Neer Dose Karnataka
Take a fresh look at your lifestyle.

ಜಿಂಬಾಬ್ವೆ ದೇಶದವರಿಗೆ ಭರ್ಜರಿ ಆಫರ್ ಕೊಟ್ಟ ಪಾಕ್ ನಟಿ: ಭಾರತದ ವಿರುದ್ಧ ಜಿಂಬಾಬ್ವೆ ಗೆದ್ದರೆ ಏನು ಮಾಡುತ್ತಾರಂತೆ ಗೊತ್ತೇ??

ಆಸ್ಟೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ, ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು, ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದೆ. ಸೂಪರ್ 12 ಹಂತದಲ್ಲಿ ಭಾರತ ತಂಡದ ಮುಂದಿನ ಪಂದ್ಯ ಮತ್ತು ಕೊನೆಯ ಪಂದ್ಯ ನವೆಂಬರ್ 6ರಂದು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದಿರಿಸಿಕೊಳ್ಳಲಿದೆ. ಇತ್ತ ಪಾಕಿಸ್ತಾನ್ ತಂಡ ಮುಗ್ಗರಿಸಿ ಬಿದ್ದಿದೆ. ಭಾರತ ತಂಡದ ವಿರುದ್ಧ ಮತ್ತು ಜಿಂಬಾಬ್ವೆ ವಿರುದ್ಧ ಸೋತ ಪಾಕಿಸ್ತಾನ್ ತಂಡ ಸೆಮಿ ಫೈನಲ್ಸ್ ತಲುಪುವ ಹಾದಿ ಕಷ್ಟವಾಗಿದೆ.

ಪಾಕಿಸ್ತಾನ್ ಸೆಮಿ ಫೈನಲ್ಸ್ ತಲುಪಬೇಕು ಎಂದರೆ, ಬೇರೆ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ಇತ್ತ ನಮ್ಮ ಭಾರತ ತಂಡ 3 ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ಸ್ ನ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಭಾರತ ತಂಡ ಮುಂದಕ್ಕೆ ಏರುತ್ತಿರುವಾಗ ಸದಾ ಭಾರತ ತಂಡವನ್ನು ಕೆಣಕುವ ಪಾಕಿಸ್ತಾನಿ ನಟಿ ಸೆಹರ್ ಸಿನ್ವರ್ ಇದೀಗ ಜಿಂಬಾಬ್ವೆ ತಂಡಕ್ಕೆ ಹೊಸ ಸವಾಲು ಹಾಕಿದ್ದಾರೆ, ಜಿಂಬಾಬ್ವೆ ಭಾರತ ತಂಡದ ವಿರುದ್ಧ ಗೆದ್ದರೆ, ಬಂಪರ್ ಆಫರ್ ನೀಡಿದ್ದಾರೆ. “ಒಂದು ವೇಳೆ ಭಾರತದ ವಿರುದ್ಧ ಜಿಂಬಾಬ್ವೆ ಗೆದ್ದರೆ, ಜಿಂಬಾಬ್ವೆಯ ಹುಡುಗನನ್ನೇ ಮದುವೆ ಆಗುತ್ತೇನೆ..” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದೆ.

ಭಾರತ ತಂಡದ ಅಭಿಮಾನಿಗಳು, ನೆಟ್ಟಿಗರು, ಈಕೆಯನ್ನು ಟೀಕೆ ಮಾಡುತ್ತಿದ್ದಾರೆ. ಪಾಪ ಮದುವೆ ಆಗದೆ ಇಡೀ ಜೀವನ ಉಳಿಯುವ ಹಾಗೆ ಆಗುತ್ತದೆ ಎನ್ನುತ್ತಿದ್ದಾರೆ. ಈ ಪಾಕಿಸ್ತಾನ್ ನಟಿ ಭಾರತ ತಂಡವನ್ನು ಕೆಣಕುತ್ತಿರುವುದು ಇದೇ ಮೊದಲಲ್ಲ, ಅನೇಕ ಬಾರಿ ಭಾರತ ತಂಡವನ್ನು ಟೀಕೆ ಮಾಡಿದ್ದಾರೆ, ಕಳೆದ ಬಾರಿ ಬಾಂಗ್ಲಾದೇಶ್ ಮತ್ತು ಭಾರತ ತಂಡದ ಪಂದ್ಯದಲ್ಲಿ ಸಹ ಹೀಗೆಯೇ ಟೀಕೆ ಮಾಡಿದ್ದರು. ಇದೀಗ ಮತ್ತೊಮ್ಮೆ ಟೀಕೆ ಮಾಡಿದ್ದು, 6ನೇ ತಾರೀಕು ನಡೆಯುವ ಪಂದ್ಯದಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Comments are closed.