Neer Dose Karnataka
Take a fresh look at your lifestyle.

ದಿನೇಶ್ ಕಾರ್ತಿಕ್ ರವರ ಕ್ರಿಕೆಟ್ ಜೀವನಕ್ಕೆ ಹೊಸ ವಿಲ್ಲನ್ ಆದ ಕೊಹ್ಲಿ; DK ಕ್ರಿಕೆಟ್ ಜೀವನವನ್ನೇ ಮುಗಿಸಿಬಿಟ್ಟ ಕೊಹ್ಲಿ ಎಂದ ನೆಟ್ಟಿಗರು. ಯಾಕೆ ಅಂತೇ ಗೊತ್ತೇ??

ಈ ವರ್ಷ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಲ್ ರೌಂಡರ್ ಆಗಿ ಅದ್ಭುತ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ ಅವರು ಭಾರತ ತಂಡಕ್ಕೆ ಮೂರು ವರ್ಷಗಳ ಬಳಿಕ ಸೆಲೆಕ್ಟ್ ಆದರು, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ನಂತರ ಕಾರ್ತಿಕ್ ಅವರು ಟಿ20 ವಿಶ್ವಕಪ್ ಗು ಆಯ್ಕೆಯಾದರು. ಆದರೆ ಕಾರ್ತಿಕ್ ಅವರು ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ರಿಷಬ್ ಪಂತ್ ಅವರ ಬದಲಾಗಿ ಕಾರ್ತಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲ ಮೂರು ಪಂದ್ಯದಲ್ಲಿ ಬೇಗ ಔಟ್ ಅದ ಕಾರ್ತಿಕ್ ಅವರಿಗೆ ನಾಲ್ಕನೇ ಪಂದ್ಯದಲ್ಲಿ ಉತ್ತಮ ಅವಕಾಶ ಸಿಕ್ಕರು ಕೂಡ ಕಾರಣಾಂತರಗಳಿಂದ ಕೈಚೆಲ್ಲುವ ಹಾಗಾಯಿತು.

ವಿರಾಟ್ ಕೊಹ್ಲಿ ಅವರೊಡನೆ ಬ್ಯಾಟಿಂಗ್ ಶುರು ಮಾಡಿದ ದಿನೇಶ್ ಕಾರ್ತಿಕ್ ಅವರು ಆರಂಭದಲ್ಲೇ ಬೌಂಡರಿ ಭಾರಿಸಿ ಒಳ್ಳೆಯ ಸ್ಟಾರ್ಟ್ ಪಡೆದುಕೊಂಡರು ಆದರೆ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಿಯೇ ನೆಲೆಯೂರಿ ಉತ್ತಮ ಪ್ರದರ್ಶನ ಕೊಡಬೇಕು ಎಂದುಕೊಂಡಿದ್ದ ಡಿಕೆ ಅವರು, ವಿರಾಟ್ ಕೋಹ್ಲಿ ಅವರು ಸರಿಯಾಗಿ ಕಮ್ಯುನಿಕೇಟ್ ಮಾಡದ ಕಾರಣ ರನ್ ಔಟ್ ಆದರು. ಇದನ್ನು ಸರಿ ಇಲ್ಲವೇನೋ ಎಂದು ಎರಡನೇ ಸಾರಿ ಚೆಕ್ ಮಾಡಿದಾಗಲು ಕೂಡ ದಿನೇಶ್ ಕಾರ್ತಿಕ್ ಅವರು ರನ್ ಔಟ್ ಆಗಿರುವುದು ಸಾಬೀತಾಯಿತು..ಇದರಿಂದ ನಿರಾಶೆಯಿಂದಲೇ ಕ್ರೀಸ್ ಇಂದ ಹೊರನಡೆದರು, ಹೀಗಾಗಿದ್ದಕ್ಕೆ ವಿರಾಟ್ ಅವರು ಕೂಡ ಬೇಸರ ಪಟ್ಟುಕೊಂಡರು.

ಆದರೆ ನೆಟ್ಟಿಗರು ಟ್ವಿಟರ್ ನಲ್ಲಿ ವಿರಾಟ್ ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ, ವಿರಾಟ್ ಅವರಿಂದ ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನ ಕೊನೆಯಯಾಯಿತು ಎನ್ನುತ್ತಿದ್ದಾರೆ. “ವಿರಾಟ್ ಕೋಹ್ಲಿ ದಿನೇಶ್ ಕಾರ್ತಿಕ್ ಅವರ ಕೆರಿಯರ್ ಕೊನೆಗೊಳಿಸಿದರು. ಥ್ಯಾಂಕ್ ಯು ಡಿಕೆ..” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು, “ನಿಜ, ಆದರೆ ಇದು ಡಿಕೆ ಅವರ ದಾರಿಯ ಕೊನೆಯಾಗುವುದು ಬೇಡ.. ಆ ರೀತಿ ವಾಪಸ್ ಓಡಿದ್ದಕ್ಕೆ ವಿರಾಟ್ ಕೂಡ ಗಿಲ್ಟಿ ಆಗಿದ್ದಾರೆ..” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಅಂಪೈರ್ ಮತ್ತೊಮ್ಮೆ ಈ ರನ್ ಔಟ್ ಅನ್ನು ಚೆಕ್ ಮಾಡಬೇಕಿತ್ತು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಹೀಗೆ ವಿರಾಟ್ ಕೋಹ್ಲಿ ಅವರ ವಿರುದ್ಧ ಟ್ವಿಟರ್ ವಾರ್ ನಡೆಯುತ್ತಿದೆ.

Comments are closed.