡಿರುವ ಅದೊಂದು ಕೆಲಸ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ, ಜೊತೆಗೆ ಈ ಅಳಿಲು ಸೇವೆ ತಂಡಕ್ಕೆ ಸಹಾಯ ಮಾಡಿದೆ. ನಿನ್ನೆ ಎರಡನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ್ ಬ್ಯಾಟಿಂಗ್ ಮಾಡುವಾಗ, 7ನೇ ಓವರ್ ಮುಕ್ತಾಯದ ಸಮಯಕ್ಕೆ ಮಳೆ ಶುರುವಾಗಿ, ಆಟಗಾರರು ಪೆವಿಲಿಯನ್ ಗೆ ತೆರಳಿದರು.
ಬಿರುಸಿನ ಮಳೆಯ ಕಾರಣ ಸ್ಟ್ರೇಡಿಯಂನಲ್ಲಿ ಹುಲ್ಲಿನಿಂದ ನೀರನ್ನು ಎಷ್ಟೇ ತೆಗೆದರು ಕಡಿಮೆ ಆಗುತ್ತಿರಲಿಲ್ಲ, ಸುಮಾರು ಒಂದು ಗಂಟೆ ಸಮಯ ಮ್ಯಾಚ್ ನಿಂತಿತ್ತು. ಈ ಸಮಯದಲ್ಲಿ ಭಾರತ ತಂಡದ ಸೈಡ್ ಆರ್ಮ್ throw ಬೌಲರ್ ರಾಘವೇಂದ್ರ ಅವರು ಮೈದಾನದ ಸುತ್ತ ಓಡಾಡಿ, ಆಟಗಾರರ ಕ್ರಿಕೆಟ್ ಶೂಗಳನ್ನು ಕ್ಲೀನ್ ಮಾಡಿದ್ದಾರೆ, ಮಳೆಯ ಕಾರಣ ಕೆಳಗೆ ಮುಳ್ಳಿರುವ ಆ ಶೂಗಳಲ್ಲಿ ಮಣ್ಣು ಅಂಟಿಕೊಂಡಿರುತ್ತದೆ, ಹಾಗೆ ಮುಂದುವರೆದರೆ ಆಟಗಾರರು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾಘವೇಂದ್ರ ಅವರು ಈ ರೀತಿ ಮಾಡಿದ್ದು, ಇವರು ಮಾಡಿರುವ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಈ ತೆರೆಯ ಹಿಂದಿನ ಹೀರೋ ಅನ್ನು ಹಾಡಿ ಹೊಗಳುತ್ತಿದ್ದಾರೆ.

ರಾಘವೇಂದ್ರ ಅವರು ಸೈಡ್ಡ ಆರ್ಮ್ throw ಬೌಲರ್ ಆಗಿ ಟೀಮ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮೂಲತಃ ಕರ್ನಾಟಕದವರು, ಕನ್ನಡಿಗರು. ಬ್ಯಾಟ್ಸ್ಮನ್ ಗಳು ಗಂಟೆಗಟ್ಟಲೆ ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ ಇವರ ಸಹಾಯ ಹೆಚ್ಚಾಗಿರುತ್ತದೆ. ರಾಘವೇಂದ್ರ ಅವರು ಮಾಡಿದ ಈ ಒಳ್ಳೆಯ ಕೆಲಸದಿಂದ ನಮ್ಮ ಆಟಗಾರರು ಮಳೆಯ ಬಳಿಕ ಮೈದಾನಕ್ಕೆ ಹೋದಾಗ, ಅಲ್ಲಿ ಅವರಿಗೆ ಯಾವುದೇ ತೊಂದರೆ ಆಗಲಿಲ್ಲ. ಮಳೆ ನಂತರ ಏಕಾಗ್ರತೆ ಕಳೆದುಕೊಂಡ ಬಾಂಗ್ಲಾದೇಶ್ ತಂಡ, ನಿನ್ನೆಯ ಪಂದ್ಯದಲ್ಲಿ ಸೋತಿತು. ಭಾರತ ತಂಡ ಗೆದ್ದಿತು.